ಅಭಿಮಾನಿಗಳ ಮಧ್ಯೆ ವೀರಂ ಟ್ರೈಲರ್ ಬಿಡುಗಡೆ
ನಿರ್ಮಾಪಕ ಕೆ.ಎಂ. ಶಶಿಧರ್ ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂರನೇ ಪ್ರಾಜೆಕ್ಟ್ ಆಗಿ ಎಮೋಷನಲ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ವೀರಂ ಚಿತ್ರವನ್ನು ನಿರ್ಮಿಸಿದ್ದಾರೆ, ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಚಿತ್ರದ ನಂತರ ಈಗ ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ.
ಪ್ರಜ್ವಲ್ ದೇವರಾಜ್, ರಚಿತಾರಾಮ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಪ್ರಸನ್ನ ಥಿಯೇಟರ್‌ನಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ನಡುವೆ ನೆರವೇರಿತು. ಖದರ್ ಕುಮಾರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಏಪ್ರಿಲ್ 7ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹಿರಿಯನಟ ದೇವರಾಜ್ ಅವರು ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಥೇಟರ್‌ನಲ್ಲಿ ಟ್ರೈಲರ್ ನೋಡಿದ್ದು ನನಗೆ ಮೊದಲ ಅನುಭವ, ಜನರ ಕೂಗಾಟ, ಚಪ್ಪಾಳೆ ಕೇಳಿ ತುಂಬಾ ಖುಷಿಯಾಯ್ತು ಎಂದು ಹೇಳಿದರು. ನಟ ಶೃತಿ ಮಾತನಾಡಿ ಇವರೆಲ್ಲ ಸಿನಿಮಾನ ಪ್ರೀತಿಸುವಂಥ ಜನ, ಚಪ್ಪಾಳೆ ಶಿಳ್ಳೆ ಇದನ್ನೆಲ್ಲ ಬಹಳ ದಿನಗಳ ನಂತರ ನೋಡಿ ಖುಷಿಯಾಯ್ತು. ಸಿನಿಮಾದಲ್ಲಿರುವ ಹೋರಾಟ, ಸಾಹಸ ಜನರಿಗೆ ತಲುಪಬೇಕು, ಈ ಸಿನಿಮಾ ನನಗೆ ತುಂಬಾ ವಿಶೇಷ, ಏಕೆಂದರೆ ನಾನು ವಿಷ್ಣು ಸರ್ ಅಭಿಮಾನಿಯಾಗಿಯೇ ಬಂದವಳು, ಇದರಲ್ಲೂ ಅದೇಥರದ ಪಾತ್ರವಿದೆ, ಫಸ್ಟ್ ಟೈಮ್ ಪ್ರಜ್ವಲ್ ಅವರ ಅಭಿನಯ ನೋಡಿ ಕಣ್ಣಲ್ಲಿ ನೀರುಬಂತು, ಸಾಮಾನ್ಯವಾಗಿ ನಾನು ಡಬ್ಬಿಂಗ್ ಮಾಡುವಾಗ, ನನ್ನ ಪಾತ್ರನೋಡಿ ನಾನೇ ನಗುತ್ತೇನೆ. ಈಗ ಎಲ್ಲಾಕಡೆ ಪ್ಯಾನ್ ಇಂಡಿಯಾ ಬಂದಿದೆ, ಆದರೆ ಫ್ಯಾನ್ಸ್ ಇಂಡಿಯಾ ಸಿನಿಮಾ ಇರುವುದು ಕರ್ನಾಟಕದಲ್ಲಿ ಮಾತ್ರ. ಅವರ ಶಿಳ್ಳೆ, ಕೇಕೆಯೇ ಕಲಾವಿದರಿಗೆ ಖುಷಿ ಎಂದರು.
ಶ್ರೀನಗರಕಿಟ್ಟಿ ಮಾತನಾಡಿ ವಿಷ್ಣು ದಾದಾ ಅವರ ಸವಿನೆನಪಿನಲ್ಲಿ ಈ ಚಿತ್ರ ಏ,೭ಕ್ಕೆ ರಿಲೀಸಾಗುತ್ತಿದೆ. ಒಂದು ಸಿನಿಮಾನ ತೆರೆಯಮೇಲೆ ತಂದು ನಿಲ್ಲಿಸುವುದರ ಕಷ್ಟ ಆ ನಿರ್ಮಾಪಕನಿಗಷ್ಟೇ ಗೊತ್ತು ಎಂದರು.
