"My Hero" is going to fly abroad from Madhya Pradesh.

ಮಧ್ಯಪ್ರದೇಶದಿಂದ ವಿದೇಶಕ್ಕೆ ಹಾರಲಿದ್ದಾನೆ “ಮೈ ಹೀರೋ” - CineNewsKannada.com

ಮಧ್ಯಪ್ರದೇಶದಿಂದ ವಿದೇಶಕ್ಕೆ ಹಾರಲಿದ್ದಾನೆ “ಮೈ ಹೀರೋ”

ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮೋಡಿ ಮಾಡಿರುವ ನಟಿ. ಅಂಕಿತಾ ಅಮರ್. ಅವರ ಹೊಸ ಚಿತ್ರ “ಮೈ ಹೀರೋ”ಗೆ ಮಧ್ಯ ಪ್ರದೇಶದ ಹಲವು ಕಡೆ ಚಿತ್ರೀಕರಣ ಪೂರ್ಣಗೊಂಡಿದೆ.

ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಮೈ ಹೀರೊ” ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಒಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಅಲ್ಲಿ ನಡೆದಿದೆ.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್, ಬಾಲನಟ ವೇದಿಕ್ ಕೌಶಿಕ್, ದತ್ತಣ್ಣ, ಅಂಕಿತ ಅಮರ್ ಹಾಗೂ ಅಲ್ಲಿನ ಸ್ಥಳೀಯ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕೊನೆಯ ಹಂತದ ಚಿತ್ರೀಕರಣ ಯು ಎಸ್ ಎ ನಲ್ಲಿ ನಡೆಯಲಿದೆ.

ಇಡೀ ವಿಶ್ವದಲ್ಲೇ ಇರುವ ಸಾಮಾಜಿಕ ಸಮಸ್ಯೆಯೊಂದರ ಕುರಿತಾದ ಚಿತ್ರವಿದು. ಅವಿನಾಶ್ ವಿಜಯಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎ.ವಿ.ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ಅವಿನಾಶ್ ವಿಜಯಕುಮಾರ್ ಅವರೆ ನಿರ್ಮಿಸುತ್ತಿದ್ದಾರೆ.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ “ಮೈ ಹೀರೊ” ಚತ್ರಕ್ಕಿದ್ದು, ಎ.ವಿ.ಸ್ಟುಡಿಯೋಸ್ ಸಂಭಾಷಣೆ ಬರೆದಿದ್ದಾರೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin