ನವಂಬರ್ 22ಕ್ಕೆ “ಟೆನೆಂಟ್” ಚಿತ್ರ ಬಿಡುಗಡೆ: ಟೀಸರ್ ಗೆ ಸ್ಯಾಂಡಲ್‍ವುಡ್ ಗಣ್ಯರು ಫಿದಾ

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಥೆಯ ಸಿನಿಮಾಗಳು ಬರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಟೆನೆಂಟ್” ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದೆ.
ಟೆನೆಂಟ್ ಚಿತ್ರದಲ್ಲಿ ಧರ್ಮಕೀರ್ತಿರಾಜ್, ಉಗ್ರಂ ಮಂಜು, ತಿಲಕ್, ರಾಕೇಶ್ ಹಾಗೂ ಸೋನುಗೌಡ ಮತ್ತಿತರು ನಟಿಸಿದ್ದು ಚಿತ್ರರಂಗದ ಅನೇಕ ಮಂದಿ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ಧಾರೆ
ಟೆನೆಂಟ್, ಕನ್ನಡದಲ್ಲಿ ರಿಲೀಸ್‍ಗೆ ತಯಾರಿ ಮಾಡಿಕೊಂಡಿರುವ ಹೊಸ ಸಿನಿಮಾ. ಸದ್ಯ ಸಿನಿಮಾ ತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿ ಅಭಿಮಾನಿಗಳ ಮುಂದೆ ಬಂದಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಟೆನೆಂಟ್ ಪ್ರಮೋಷನ್ ಅಂಗಳಕ್ಕೆ ಇಳಿದಿದೆ.
ಅಂದಹಾಗೆ ಟೆನೆಂಟ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮಕೀರ್ತಿರಾಜ್ ಮತ್ತು ಉಗ್ರಂ ಮಂಜು ಹಾಗೂ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು.
ಈ ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕನ ಪ್ರಯತ್ನಕ್ಕೆ ದೊಡ್ಡ ತಾರಾಬಳಕ ಸಾಥ್ ಕೊಟ್ಟಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿದ್ರೆ ಇದು ಚೊಚ್ಚಲ ಸಿನಿಮಾ ಅಂತ ಅನಿಸದ ಹಾಗೆ ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕರು.
ಮಾಸ್ಟರ್ ಚಾಯ್ಸ್ ಕ್ರಿಯೇಶನ್ ನಡಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ಟೆನಂಟ್ ಟೀಸರ್ ಅನ್ನು ಸ್ಯಾಂಡಲ್‍ವುಡ್‍ನ ಅನೇಕ ಗಣ್ಯರು ಸೇರಿ ರಿಲೀಸ್ ಮಾಡಿದ್ದಾರೆ. ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಖ್ಯಾತ ಛಾಯಾಗ್ರಹಕರಾದ ಸತ್ಯ ಹೆಗ್ಡೆ, ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ನಟ, ನಿರ್ಗೇಶಕ ವಿಕ್ಕಿ, ನಟ ನವೀಶ್ ಶಂಕರ್, ಸೇರಿದಂತೆ ಅನೇಕರು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಸಾಥ್ ನೀಡಿದ್ದಾರೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಟೆನೆಂಟ್ ಸಿನಿಮಾದ ಟೀಸರ್ ಆಕರ್ಶಕವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಕಣ್ ಕಣ್ಣ ಸಲಿಗೆ…’ ಎಂದು ಲವರ್ ಬಾಯ್ ಆಗಿ ಮಿಂಚುತ್ತಿದ್ದ ನಟ ಧರ್ಮಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಇನ್ನು ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾದ ಮೇಲೆ ಅವರಿಗೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಟೀಸರ್ ನಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುತ್ತಿದೆ. ಬ್ಯಾಗ್ರೌಂಡ್ ಸ್ಕೋರ್ ಟೀಸರ್‍ನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅಂದಹಾಗೆ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೊಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಟೀಸರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಟೆನೆಂಟ್ ನವೆಂಬರ್ 22ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.