Journey, adventure film #Paru Parvati song released

ಜರ್ನಿ, ಅಡ್ವೆಂಚರ್ ಚಿತ್ರ #ಪಾರು ಪಾರ್ವತಿ ಹಾಡು ಬಿಡುಗಳ ಬಿಡುಗಡೆ - CineNewsKannada.com

ಜರ್ನಿ, ಅಡ್ವೆಂಚರ್ ಚಿತ್ರ #ಪಾರು ಪಾರ್ವತಿ ಹಾಡು ಬಿಡುಗಳ ಬಿಡುಗಡೆ

ಬಿಗ್‍ಬಾಸ್ ಬೆಡಗಿ ನಟಿ ದೀಪಿಕಾದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “#ಪಾರು ಪಾರು ಪಾರ್ವತಿ” ಚಿತ್ರದ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಧ್ವನಿಸುರುಳಿ ಬಿಡುಗಡೆಯಾಗಿದ್ದು ಹಾಡುಗಳು ಗಮನ ಸೆಳೆದಿವೆ.

ಮೊದಲ ಬಾರಿಗೆ ನಿರ್ದೇಶಕ ರೋಹಿತ್‍ಕೀರ್ತಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಪಿ.ಬಿ ಪ್ರೇಮ್‍ನಾಥ್ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ನಟಿ ದೀಪಿಕಾದಾಸ್, ಪೂನಮ್ ಸರ್‍ನಾಯಕ್, ಫವಾಜ್ ಆಶ್ರಫ್ ಸೇರಿದಂತೆ ಮತ್ತಿತರು ಚಿತ್ರದ ತಾರಾಬಳದಲ್ಲಿದ್ದಾರೆ.

“#ಪಾರು ಪಾರ್ವತಿ” ಚಿತ್ರದ ಹಾಡುಗಳನ್ನು ಪೆನ್‍ಡ್ರೈವ್ ಮೂಲಕ ವಿಭಿನ್ನವಾಗಿ ಬಿಡುಗಡೆ ಮಾಡುವ ಮೂಲಕ ಹೊಸತನಕ್ಕೆ ಚಿತ್ರತಂಡ ನಾಂದಿ ಹಾಡಿತು. ಈ ವೇಳೆ ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ಈ ಕ್ಷಣಕ್ಲೆ ಸಾಕ್ಷಿಯಾದರು.

ಹಾಡು ಬಿಡುಗಡೆ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಚಿತ್ರದ ಮೂಲಕ ಹಲವು ಮಂದಿ ಪಾರು ಪಾರ್ವತಿ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಹಲವು ಮಂದಿ ಪಾದಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ, ಮೊದಲ ಸಿನಿಮಾ. ಜರ್ನಿ ಅಡ್ವೆಂಚರ್, ಡ್ರಾಮ ಜಾನರ್ ಸುತ್ತ ಸಾಗಿದೆ. ನಟಿ ದೀಪಿಕಾ ದಾಸ್ ಸುತ್ತ ಸಾಗಿದೆ. ಪೂನಮ್ ಸರ್ ನಾಯಕ್, ಪವಾಜ್ ಆಶ್ರಫ್ ಸುತ್ತ ಚಿತ್ರದ ಕಥೆ ಸಾಗಿದೆ.

ನಟಿ ದೀಪಿಕಾ ದಾಸ್ ಮಾತನಾಡಿ , ಜರ್ನಿಯ ಕತೆ, ಕಥೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಲು ಹಾಡುಗಳು ಪೂರಕವಾಗಿವೆ. ಎಂಆರ್‍ಟಿ ಸಂಸ್ಥೆಯಿಂದ ಹಾಡು ಬಿಡುಗಡೆಯಾಗಿದೆ. ಲಹರಿ ವೇಲು ಅವರು ಹಾಡು ಕೇಳಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಸಂಗೀತ, ಹಾಡು ಉತ್ತಮವಾಗಿ ಮೂಡಿಬಂದಿದೆ. ಕಮರ್ಷಿಯಲಿ ಬೇಕು ಅಂತ ಹಾಡು ಸೇರಿಸಿಲ್ಲ, ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿವೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ಪೂನಮ್ ಸರ್ ನಾಯಕ್ ಮಾತನಾಡಿ, ಕನ್ನಡ ಕಲಿಯುತ್ತಿದ್ದೇನೆ. ಮೊದಲ ದಕ್ಷಿಣ ಭಾರತದ ಸಿನಿಮಾ. ಕನ್ನಡದಲ್ಲಿ ಮೊದಲ ಸಿನಿಮಾ. ಚಿತ್ರ ನೋಡಿ ಪ್ರೋತ್ಸಾಹಿಸಿ . ಸಿನಿಮಾದ ಹಾಡು 6 ವರ್ಷದಿಂದ ಎಲ್ಲಾ ವಯೋಮಾನದ ಮಂದಿಗೂ ಇಷ್ಟವಾಗಲಿದೆ ಎಂದರು.

ನಿರ್ಮಾಪಕ ಪಿ.ಬಿ ಪ್ರೇಮ್ ನಾಥ್ ಮಾತನಾಡಿ, ಪ್ರತಿಯೊಂದು ಹಾಡು ಕಥೆಗೆ ಪೂರಕವಾಗಿವೆ. ಲಹರಿ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. ಚಿತ್ರ ನೋಡಿ ಎಲ್ಲರು ಆಶೀರ್ವದಿಸಿ ಎಂದು ಕೇಳಿಕೊಂಡರು

ಲಹರಿ ಸಂಸ್ಥೆಯ ಲಹರಿ ವೇಲು ಮಾತನಾಡಿ, ರಿಷಿಕೇಶ್ ಸೇರಿದಂತೆ ಹಲವು ಸ್ಥಳಗಳನ್ನು ಅದ್ಬುತವಾಗಿ ಮೂಡಿಬಂದಿದೆ, 9 ಹಾಡು ಮೂರುನಾಲ್ಕು ಬಿಟ್ ಇವೆ. ಪ್ರೇಮಲೋಕ ನಂತರ ಅತಿ ಹೆಚ್ಚು ಹಾಡು ಇರುವ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ಫವಾಜ್ ಆಶ್ರಫ್ ಮಾತನಾಡಿ, ಮೊದಲ ಸಿನಿಮಾ. ಅವಕಾಶಕ್ಕಾಗಿ ತಂಡಕ್ಕೆ ಧನ್ಯವಾದಗಳು. ಚಿತ್ರಕ್ಕೆ ಎಲ್ಲರ ಸಹಕಾರ. ಬೆಂಬಲವಿರಲಿ ಎಂದರು

ಸಂಗೀತ ನಿರ್ದೇಶಕ ಆರ್ ಹರಿ ,ರಾಪರ್ ಎಂಸಿ ಬಿಜ್ಜು ಮತ್ತು ಆರ್ರಾ ಗಾಯಕರಾದ ಚೇತನ್ ನಾಯಕ್ ಮತ್ತಿತರರು ಮಾಹಿತಿ ಹಂಚಿಕೊಂಡರು. ನಾಗಾರ್ಜುನ ಶರ್ಮಾ ಚಿತ್ರದ 5 ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin