ಅಭಿಷೇಕ್ ಅಂಬರೀಷ್- ಅವೀವಾ ಮೆಹಂದಿ ಕಾರ್ಯಕ್ರಮ: ಚಿತ್ರರಂಗದ ತಾರೆಯರು ಭಾಗಿ
ರೆಬೆಲ್ ಸ್ಟಾರ್ ಅಂಬರೀಷ್ ಹಾಗು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಸಕಲ ರೀತಿಯಲ್ಲಿ ಸಿದ್ದತೆ ನಡೆದಿದೆ. ನಾಳೆ ಅವೀವಾ ಬಿದ್ದಪ್ಪ ಅವರೊಂದಿಗೆ ಅಭಿಷೇಕ್ ಅಂಬರೀಷ್ ಹೊಸ ಇನ್ಸಿಂಗ್ಸ್ ಆರಂಭಿಸಲಿದ್ದಾರೆ.
ವಿವಾಹದ ಹಿನ್ನೆಲೆಯಲ್ಲಿ ಅಂಬರೀಷ್ ಅವರ ನಿವಾದಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಿತು.ನಟ ಅಭಿಷೇಕ್ ಅವರು ತಮ್ಮ ಅಂಗೈನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್, ಸುಮಲತಾ ಅಂಬರೀಷ್, ಬಾವಿ ಪತ್ನಿ ಅವೀವಾ ಮತ್ತು ಮಂಡ್ಯದ ಹೆಸರನ್ನು ಹಾಕಿಸಿಕೊಂಡು ಪ್ರೀತಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಪ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರ ಅವೀವಾ ಬಿದ್ದಪ್ಪ ಅವರೊಂದಿಗೆ ಅಭಿಷೇಕ್ ಮದುವೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು, ಚಿತ್ರರಂಗದ ಕೆಲ ಆಪ್ತರ ಸಮ್ಮುಖದಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಿತು.ಹಿರಿಯ ನಟಿ ಪ್ರಿಯಾಂಕ ಉಪೇಂದ್ರ, ನಟ ಪ್ರಜ್ಚಲ್ ದೇವರಾಜ್, ಪತ್ನಿ ರಾಗಿಣಿ, ನಟಿ ಮೇಘನಾ ರಾಜ್ ಸೇರಿದಂತೆ ಅನೇಕ ಆಪ್ತರು ಭಾಗಿಯಾಗಿದ್ದರು.
ನಟ ಅಭಿಷೇಕ್ ಅಂಬರೀಷ್ ಮದುವೆ ನಾಳೆ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಾಳೆ ನಡೆಯಲಿದೆ. ಜೂನ್ 7 ರಂದು ಚಿತ್ರರಂಗದ ಮಂದಿಗೆ ಆರತಕ್ಷತೆಯನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜೂ,11 ರಂದು ಮಂಡ್ಯದಲ್ಲಿ ಅಭಿಮಾನಿಗಳಿಗಾಗಿ ಬೀಗರ ಔತಣ ಕೂಟ ಆಯೋಜಿಸಲಾಗಿದೆ.