"MYTH FX" studio launched, led by actor Kamal

ನಟ ಕಮಲ್ ಸಾರಥ್ಯದ “MYTH FX” ಸ್ಟುಡಿಯೋ ಆರಂಭ - CineNewsKannada.com

ನಟ ಕಮಲ್ ಸಾರಥ್ಯದ “MYTH FX” ಸ್ಟುಡಿಯೋ ಆರಂಭ

ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ “MYTH FX” ಸ್ಟುಡಿಯೋ ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ನಟ ಕಮಲ್ ಸಾರಥ್ಯದಲ್ಲಿ ಆರಂಭವಾಗಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸ್ಟುಡಿಯೋವನ್ನು ಉದ್ಘಾಟಿಸಿ ಶುಭ ಹಾರೈಸಿದ್ದಾರೆ.

ಕಮಲ್ ಹಾಗೂ ಸ್ನೇಹಿತರು ಆರಂಭಿಸಿರುವ ” ತಂತ್ರಜ್ಞ ಲೋಕೇಶ್, ಸ್ಟುಡಿಯೋದಿಂದ ಕನ್ನಡ ನಿರ್ಮಾಪಕರಿಗೆ ಅನುಕೂಲವಾಗಲಿದೆ. ಈ ಪ್ರಯತ್ನ ಯಶಸ್ವಿಯಾಗಲಿ ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾರೈಸಿದರು.

ಕಮಲ್ ಮಾತನಾಡಿ ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಕವಿ ಕೂಡ. ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆ ಮಾಡಿದ್ದಾರೆ. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ “ದಿ ಸೂಟ್” ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ ಎಂದರು.

ಚಿತ್ರರಂಗಕ್ಕೆ ಅನುಕೂಲವಾಗುವ ಏನಾದರೊಂದು ಕೆಲಸ ಮಾಡಬೇಕೆಂದು ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ “ಒಙಖಿಊ ಈಘಿ” ಸ್ಟುಡಿಯೋ ಆರಂಭ ಮಾಡಿದ್ದೇವೆ ಎಂದು ಹೇಳಿದರು.

ತಂತ್ರಜ್ಞ ಲೋಕೇಶ್ ಮಾತನಾಡಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಚಲನಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿ ಅನುಭವವಿದೆ ಕಳೆದ ಒಂದು ವರ್ಷದಿಂದ ಸ್ಟುಡಿಯೋ ಕೆಲಸ ಆರಂಭಿಸಿದ್ದೇವೆ. ಸುಮಾರು ನೂರಕ್ಕೂ ಅಧಿಕ ಜನ ತಂತ್ರಜ್ಞರು ನಮ್ಮ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ನಿರ್ವಹಿಸಿದ ಮೊದಲ ಚಿತ್ರ ಧ್ರುವ ಸರ್ಜಾ ಅಭಿನಯದ “ಮಾರ್ಟಿನ್”. ಈಗ ರಮೇಶ್ ರೆಡ್ಡಿ ಅವರ ನಿರ್ಮಾಣದ, ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ “45” ಚಿತ್ರದ ಕೆಲಸ ಕೂಡ ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತಿದೆ ಎಂದರು.

ಮತ್ತೊಬ್ಬ ತಂತ್ರಜ್ಞ ಮಾರುತಿ ಸಹ ಸ್ಟುಡಿಯೋದ ಅನುಕೂಲತೆ ಬಗ್ಗೆ ಮಾತನಾಡಿದರು. ವಿತರಕ ರಾಜು ಪತ್ರಿಕಾಗೋಷ್ಠಿಯಲ್ಲಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin