“ಪ್ರಣಯಂ”ಚಿತ್ರದ ಲಿರಿಕಲ್ ಹಾಡು ಬಿಡುಗಡೆ ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಕೆ
ನವ ಯುವ ಜೋಡಿಗಳ ಪ್ರಣಯದ ಕಥಾಹಂದರ ಒಳಗೊಂಡ ಚಿತ್ರ ಪ್ರಣಯಂ. ಪಲ್ಲಕ್ಕಿ, ಗಣಪ, ಪಾರಿಜಾತ ಚಿತ್ರಗಳನ್ನು ನೀಡಿದ ಪರಮೇಶ್ ಅವರೀಗ ಅದ್ಭುತವಾದ ಪ್ರೇಮಕಥೆಯೊಂದನ್ನು ತಂದಿದ್ದಾರೆ.ಭರಸೆಯ ಯುವ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.
ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.
ಈಗ ಈ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರ ಲೇಖನಿಯಲ್ಲಿ ಮೂಡಿಬಂದ ‘ಮಳೆಗಾಲ ಬಂತು ಸನಿಹ’ ಎಂಬ ಹಾಡಿನ ಲಿರಿಕಲ್ ವೀಡಿಯೋವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದರು.ಎಸ್. ದತ್ತಾತ್ರೇಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಎಂಗೇಜ್ ಮೆಂಟ್ ಆದನಂತರ ಯುವಜೋಡಿಗಳ ನಡುವೆ ನಡೆಯೋ ಪ್ರೀತಿ ಪ್ರೇಮದ ಕಥೆಯನ್ನು ಹೇಳಿದ್ದಾರೆ.
ಭರಸೆಯ ಯುವ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬಂದಿದೆ. ರಾಜವರ್ಧನ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ನಾಯಕ ರಾಜವರ್ಧನ್ ಈ ಚಿತ್ರದಲ್ಲಿ ಒಬ್ಬ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರು ನಟಿಸಿದ್ದಾರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಜಯಂತ್ ಕಾಯ್ಕಿಣಿ ಪರಮೇಶ್ ನನಗೂ ದಶಕದ ಹಿಂದಿನ ನಂಟು. ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೆ ಹಾಡು ಬರೆದಿದ್ದೆ. ಮಳೆಗಾಲದಲ್ಲಿ ಪ್ರೇಮಿಗಳಿಬ್ಬರು ತಮ್ಮ ಭಾವನೆಗಳನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಸಮಾಜವನ್ನು ಬೆಸೆಯುವ ಒಂದೇ ಮಾಧ್ಯಮ ಎಂದರೆ ಅದು ಸಿನಿಮಾ ಎಂದು ಹೇಳಿದರು.
ಝೆಂಕಾರ್ ಮ್ಯೂಸಿಕ್‍ನ ಭರತ್ ಜೈನ್ ಮಾತನಾಡಿ, ಝಂಕಾರ್, ಪರಮೇಶ್ ನಡುವಿನ ಸಂಬಂಧ ತುಂಬಾ ಹಳೆಯದ್ದು. ಈ ಚಿತ್ರದಲ್ಲಿ ಮನೋಮೂರ್ತಿ ಅವರು ಆರು ಮೆಲೋಡಿ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ಹಾಡಿದ್ದಾರೆ, ನಮ್ಮ ಸಂಬಂಧ ಹೀಗೇ ಬೆಳೆಯಲಿ ಎಂದರು.
ನಿರ್ಮಾಪಕ ಪರಮೇಶ್ ಮಾತನಾಡಿ ಮುಂಗಾರು ಮಳೆಯ ಒಂದು ಹಾಡು ಆಗಲೇ 25-30 ಕೋಟೆ ಮಾಡಿತ್ತು. ಈಥರದ ಶಕ್ತಿ ಇರುವುದು ಮೆಲೋಡಿ ಸಾಂಗ್ ಗೆ ಮಾತ್ರ. ಮುಂಗಾರುಮಳೆ ಥರದ ಒಂದು ಮ್ಯೂಸಿಕಲ್ ಹಿಟ್ ಕೊಡಬೇಕೆಂದು, ತುಂಬಾ ಟ್ಯೂನ್ ಹುಡುಕಿ ಇದನ್ನು ಫೈನಲ್ ಮಾಡಿದ್ದೇನೆ. ಭರತ್ ಅವರ ಕಂಪನಿಗೆ ದೊಡ್ಡ ಹೆಸರು ಬರಬೇಕು. ಹಾಡು ಆ ಲೆವೆಲ್ ಗೆ ರೀಚ್ ಆಗುತ್ತೆ ಎಂಬ ನಂಬಿಕೆಯಿದೆ.
ಪ್ರಯಣಂ ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ ನಡೆಯುವ ಕಥೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಎಲ್ಲ ಕಲಾವಿದರು ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು,
ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ. ಈ ಚಿತ್ರದಲ್ಲಿ ನಾನೊಂದು ಫೀಲ್ ಇಟ್ಟುಕೊಂಡಿದ್ದೆ. ಅದಕ್ಕೆ ತಕ್ಕಂತೆ ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಚಿತ್ರವನ್ನು ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಡಿಸಿದ್ದಾರೆ.
ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಮನೋಮೂರ್ತಿಅವರ ಸಂಗೀತ ನಿರ್ದೇಧನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.