ನಟಿ ಹರ್ಷಿಕಾಗೆ ಅಪರೂಪದ ಉಡುಗೊರೆ ಕೊಟ್ಟು ಹಾರೈಸಿದ ಹಿರಿಯ ನಟಿ ಜಯಮಾಲ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಹರ್ಷಿಕಾ ಪೂಣಚ್ಚ, ಇದೇ ತಿಂಗಳ 24 ರಂದು ಕೊಡಗಿನಲ್ಲಿ ನಟ, ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಅವರನ್ನು ಮದುವೆಯಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.
ಮದುವೆಗೆ ಮುನ್ನವೇ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಹಿರಿಯ ನಟಿ ಜಯಮಾಲ ಅವರಿಂದ ಅಪರೂಪದ ಉಡುಗೊರೆ ಸಿಕ್ಕಿದೆ. ಉಡುಗೊರೆ ಸ್ವೀಕರಿಸಿ ನಟಿ ಹರ್ಷಿಕಾ ಖುಷಿಯಾಗಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಆಶೀರ್ವದಿಸಿದ ನಟಿ
ಸ್ಯಾಂಡಲ್ ವುಡ್‍ನ ಹಿರಿಯ ನಟಿ ಜಯಮಾಲ ಅವರು ನಿಮ್ಮಿಬ್ಬರ ದಾಂಪತ್ಯ ಜೀವನ ನೂರ್ಕಾಲ ಸುಖವಾಗಿ ಬಾಳಲಿ ಎಂದು ಹಾರೈಸಿದ್ದಾರೆ
ಅಂದಹಾಗೆ ನಟಿ ಹರ್ಷಿಕಾಗೆ ಹಿರಿಯ ನಟಿ ಜಯಮಾಲ ಅವರು ನೀಡಿದ ಉಡುಗೊರೆ ಏನು ಗೊತ್ತಾ. ಅದುವೇ ಚಿನ್ನದ ಓಲೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಷ್ಷ ವಿವಾಹಕ್ಕೆ ಚಿನ್ನದ ಉಡುಗೊರೆ ಕೊಟ್ಟು ಶುಭಹಾರೈಸಿದ್ದಾರೆ. ತಾವು ಕೊಟ್ಟ ಚಿನ್ನದ ಓಲೆಯನ್ನು ತಾವೇ ನಟಿ ಹರ್ಷಿಕಾಗೆ ಹಾಕಿ ಶುಭ ಕೋರಿರುವುದು ಮತ್ತೊಂದು ವಿಶೇಷ.
ಕಳೆದ 12 ವರ್ಷಗಳಿಂದ ಪ್ರೀತಿಯಲ್ಲಿ ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಕೊಡಗಿನಲ್ಲಿ ಅಲ್ಲಿನ ಸಂಪ್ರದಾಯದಂತೆ ಇದೇ 24 ರಂದು ಹೊಸ ಇನ್ಸಿಂಗ್ಸ್ ಆರಂಭಿಸಲಿದ್ದಾರೆ.