ನಾವಿಬ್ಬರೂ ಲಿವಿಂಗ್ ರಿಲೇಷನ್‍ನಲ್ಲಿದ್ದೇವೆ : ಪವಿತ್ರ ಲೋಕೇಶ್ ಜೊತೆ ಸಂಬಧಕ್ಕೆ ತೆರೆ ಎಳೆದ ನರೇಶ್
ತೆಲುಗಿನ ಖ್ಯಾತ ನಟ ಡಾ ನರೇಶ್ ಕೃಷ್ಣ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ನಟಿಸಿರುವ “ಮತ್ತೆ ಮದುವೆ” ಚಿತ್ರ ವಿವಿಧ ಕಾರಣಗಳಿಂದ ರೀಲ್ ಮತ್ತು ರಿಯಲ್ ಲೈಫ್‍ನಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅಂದಹಾಗೆ ತೆಲುಗಿನಲ್ಲಿ ಇದೇ 16 ರಂದು ಹಾಗು ಕನ್ನಡದಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮಾದ್ಯಮದ ಮುಂದೆ ಎದುರಾಗಿದ್ದ ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಮತ್ತು ನಿರ್ದೇಶಕ ಎಂ.ಎಸ್ ರಾಜು ಅವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಡರು.
ಈ ವೇಳೆ ಮಾತಿಗಿಳಿದ ನಟ, ನಿರ್ಮಾಪಕರೂ ಆಗಿರುವ ಡಾ.ನರೇಶ್ ಅವರು ಚಿತ್ರ ಬಗ್ಗೆ ಮಾಹಿತಿ ನೀಡುತ್ತಲೇ ನಾನು ಮತ್ತು ಪವಿತ್ರ ಲೋಕೇಶ್ ಲಿವಿಂಗ್ ರಿಲೇಷನ್‍ನಲ್ಲಿ ಇದ್ದೇವೆ. ಇಬ್ಬರೂ ಸಂತೋಷವಾಗಿದ್ದೇವೆ ಎಂದು ಅಧಿಕೃತವಾಗಿಯೇ ಪ್ರಕಟಿಸಿದರು.
ಮದುವೆ ಅನ್ನುವುದು ಪವಿತ್ರವಾದದ್ದು.ಅದರ ಬಗ್ಗೆ ಗೌರವವಿದೆ. ಮದುವೆ ಆಗಿದೆ ಎಂದು ತೋರಿಸಲು ಕಾಲುಂಗರ , ಮಂಗಳ ಸೂತ್ರ ಮಾತ್ರ ಆಗಬೇಕೆಂದಿಲ್ಲ. ನನ್ನ ಮತ್ತು ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂದ ಹೃದಯಗಳ ಸಂಗಮ. ನಾವು ಖುಷಿಯಲ್ಲಿದ್ದೇವೆ ಎಂದರು.



“ಮತ್ತೆ ಮದುವೆ” ಚಿತ್ರ ನಿಮ್ಮ ನಿಜ ಜೀವನದ ಕುರಿತತಾದ ಚಿತ್ರವೇ ಅಥವಾ ನಿಮ್ಮನ್ನು ಟೀಕಿಸಿದವರಿಗೆ ಉತ್ತರನಾ ಕೊಡುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಚಿತ್ರ ನೋಡಿ ನಿಮಗೆ ಗೊತ್ತಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡರು.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ” ಮತ್ತೆ ಮದುವೆ” ತೆರೆಗೆ ಬರಲು ಸಜ್ಜಾಗಿದೆ. ಮೊದಲು ತೆಲುಗಿನಲ್ಲಿ ಮುಂದಿನ ವಾರ ಚಿತ್ರ ಬಿಡುಗಡೆ ಮಾಡಿ ಆ ನಂತರ ಕನ್ನಡದಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು. ಚಿತ್ರ ನೋಡಿ ಎಲ್ಲರೂ ಸಹಕಾರ ನೀಡಿ ಎಂದು ಕೇಳಿಕೊಂಡರು.
ವಿಜಯ ಕೃಷ್ಣ ಮೂವೀಸ್‍ಗೆ 50 ವರ್ಷ:
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಟ ಡಾ.ನರೇಶ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 50 ವರ್ಷ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ವಿಜಯ ಕೃಷ್ಣ ಮೂವೀಸ್ ಸಂಸ್ಥೆಗೂ 50 ವರ್ಷ ಆಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಹೊಸದಾಗಿ ಬಿಡುಗಡೆ ಮಾಡಲಾಯಿತು.
