ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರಕ್ಕೆ ಡಾ. ವಿರೇಂದ್ರ ