“ಗಗನ ಕುಸುಮ” ಚಿತ್ರದ ಹಾಡು ಬಿಡುಗಡೆ ಮಾಡಿದ ನಿರ್ಮಾಪಕ ಚಿನ್ನೇಗೌಡ

“ಗಗನ ಕುಸುಮ” ಚಿತ್ರದ ಹಾಡು ಬಿಡುಗಡೆ ಮಾಡಿದ ನಿರ್ಮಾಪಕ ಚಿನ್ನೇಗೌಡ - CineNewsKannada.com

“ಗಗನ ಕುಸುಮ” ಚಿತ್ರದ ಹಾಡು ಬಿಡುಗಡೆ ಮಾಡಿದ ನಿರ್ಮಾಪಕ ಚಿನ್ನೇಗೌಡ

‘ಗಗನ ಕುಸುಮ’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಅನ್ನು ಹಿರಿಯ ನಿರ್ಮಾಪಕ ಮತ್ತು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ

ಎಸ್.ಎಸ್.ಕ್ರಿಯೇಶನ್ಸ್ ಅಡಿಯಲ್ಲಿ ಆರ್.ಶೇಖರನ್ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಗೇಂದ್ರ ಕುಮಾರ್ ಜೈನ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ಸಣ್ಣ ರೋಲ್‍ದಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್ ಎ ಚಿನ್ನೇಗೌಡ ಮಾತನಾಡಿ ,ನಿರ್ಮಾಪಕ ಹುಟ್ಟಿಕೊಂಡರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಮೊದಲು ಅವರು ಉಳಿಯಬೇಕು. ಟೈಟಲ್ ಚೆನ್ನಾಗಿದೆ. ಸಿನಿಮಾವು ಯಶಸ್ಸು ಗಳಿಸಲಿ ಅಂತ ಶುಭ ಹಾರೈಸಿದರು.

ನಟ,ನಿರ್ದೇಶಕ ನಿಖಿಲ್ ಮಂಜು ಮಾತನಾಡಿ ಚಿತ್ರರಂಗದಲ್ಲಿ ನಡೆಯುತ್ತಿರುವ ಎರಡು ಸತ್ಯಗಳನ್ನು ತೆರೆದಿಟ್ಟು, ಸದ್ಯದ ಪರಿಸ್ಥಿತಿಯಲ್ಲಿ ಶಕ್ತಿಯಾಗಿ ಪರ್ಯಾಯ ಸಿನಿಮಾಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ನಾಗೇಂದ್ರ ಕುಮಾರ್ ಜೈನ್ ಮಾತನಾಡಿ ಸಿನಿಮಾದೊಳಗೊಂದು ಸಿನಿಮಾದ ಕಥೆ ಹೇಳಲಾಗಿದೆ. ಅಂದು ಚಿತ್ರಗಳ ಕೆಲಸ ನಡೆಯುತ್ತಿದ್ದ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರ ವರ್ತನೆಗಳನ್ನು ನೋಡಿ ಅದನ್ನೆ ಚಿತ್ರಕತೆಗೆ ಬಳಸಲಾಗಿದೆ. ನಾಯಕಿಯ ಧೋರಣೆಗೆ ಬೇಸತ್ತ ನಿರ್ದೇಶಕ ಹಳ್ಳಿಯ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಮಾಡಿ ಹೇಗೆ ಯಶಸ್ಸು ಗಳಿಸುತ್ತಾನೆ ಎನ್ನುವುದು ಕಥಾ ಹಂದರ. ಚಿತ್ರದಲ್ಲಿ ವೈನ್, ವುಮೆನ್, ವೆಲ್ತ್ ಬಳಸದೆ ಇರುವುದು ವಿಶೇಷ ಎಂದರು.

ತಾರಾಗಣದಲ್ಲಿ ಎಸ್.ಕೆ.ಪ್ರಕಾಶ್ ಸಣ್ಣಕ್ಕಿ, ದಿನೇಶ್‍ಗೌಡ, ಕಾವ್ಯಪ್ರಕಾಶ್, ಆಶಾ, ಹರಣಿನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ನಿವೇದ್, ಛಾಯಾಗ್ರಹಣ ಸೂರ್ಯೋದಯ, ಸಂಕಲನ ಅಭಿಷೇಕ್‍ಯೋಗಿ, ನೃತ್ಯ ರಾಜ್‍ದೇವ್ ಅವರದಾಗಿದೆ. ನವೆಂಬೆರ್ ವೇಳಗೆ ಚಿತ್ರ ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin