ಚಂದನವನಕ್ಕೆ ಖಡಕ್ ವಿಲನ್ “ಭರತ್‍ಚುಗ್ ” ಎಂಟ್ರಿ
ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಅರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ದೆಹಲಿ ಮೂಲದ ಭರತ್‍ಚುಗ್ ಸೇರ್ಪಡೆಯಾಗುತ್ತಾರೆ. ಪ್ರಖ್ಯಾತ ಉದ್ಯಮಿಯಾಗಿ ಯಶಸ್ಸು ಕಂಡು, ಈಗ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಸದ್ಯ ಹೊಸ ಸಿನಿಮಾ ‘ಬಿಲ್ಲಿ’ದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೃಢಕಾಯ ಶರೀರ, ಬೆಂಕಿ ಉಗುಳುವ ಕಣ್ಣುಗಳು ಹಾಗೂ ತನ್ನದೆ ವಿಭಿನ್ನ ಅಭಿನಯದಿಂದ ಪೋಸ್ಟರ್ ನಲ್ಲಿ ಗಮನ ಸೆಳೆದಿದ್ದಾರೆ. ಇನ್ನು ‘ಬಿಲ್ಲಿ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಮಿಂಚಿದ್ದಾರೆ.
ಗಣಿದೇವ್ ಕಾರ್ಕಳ ಕಥೆ,ಚಿತ್ರಕಥೆ ಬರೆದು ಸಂಗೀತ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಅರ್ಜುನ್‍ಶೋರ್ಯ, ಕಾಂತಾರ ಖ್ಯಾತಿಯ ಸತೀಶ್‍ಪೆರ್ಡೂರ್, ಪ್ರಭಾಕರ್‍ಕುಂದರ್, ವಿಕ್ರಾಂತ್‍ರೋಣ ಖ್ಯಾತಿಯ ರಮೇಶ್‍ರೈ ಕುಕ್ಕುವಳ್ಳಿ, ಸಂದೀಪ್ ಮಲಾನಿ ಸೇರಿದಂತೆ ಹಲವು ದೊಡ್ಡ ಕಲಾವಿದರು ಇರುವುದು ವಿಶೇಷ.
ಭೂಗತ ಲೋಕದ ಅಂಶಗಳನ್ನು ಒಳಗೊಂಡಿದ್ದು, ಕರಾವಳಿ ಭಾಗದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಟೀಸರ್ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.