Chinnari Mutta Vijay Raghavendra Now "Rippan Swamy"

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈಗ “ರಿಪ್ಪನ್ ಸ್ವಾಮಿ” - CineNewsKannada.com

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈಗ “ರಿಪ್ಪನ್ ಸ್ವಾಮಿ”

ಪಂಚಾಂನನ ಫಿಲಂಸ್ ನಿರ್ಮಾಣದ ,ಕಿಶೋರ್ ಮೂಡುಬಿದ್ರೆ ನಿರ್ದೇಶನದ “ರಿಪ್ಪನ್ ಸ್ವಾಮಿ” ಕನ್ನಡ ಸಿನಿಮಾದ ಫಸ್ಟ್ ಲುಕ್ ಪೆÇೀಸ್ಟರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ನಟ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರರ ಮುಖ್ಯ ತಾರಾಗಣದಲ್ಲಿ ಇರುವ ಈ ಸಿನಿಮಾ ಈ ಹಿಂದೆ ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ತಾರಾಗಣದಲ್ಲಿ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿ ನಾಡು ,ವಜ್ರದೀರ್ ಜೈನ್ ,ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಮುಂತಾದವರು ಇದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ ಕಳಸ ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ.

ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ನೀಡುತ್ತಿದ್ದಾರೆ. ರಂಗನಾಥ್ ಸಿ ಎಂ ಕ್ಯಾಮರಾ ಹಿಡಿದಿದ್ದಾರೆ. ಸಿನಿಮಾ ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ .ಪಂಚಾನನ ಫಿಲಂಸ್ ನ ಮೊದಲನೇ ಸಿನಿಮಾ ಇದಾಗಿದೆ .ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿ ಚಿತ್ರ ಇದ್ದು ಮುಂದಿನ ಜೂನ್ ಜುಲೈ ಹೊತ್ತಿಗೆ ತೆರೆಗೆ ಬರಲು ಸಿದ್ಧವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin