Dollu film producer who won the national award was honored in Dubai.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕರಿಗೆ ದುಬೈನಲ್ಲಿ ಸನ್ಮಾನ… - CineNewsKannada.com

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕರಿಗೆ ದುಬೈನಲ್ಲಿ ಸನ್ಮಾನ…

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕರಿಗೆ ದುಬೈನಲ್ಲಿ ಸನ್ಮಾನ…IIMF ಲೋಗೋ ಅನಾವರಣ ಮಾಡಿದ ಪವನ್ ಒಡೆಯರ್ .ರಾಷ್ಟ್ರಪ್ರಶಸ್ತಿ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್ ಗೆ ಅನಿವಾಸಿ ಕನ್ನಡಿಗರಿಂದ ಸನ್ಮಾನ…IIMF ಲೋಗೋ ಅನಾವರಣ ಮಾಡಿದ ಗೂಗ್ಲಿ ಡೈರೆಕ್ಟರ್

ಕನ್ನಡ ಸಿನಿಮಾ ಪ್ರೇಮಿಗಳಿಗೆ ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಸದಾಭಿರುಚಿ ಚಿತ್ರಗಳನ್ನು ಉಣಬಡಿಸಿರುವ ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ ಡೊಳ್ಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಹಲವು ಅಂತರಾಷ್ಟ್ರೀಯ ಚಲನಚಿತ್ರೋದ್ಯವದಲ್ಲಿ ಪ್ರದರ್ಶನ ಕಂಡು, ವಿವಿಧ ವಿಭಾಗದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು 68ನೇ ರಾಷ್ಟ್ರೀಯ
ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಇಂದಿನ ಕಾಲಘಟ್ಟದಲ್ಲಿ ನಶಿಸುತ್ತಿರುವ ಜನಪದ ಕಲೆ ಡೊಳ್ಳು ಸುತ್ತ ಸಾಗುವ ಈ ಕಥೆಯನ್ನು ಪ್ರತಿಯೊಬ್ಬರು ಅಪ್ಪಿಕೊಂಡಿದ್ದಾರೆ. ಸಿನಿರಸಿಕರಿಂದ ಹಿಡಿದು ರಾಜಕೀಯ ನಾಯಕರೋಪಾದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಈ ಸಿನಿಮಾವನ್ನು ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ ನಡಿ ಪತ್ನಿ ಜೊತೆಗೂಡಿ ನಿರ್ಮಾಣ ಮಾಡಿದ್ದರು. ಕಮರ್ಷಿಯಲ್ ಸಿನಿಮಾಗಳ ಆರ್ಭಟದ ನಡುವೆ ಇಂತಹ ವಿಭಿನ್ನ ಕಥೆಯನ್ನು ನಿರ್ಮಿಸಿರುವ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರನ್ನು ದುಬೈ ಅನಿವಾಸಿ ಕನ್ನಡಿಗರು ಸನ್ಮಾನಿಸಿ ಗೌರವಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಪೀಟರ್ ಜಾಸನ್ ಮತ್ತು ರಶ್ಮಿ ಪೀಟರ್, ಮಮತಾ ಸಿಂಥಿಲ್ ಸೇರಿದಂತೆ ಹಲವರು ತಮ್ಮ ಸಿನಿಮಾ ಮೇಲಿನ ಪ್ರೀತಿಯಿಂದ ಟೀಂ ಸುಪ್ರೀಂ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಡಿ ಭಾರತದ ಚಿತ್ರರಂಗದ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-ಸ್ಯಾಂಡಲ್ ವುಡ್-2023 ( IIMF) ಕಾರ್ಯಕ್ರಮದ ಮೂಲಕ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಇದೇ ತಿಂಗಳ 16ರಂದು ಹಮ್ಮಿಕೊಂಡಿದ್ದ IIMF ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಟಗರು, ಸಲಗ ಸಿನಿಮಾಗಳ ಖ್ಯಾತಿ ಸಂಭಾಷಣೆಗಾರ ಮಾಸ್ತಿ ಭಾಗಿಯಾಗಿದ್ದರು. ಚಿತ್ರರಂಗದಲ್ಲಿ ತಮ್ಮದೇ ಸೇವೆ ಸಲ್ಲಿಸಿರುವ ಇವರಿಬ್ಬರು IIMF ಲೋಗೋ ಲಾಂಚ್ ಮಾಡಿ ಟೀಂ ಸುಪ್ರೀಂ ಸಂಸ್ಥೆಗೆ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಪವನ್ ಒಡೆಯರ್, ಇದೊಂದು ಗ್ರೇಟ್ ಇವೆಂಟ್. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ತಮ್ಮ ಕೆಲಸ ಗುರುತಿಸಿ ನೀಡಿರುವ ಗೌರವ ಖುಷಿ ಕೊಟ್ಟಿದೆ. ಡೊಳ್ಳು ಸಿನಿಮಾ ನಿರ್ಮಾಣ ಮಾಡಿರುವುದು ಹೆಮ್ಮೆ ಇದೆ ಎಂದರು.

ರೇಮೋ ಸಕ್ಸಸ್ ಬಳಿಕ ಬಾಲಿವುಡ್ ಗೆ ಹಾರಿರುವ ಗೂಗ್ಲಿ ಡೈರೆಕ್ಟರ್ ಪವನ್, ಬೆಂಗಾಲಿ ತಾರೆ ಪರಂಬ್ರತಾ ಉಪಾಧ್ಯಾಯ ಹಾಗೂ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸ್ತಿರುವ ನೋಟರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಾಶ್ ಎಂಟರ್ ಟೈನ್ಮೆಂಟ್ ಪ್ರೊಡಕ್ಷನ್ ಜೊತೆಗೂಡಿ ಒಡೆಯರ್ ಮೂವೀಸ್ ಮತ್ತು ಆರ್ನ ಕ್ರಿಯೇಟಿವ್ಸ್ ಮೀಡಿಯಾ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin