Music director director Ilayaraja who had darshan of Srichamundeshwari
ಶ್ರೀಚಾಮುಂಡೇಶ್ವರಿ ದರ್ಶನ ಪಡೆದ ಸಂಗೀತ ನಿರ್ದೇಶಕ ನಿರ್ದೇಶಕ ಇಳಯರಾಜ

ಹಲವು ವರ್ಷಗಳಿಂದ ತಮ್ಮ ಅದ್ಭುತ ಸಂಗೀತ ನಿರ್ದೇಶನದ ಮೂಲಕ ಜಗತ್ಪ್ರಸಿದ್ಧರಾಗಿರುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಇತ್ತೀಚಿಗೆ ಮೈಸೂರಿನ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರೇಕ್ಷಕರು ಇಳಯರಾಜ ಸಂಗೀತ ಸಂಯೋಜನೆಯ ಹಾಡುಗಳ ಮೋಡಿಗೆ ಮರಳಾದರು. ಈ ಕಾರ್ಯಕ್ರಮದ ಸಲುವಾಗಿ ಮೈಸೂರಿಗೆ ಆಗಮಿಸಿದ್ದ ಇಳಯರಾಜ ಅವರು ಮೊದಲು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು.
ಇಳಯರಾಜ ಅವರ ಆಪ್ತರಾದ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್, ಇಳಯರಾಜ ಅವರು ಮೈಸೂರಿಗೆ ಬಂದು ಹಿಂತಿರುಗುವವರೆಗೂ ಅವರೊಡನೆ ಇದ್ದು ಯಾವುದೇ ತೊಂದರೆ ಆಗದಂತೆ ಸುಲಲಿತವಾಗಿ ಸಮಾರಂಭ ನಡೆಯಲು ಸಹಕಾರಿಯಾಗಿದ್ದು ವಿಶೇಷವಾಗಿತ್ತು.