ನಿರ್ಮಾಪಕ ಶಶಿಧರ್ ಮಾತನಾಡಿ, ಈ ಸಿನಿಮಾ ನಿಂತೋಯ್ತು, ಆಗೋದೇ ಇಲ್ಲ ಎಂದು ಕೆಲವರು ಹೇಳಿದ್ದರು, ಅವರಿಗೆಲ್ಲ ಏ.೭ರಂದು ಸಿನಿಮಾ ತೋರಿಸುತ್ತೇನೆ. ಎಮೋಷನಲ್ ಥ್ರಿಲ್ಲರ್ ಡ್ರಾಮಾ ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಮೂವೀ ಇದಾಗಿದ್ದು, ಸೆಕೆಂಡ್ ಹಾಫ್‌ನಲ್ಲಿ ಥ್ರಿಲ್ಲರ್ ಕಥೆಯಿದೆ. ಶಿಶ್ಯ ದೀಪಕ್‌ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಿದ್ದೇವೆ, ವಿಷ್ಣು ಫ್ಯಾನ್ಸ್ಗೆ ಚಿತ್ರ ತುಂಬಾನೇ ಇಷ್ಟವಾಗುತ್ತದೆ, ಚಿತ್ರವನ್ನು ವಿಷ್ಣು ಅವರಿಗೇ ಅರ್ಪಣೆ ಮಾಡಿದ್ದೇವೆ ಎಂದರು,
ನಿರ್ದೇಶಕ ಖದರ್‌ಕುಮಾರ್ ಮಾತನಾಡಿ ನಾನು ಚಿಕ್ಕವನಿದ್ದಾಗ ವಿಷ್ಣು ಅವರ ದಾದಾ ಚಿತ್ರವನ್ನು ೨.೭೫ ರೂ, ಕೊಟ್ಟು ಇಲ್ಲೇ ನೋಡಿದ್ದೆ, ಈಗ ಇದೇ ಚಿತ್ರಮಂದಿರದಲ್ಲಿ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ, ಚಿತ್ರದಲ್ಲಿ ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವೇ ಇದೆ ಎಂದು ಹೇಳಿದರು.
ನಾಯಕ ಪ್ರಜ್ವಲ್ ಮಾತನಾಡಿ ನಾನು ಹೋದ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೆ ಅಂತ ಕಾಣಿಸುತ್ತೆ, ಇಂಥ ತಂದೆ ತಾಯಿ ಪಡೆದ ನಾನೇ ಧನ್ಯ, ಆರಂಭದಲ್ಲಿ ನಿರ್ಮಾಪಕ, ನಿರ್ದೇಶಕರು ನನ್ನ ಬಳಿ ಬಂದಾಗ ಅವರ ಕಣ್ನಲ್ಲಿ ಒಂದು ಕನಸಿತ್ತು. ಕಿಟ್ಟಣ್ಣ ಕೂಡ ನನ್ನ ಜೊತೆ ಅಂದಕೂಡಲೇ ಕಥೆಕೇಳದೆ ಒಪ್ಪಿಕೊಂಡರು. ದಾದಾ ಅವರ ಅಚ್ಚೆ ಕೈಮೇಲೆ ಹಾಕಿಕೊಂಡು ಆಕ್ಟ್ ಮಾಡಲು ತುಂಬಾ ಖುಷಿಯಾಗಿತ್ತು. ನನ್ನ ದೊಡ್ಡ ಪವರ್ ಅಂದ್ರೆ ನನ್ನ ಅಭಿಮಾನಿಗಳು, ಮತ್ತೊಂದುಕಡೆ ನನ್ನ ಕುಟುಂಬ ಎಂದು ಹೇಳಿದರು.
ಖಳನಟನಾಗಿ ಕಾಣಿಸಿಕೊಂಡಿರುವ ಶಿಶ್ಯ ದೀಪಕ್ ಮಾತನಾಡುತ್ತ ಈ ಪಾತ್ರವನ್ನು ನಾನು ಅನುಭವಿಸಿ ಮಾಡಿದ್ದೇನೆ. ನಿರ್ಮಾಪಕರು ನನ್ನ ಬಗ್ಗೆ ಬಹಳಷ್ಟು ಜನ ನೆಗೆಟಿವ್ ಮಾತಾಡಿದರೂ ಅದನ್ನು ಲೆಕ್ಕಿಸದೆ ನನಗೆ ಸಪೋರ್ಟ್ ಮಾಡಿದರು. ಶಿಶ್ಯ ದೀಪಕ್‌ನನ್ನು ಜೇಡ ದೀಪಕ್ ಮಾಡಿದ್ದಾರೆ ಎಂದು ಗಗ್ಗದಿತರಾದರು, ಅನೂಪ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿದೆ,