ಉತ್ಸಾಹಿ ಯುವಕರ ಮೊದಲ ಮಳೆ
ಯುವ ಉತ್ಸಾಹಿ ಯುವಕರ ತಂಡ ಸೇರಿದಕೊಂಡು “ಮೊದಲ ಮಳೆ” ಚಿತ್ರವನ್ನು ಸದ್ದುಗದ್ದವಿಲ್ಲದೆ ಚಿತ್ರೀಕರಣ ನಡೆಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ.ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಯ ಮೇಲೆ ಬರಲಿದೆ.
ಶರಣ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ರಾಜಾ ನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಹಿತ್ಯ ಪ್ರಕಾಶ್, ಪೂಜಾ ರಾಮಚಂದ್ರ, ಶೈಲಾಜಾ ಸಿಂಹ, ಮಮತಾ ಗೌಡ,ಪ್ರಿಯಾ ಶೆಟ್ಟಿ, ಅಂಜಲಿ, ಉಷಾ, ಭೂಮಿಕಾ, ಲಕ್ಷ್ಮಿ ಸೇರಿ 9 ನಾಯಕಿಯರು ಕಾಣಿಸಿಕೊಂಡಿರುವುದು ವಿಶೇಷ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಶರಣ್ ರಾಜ್.ಮಡಿಕೇರಿ, ಚಿಕ್ಕಮಗಳೂರು,ಸಕಲೇಶಪುರ, ಮೂಡಿಗೆರೆ, ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ನಾಯಕನಿಗೆ 30 ವರ್ಷ ಆಗಿದ್ದರೂ ಮದುವೆಯಾಗಿರುವುದಿಲ್ಲ, ಹುಡುಗಿ ಹುಡುಕಲೆಂದೇ 30 ಎಕರೆ ಜಮೀನು ಕಳೆದುಕೊಂಡವ. ಹುಡಗಿಯ ಹುಟಕಾಟದಲ್ಲಿದ್ದಾರೆ ಬೆಂಗಳೂರಿಗೆ ಬಂದಾಗ ನಡೆಯುವ ತಿರುವು ಚಇತ್ರದ ಹುಡುಕಾಟ ಎಂದು ಮಾಹಿತಿ ಹಂಚಿಕೊಂಡರು.
ಮೊದಲ ಮಳೆಗೂ ನಾಯಕನಿಗೂ ಸಂಬಂಧವಿರುತ್ತದೆ ಅದು ಏನು ಎನ್ನುವುದು ಚಿತ್ರ ತಿರುಳು ಎಂದು ಮಾಹಿತಿ ಹಂಚಿಕೊಂಡರು.
ನಟ ರಾಜಾ ನರಸಿಂಹ, ಕಾರ್ಪರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಡುವಿನ ವೇಳೆ ಚಿತ್ರೀಕರಣ ಮಾಡಿದ್ದೇವೆ.ಕೊರಟಗೆ ತಾಲ್ಲೂಕಿನ ಹಳ್ಳಿಯಿಂದ ಬಂದ ಹುಡುಗ ನಾಯಕನಾಗುವುದು ಸುಲಭದ ಮಾತಲ್ಲ,ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ ನೋಡಿ ಹರಿಸಿ ಎಂದರು
ಗಣೇಶ್ ರಾವ್ ಕೇಸರ್ ಕರ್,ಸುಚೇಂದ್ರ ಪ್ರಸಾದ್, ಜ್ಯೋತಿ ಮುರೂರು, ಕರಿಸುಬ್ಬು ಸೇರಿದಂರೆ ದೊಡ್ಡ ಬಳಗವಿದೆ.
ಚಿತ್ರವನ್ನು ರಮೇಶ್ ಎಚ್.ಎಲ್ ಹಾಗು ರಾಜಾ ನರಸಿಂಹ ನಿರ್ಮಾಣ ಮಾಡಿದ್ದಾರೆ.