“Mahaveera Hanuma” video song release: Celebrities participate

“ಮಹಾವೀರ ಹನುಮ” ವಿಡಿಯೋ ಹಾಡು ಬಿಡುಗಡೆ : ಗಣ್ಯರು ಭಾಗಿ - CineNewsKannada.com

“ಮಹಾವೀರ ಹನುಮ” ವಿಡಿಯೋ ಹಾಡು ಬಿಡುಗಡೆ : ಗಣ್ಯರು ಭಾಗಿ

ನಾಲ್ಕು ನಿಮಿಷ ಮೂವತ್ತು ಸಕೆಂಡ್ ಇರುವ ‘ಮಹಾವೀರ ಹನುಮ’ ವಿಡಿಯೋ ಹಾಡು ಬಿಡುಗಡೆಯಾಗಿದೆ. ಹಿರಿಯ ನಿರ್ಮಾಪಕ ಸೂರಪ್ಪ ಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಅಂತರರಾಷ್ಟ್ರೀಯ ಬಾಲನಟಿ ಪ್ರಶಸ್ತಿ ವಿಜೇತೆ ಋತುಸ್ಪರ್ಶ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ನಿರ್ದೇಶಕ ರಾಘವಸೂರ್ಯ ಮಾತನಾಡಿ ಹಾಡನ್ನು ಅಂಜನಾದ್ರಿ ಬೆಟ್ಟ, ಆನೆಗುಂದಿಯ ಲಕ್ಷೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಚಿಂತಾಮಣಿ ಮಠದಲ್ಲಿ ಚಿತ್ರೀಕರಿಸಿದ್ದು ಸವಾಲಿನಿಂದ ಕೂಡಿತ್ತು. ಜಾಕಿಚಾನ್ ಅಭಿನಯದ ‘ದ ಮಿಥ್’ ಸಿನಿಮಾದ ಶೂಟಿಂಗ್ ಅಲ್ಲೇ ನಡೆದಿದ್ದು, ನಂತರ ನಾವು ಹೋಗಿರುವುದು ಭಾರತೀಯ ಚಿತ್ರರಂಗದಲ್ಲೆ ಮೊದಲು ಎನ್ನಬಹುದು ಎಂದರು

ಹಂಪಿ ಪ್ರಾಧಿಕಾರದವರು ವಿಶೇಷ ಅನುಮತಿಯೊಂದಿಗೆ, 105 ತಂತ್ರಜ್ಞರ ಜತೆಗೆ 575 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಸುಲಭದ ಮಾತಲ್ಲ. ಅಂದು ಮಳೆ ವಿಪರೀತ ಬರುತ್ತಿತ್ತು. ಮಹಾಮಂಗಳಾರತಿ ಮುಗಿದ ಕ್ಷಣದಲ್ಲೇ ಸೂರ್ಯದೇವ ಕರುಣೆ ತೋರಿಸಿದ. ಅರ್ಥಾತ್ ಬಿಸಲು ಬಂತು. ಇದರೊಂದಿಗೆ ಪ್ರಕೃತಿ ಸಹಕಾರ ನೀಡಿತು ಎಂದು ಹೇಳಿದರು

ರಾಘವೇಂದ್ರ ರೆಡ್ಡಿ ನಿರ್ಮಾಪಕರಾಗಿ ಪ್ರಾರಂಭದಿಂದಲೂ ರಾಜಿಯಾಗದೆ ದೃಶಗಳು ಚೆನ್ನಾಗಿ ಬರಲೆಂದು, ನಾನು ಏನೇ ಕೇಳಿದರೂ ಇಲ್ಲ ಎನ್ನದೆ ಸಹಕಾರ ನೀಡಿದ್ದರಿಂದಲೇ ಫಲಿತಾಂಶ ಚೆನ್ನಾಗಿ ಬಂದಿದೆ. ಈಗಾಗಲೇ ಎರಡು ಕಥೆಗಳು ಸಿದ್ದಗೊಂಡಿದೆ. ಅದರಲ್ಲಿ ಕಲ್ಕತ್ತ ಹಿನ್ನಲೆ ಇರುವ ಹಾಗೂ ಕರ್ನಾಟಕ-ಆಂಧ್ರ ಬಾರ್ಡರ್ ವಿಷಯಗಳನ್ನು ಒಳಗೊಂಡ ‘ಸರಹದ್ದು’ ಸ್ಕ್ರೀನ್‍ಪ್ಲೇ ಸಿದ್ದಗೊಂಡಿದೆ ಎಂದರು.

ಮುನ್ನ ಮೂರು ನಿಮಿಷದ ದೃಶ್ಯರೂಪಣದಲ್ಲಿ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ರಾಮ ಹನುಮನ ಭೇಟಿ ಹಾಗೂ ಕಿಷ್ಕಿಂದಾ ಭಾಗಕ್ಕೆ ರಾಮ ಲಕ್ಷಣನೊಂದಿಗೆ ಬಂದಿದ್ದ ದೃಶ್ಯರೂಪಣ ಎಲ್ಲರ ನಾಡಿಮಿಡಿತಕ್ಕೆ ಹತ್ತಿರವಾಗಿ ನೆರೆದಿದ್ದವರಿಗೆ ಭಕ್ತಿಭಾವ ಹೆಚ್ಚಾಗುವಂತೆ ಮಾಡಿದ್ದು ಕಾರ್ಯಕ್ರಮದ ಮತ್ತೋಂದು ವಿಶೇಷವಾಗಿತ್ತು.

ರಾಮನಾಗಿ ರೋಹಿತ್‍ರೆಡ್ಡಿ, ಲಕ್ಷ್ಮಣನಾಗಿ ರಾಜ್, ಅಂಗದರಾಗಿ ಜೀವನ್, ಸೀತೆಯಾಗಿ ಪ್ರಿಯಾ ನಟಿಸಿದ್ದಾರೆ. ಸಾಯಿಸರ್ವೇಶ್ ಸಾಹಿತ್ಯ, ಸಂಗೀತ ಸಂಯೋಜಿಸುವ ಜತೆಗೆ ಪ್ರಥಮ ಅನುಭವ ಎನ್ನುವಂತೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಛಾಯಾಗ್ರಹಣ ರಂಗಸ್ವಾಮಿ, ನೃತ್ಯ ಕಂಬಿರಾಜು ಅವರದಾಗಿದೆ. ಸುಂದರ ಸಮಾರಂಭದಲ್ಲಿ ಧರ್ಮದರ್ಶಿಗಳು, ಗುರುರಾಘವೇಂದ್ರ ಮಠದ ಹರಿಕೃಷ್ಣ ಕೆಂತೂರ್, ಮಕ್ಕಳ ಆಯೋಗದ ಅಧ್ಯಕ್ಷ ಮರಿಸ್ವಾಮಿ, ವಕೀಲೆ, ಉಚ್ಚ ನ್ಯಾಯಾಲಯ, ರಾಜರಾಜೇಶ್ವರಿ.ಎಸ್, ಲೋಕಯುಕ್ತ ಡಿವೈಎಸ್‍ಪಿ ರಾಜೇಶ್.ಎಲ್.ವೈ,ವಿತರಕ ರಮೇಶ್‍ಬಾಬು, ನಟ ವಿಕ್ಟರಿವಾಸು, ಅರ್ಜುನ್‍ದೇವ್ ಮುಂತಾದವರು ಉಪಸ್ತಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin