ತೆರೆಗೆ ಬರಲು ಸಜ್ಜಾದ ಹಾಸ್ಯ ಪ್ರಧಾನ ಚಿತ್ರ “ರಮೇಶ್ ಸುರೇಶ್”
ಆರ್ ಕೆ ಟಾಕೀಸ್ ಲಾಂಛನದಲ್ಲಿ ಪಿ.ಕೃಷ್ಣ ಹಾಗೂ ಬಿ.ಶಂಕರ್ ಅವರು ನಿರ್ಮಾಣ ಮಾಡಿರುವ, ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ ನಿರ್ದೇಶನದ ಹಾಗೂ ಗುಬ್ಬಿ ವೀರಣ್ಣ ಅವರ ಮರಿಮಗ ಬೆನಕ ಹಾಗೂ ಯಶು ರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ” ರಮೇಶ್ ಸುರೇಶ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಗಿದೆ.
ನಟರಾದ ಸಂತೋಷ್ ಆರ್ಯನ್, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಹೊಸ ತಂಡಕ್ಕೆ ಶುಭ ಕೋರಿದರು.ಚಿತ್ರಲ್ಲಿ ಇಬ್ಬರು ನಿರ್ಮಾಪಕರು, ಇಬ್ಬರು ನಿರ್ದೇಶಕರು ಹಾಗೂ ಇಬ್ಬರು ನಾಯಕರಿರುವುದು ಈ ಚಿತ್ರದ ವಿಶೇಷ.
ನಿರ್ಮಾಪಕರಾದ ಕೃಷ್ಣ ಹಾಗೂ ಶಂಕರ್ ಮಾತನಾಡಿ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಆರ್ ಕೆ ಟಾಕೀಸ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ಮೊದಲ ಹೆಜ್ಜೆಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಅವರ ನಿರ್ದೇಶನದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್, ಟೀಸರ್ ಹಾಗೂ ಹಾಡುಗಳು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಚಿತ್ರ ಜೂನ್ 21 ರಂದು ತೆರೆಗೆ ಬರಲಿದೆ ಎಂದು ಅವರು ತಿಳಿಸಿದರು.
ನಿರ್ದೇಶಕರಾದ ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ, ಇದೊಂದು ಕಾಮಿಡಿ ಜಾನರ್ ನ ಚಿತ್ರವಾದರೂ ಒಳ್ಳೆಯ ಸಂದೇಶವುಳ್ಳ ಚಿತ್ರ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರ ನೋಡಿ ಪೆÇ್ರೀತ್ಸಾಹ ನೀಡಿ ಎಂದರು.
ರಮೇಶ್ ಸುರೇಶ್” ಪಾತ್ರಧಾರಿಗಳಾದ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶು ರಾಜ್ ಮಾತನಾಡಿ ನಮ್ಮ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಯಾಗಲಿ, ಅನವಶ್ಯಕ ಸನ್ನಿವೇಶಗಳಾಗಲಿ ಯಾವುದೂ ಇಲ್ಲ. ಜನರಿಗೆ ಬೇಸರವಾಗದಂತೆ ಉತ್ತಮ ಮನೋರಂಜನೆಯ ನೀಡುವ ಚಿತ್ರವಿದು. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು “
ಚಿತ್ರದಲ್ಲಿ ನಟಿಸಿರುವ ಬಹುಭಾಷ ನಟ ಸತ್ಯಪ್ರಕಾಶ್, ನೀನಾಸಂ ರಂಗನಾಥ್, ಉಮಾ ಮುಂತಾದವರು ಈ ಚಿತ್ರದ ಕುರಿತು ಮಾತನಾಡಿದರು. ಚಂದನ ಸೇಗು ಈ ಚಿತ್ರದ ನಾಯಕಿ. ಸಾಧುಕೋಕಿಲ ಅವರು “ರಮೇಶ್ ಸುರೇಶ್” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.