25 days are complete for "Rani" which won the attention
ಜನಮನ ಗೆದ್ದ “ರಾನಿ”ಗೆ 25 ದಿನ ಪೂರ್ಣ
ಕನ್ನಡ ಸಿನಿಮಾಗಳಿಗೆ ಹೆಚ್ಚು ಜನರು ಬರುತ್ತಿಲ್ಲ ಎಂಬ ಮಾತು ಕೆಲವು ದಿನಗಳಿಂದ ಸುಳ್ಳಾಗುತ್ತಿದೆ. ಇತ್ತೀಚೆಗೆ ತೆರೆಕಂಡ, ” ಕೃಷ್ಣಂ ಪ್ರಣಯ ಸಖಿ”, “ಭೀಮ” ಚಿತ್ರಗಳನ್ನು ಪ್ರೇಕ್ಷಕರು ಯಶಸ್ವಿಯಾಗಿಸಿದ್ದಾರೆ.
ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ, ಗುರುತೇಜ್ ಶೆಟ್ಟಿ ನಿರ್ದೇಶಿಸಿ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರವೂ ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ.
ಈಗಲೂ ಬಿಸಿ ಸೆಂಟರ್ ನಲ್ಲಿ ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ “ರಾನಿ” ಉತ್ತಮ ಪ್ರದರ್ಶನವಾಗಿ, ಐವತ್ತನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರ ಮನವನ್ನು “ರಾನಿ” ಗೆದ್ದಿದ್ದಾನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾವು ಸದಾ ಚಿರ ಋಣಿ ಎನ್ನತ್ತಾರೆ “ರಾನಿ” ಚಿತ್ರತಂಡ.