ಮತ್ತೆ ಮದುವೆ ಚಿತ್ರದಲ್ಲಿ ಕನ್ನಡದಕ್ಕೆ ನಾನೇ ಡಬ್ ಮಾಡಿದ್ದೇನೆ.ಕನ್ನಡ ತೆಲುಗು ಸಹೋದರ ಭಾಷೆ. ಲಿಪಿ ಎತಡು ಭಾಷೆಯದು ಹೆಚ್ಚುಕಡಿಮೆ ಒಂದೆ. ಎರಡೂ ಇಂಡಸ್ಟ್ರಿ ಗಳು ಜೊತೆಯಾಗಿ ಬೆಳದಿವೆ. ಶಿವಣ್ಣ ಕ್ಲಾಸ್ ಮೇಟ್ ಸಾಕಷ್ಟು ಬಾರಿ ಭೇಟಿ ಆಗಿದ್ದೇವೆ.ಅಂಬರೀಷ್ ,ಸುಮಲತಾ, ರಮೇಶ್, ರಾಕ್ ಲೈನ್ ಲೈನ್ ಸ್ನೇಹಿತರು ಇದ್ದಾರೆ. ಈ ಮುಂಚೆಯೇ ಕನ್ನಡಕ್ಕೆ ಬರಬೇಕಾಗಿತ್ತು ತಡವಾಗಿ ಬಂದಿದ್ದೇನೆ ಎಂದರು

ಪವಿತ್ರಾ ಲೋಕೇಶ್, ಮಾತನಾಡಿ ತುಂಬಾ ವರ್ಷದ ಮೇಲೆ ಬೇಟಿ ಅಗ್ತಾ ಇದ್ದೇನೆ. ಯಾರನ್ನೋ ದೋಚಲು, ಯಾರದೋ ದಡ್ಡಿನಲ್ಲಿ ಮಜಾ ಮಾಡುವ ಇದ್ದೇಶ ಇಲ್ಲ. ಕನ್ನಡದ ನಟಿಯಾಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದುಡಿದಿದ್ದೇನೆ. ಇದಕ್ಕೆ ಕನ್ನಡದ ಅನೇಕ ಸಹ ಕಲಾವಿದರು ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಂದರು.
ನಮ್ಮನೆಯಲ್ಲಿ ಇರುವ ನೂರು ದಿನಗಳ ಶೀಲ್ಡ್ ಗಳನ್ನು ನೋಡಿಕೊಂಡು ಬೆಳೆದವಳು ನಾನು. ಡಾ.ಕುಮಾರ್ ಕುಟುಂಬ ನೂರು ದಿನದ ಸಂದರ್ಭರದಲ್ಲಿ ಬೆಳ್ಳಿ ಲೋಟ ಕೊಡ್ತಾ ಇದ್ದರು ಅದರಲ್ಲಿಯೇ ಕಾಫಿ ಕುಡಿಯೋದು ನಾವು. ಚಿತ್ರರಂಗಕ್ಕೆ ಬಂದದ್ದು ಆಕಸ್ಮಿಕ. ತೆಲುಗು ಚಿತ್ರರಂಗ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ ಇದು ಖುಷಿಯ ಸಂಗತಿ ಎಂದರು.
“ತೆಲುಗು ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದೇನೆ.ಅದಕ್ಕೆಲ್ಲಾ ಕನ್ನಡ ಚಿತ್ರರಂಗ ಕಾರಣ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆಯಲು ಕನ್ನಡ ಚಿತ್ರರಂಗದ ಕೊಡುಗೆ ಅಪಾರ.ಅದೇ ರೀತಿ ತೆಲುಗು ಚಿತ್ರರಂಗದಿಂದ ಸಾಕಷ್ಟು ದುಡಿದಿದ್ದೇನೆ. ಅಲ್ಲಿನವರು ನನ್ನನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು ಎನ್ನುವ ಸಾರ್ಥಕ ಭಾವ ಹೊರಹಾಕಿದರು
ನಿರ್ದೇಶಕ ಎಂ.ಎಸ್ ರಾಜು ಮಾತನಾಡಿ, ವಿಜಯ್ ಕೃಷ್ಣ ಮೂವೀಸ್ ಸಂಸ್ಥೆ 50 ವರ್ಷ ಪೂರ್ಣಗೊಳಿಸಿದೆ. ನರೇಶ್ ಅವರು ಎಂಟು ಒಂಭತ್ತು ವರ್ಷಗಳಲ್ಲಿ ನಟನೆ ಆರಂಭಿಸಿದ್ದರು.ಅವರು ಬಣ್ಣದ ಬದುಕಿನಲ್ಲಿ 50 ವರ್ಷ ಪೂರ್ಣಗೊಳಿಸಿದ್ದಾರೆ.ನಟಿ ಪವಿತ್ರಾ ಲೋಕೋಶ್ ಅದ್ಬುತ ನಟಿ,ಚಿತ್ರದಲ್ಲಿ ಅವರ ನಟನೆ ಅಭೂತಪೂರ್ವವಾಗಿದೆ. ಚಿತ್ರಕ್ಕೆ ನರೇಶ್ ಸರ್ ಸಾಕಷ್ಟು ಹಣ ಹಾಕಿದ್ದಾರೆ.ಮತ್ತೆ ಮದುವೆ ಎಲ್ಲರ ಸಹಕಾರವಿರಲಿ ಎಂದರು.

