ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್ : `S/o ಮುತ್ತಣ್ಣ’ ಫಸ್ಟ್ ಫಸ್ಟ್ ಲುಕ್ ಬಿಡುಗಡೆ
ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ ನಟನೆಯ S/o ಮುತ್ತಣ್ಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಶ್ರೀಕಾಂತ್ ಯೋಚನೆಯೇ ಬೇರೆ. ಇಡೀ ಟೀಂ ಅಣ್ಣ ತಮ್ಮಂದಿರ ತರ ಇದ್ದೇವೆ. ನಿರ್ಮಾಪರು ಎಲ್ಲದಕ್ಕೂ ಬೆಂಬಲ ಕೊಟ್ಟಿದ್ದಾರೆ. ಖುಷಿ ರವಿ ಅವರು ಎಂಥ ನಟಿ ಅನ್ನೋದು ದಿಯಾದಿಂದ ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ನಾಯಕಿ ಖುಷಿ ರವಿ ಮಾತನಾಡಿ, S/o ಮುತ್ತಣ್ಣ ಅಂತಾ ಹೇಳಿದ ತಕ್ಷಣ ಪಾಸಿಟಿವ್ ವೈಬ್ಸ್ ಬರುತ್ತದೆ. ಟೈಟಲ್ ತುಂಬಾ ಪವರ್ ಫುಲ್ ಆಗಿದೆ. ಟೈಟಲ್ ಕೇಳಿಯೇ ಸಿನಿಮಾ ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ. ರಂಗಾಯಣ ರಘು ಸರ್ ಕ್ಯಾಮೆರಾ ಹೇಗೆ ಫೇಸ್ ಮಾಡಬೇಕು ಅನ್ನೋದನ್ನು ಹೇಳಿ ಕೊಟ್ಟರು. ಪ್ರಣಮ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು.
ನಿರ್ದೇಶಕ ಶ್ರೀಕಾಂತ್ ಮಾತನಾಡಿ, ದೇವರಾಜ್ ಸರ್ ಕಥೆ ಹೇಳಲು ಹೋದಾಗ ಎಲ್ಲಿ ಕೆಲಸ ಮಾಡಿದ್ದೀಯಾ ನಿನ್ನ ಪ್ರೊಫೈಲ್ ಕೊಡು ಹೀಗೆ ಒಂದು ಮಾತು ಹೇಳದೆ ನಾನು ಹೇಳಿದ ಕಥೆಗೆ ಏನ್ ಮಾಡುತ್ತೀರಾ ಮಾಡಿ ಎಂದು ಬೆಂಬಲ ಕೊಟ್ಟರು. ಟೈಟಲ್ ಹೇಳುವಂತೆ ಇದು ಅಪ್ಪ-ಮಗನ ಬಾಂಧವ್ಯದ ಕಥೆ. ಸದ್ಯ ವಾರಣಾಸಿ ಭಾಗದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇವೆ. ಸಾಂಗ್ ಬಾಕಿ ಇದೆ. ಪಾಂಡಿಚೆರಿಯಲ್ಲಿ ಶೂಟ್ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಫೆಬ್ರವರಿಯಲ್ಲಿ ಕುಂಬಳಕಾಯಿ ಹೊಡೆಯಲು ಪ್ಲಾನ್ ಮಾಡಿಕೊಂಡಿದ್ದೇವೆ. ಆ ನಂತರ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಹಿರಿಯ ಕಲಾವಿದ ರಂಗಾಯಣ ರಘು ಮಾತನಾಡಿ, ಚಿತ್ರತಂಡದೊಂದಿಗೆ ಕೆಲಸ ಮಾಡಿದ ಅನುಭನ ಚೆನ್ನಾಗಿತ್ತು.ಕಾಶಿಯಲ್ಲಿ ವಿಶ್ವನಾಥನ ದರ್ಶನ ಆಯಿತು, ಸನ್ ಆಫ್ ಮುತ್ತಣ್ಣ ಚಿತ್ರದಲ್ಲಿ ಮುತ್ತಣ್ಣನ ಪಾತ್ರ ಮಾಡುತ್ತಿದ್ದೇನೆ, ನಾಯಕ ಮಗನೋ ಇಲ್ಲ ನಾಯಲಿ ಮಗಳೋ ಚಿತ್ರದಲ್ಲಿಯೋ ನೋಡಿ ಎಂದರು
ನಿರ್ಮಾಪಕರು ಮಾತನಾಡಿ, ಕಥೆ ಬಗ್ಗೆ ತುಂಬಾ ಚರ್ಚೆ ಮಾಡಿ ಈ ಸಿನಿಮಾ ಮಾಡಿದ್ದೇವೆ. ಪ್ರಣಂ ಸರ್ ಗೆ ಇದೇ ಕಥೆ ಮಾಡಬೇಕೆಂದು ಮಾಡಿದ್ದೇವೆ. ಕಥೆ ತುಂಬಾ ಚೆನ್ನಾಗಿ ಬಂದಿದೆ. ಮೇಕಿಂಗ್ ನಾವು ಅಂದುಕೊಂಡಂತೆ ಬಂದಿದೆ ಎಂದರು.
ಶ್ರೀಕಾಂತ್ ಹುಣಸೂರು ನಿರ್ದೇಶಿಸುತ್ತಿರುವ `S/o ಮುತ್ತಣ್ಣ’ ಸಿನಿಮಾದಲ್ಲಿ ಪ್ರಣಮ್ ದೇವರಾಜ್ ನಾಯಕನಾಗಿ ನಟಿಸುತ್ತಿದ್ದು, ಖುಷಿ ರವಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರ ತಾರಾಬಳಗವಿದೆ. ಟೈಟಲ್ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದೆ.
ಪುರಾತನ ಫಿಲಂಸ್ ಬ್ಯಾನರ್ ನಡಿ ಎಸ್ ಆರ್ ಕೆ ಫಿಲ್ಮಂಸ್ ಸಹಕಾರದೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. S/oಮುತ್ತಣ್ಣ ಸಿನಿಮಾಗೆ ಸ್ಕೇಟ್ಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರತಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.
ಇದೆ ವೇಳೆ ನಾಯಕ ಪ್ರಣಾಮ್ ದೇವರಾಜ್ ಹಾಗು ನಾಯಕಿ ಖುಷಿ ರವಿ ಅವರ ಹುಟ್ಟುಹಬ್ಬವನ್ನು ಚಿತ್ರ ತಂಡ ಆಚರಿಸಿತು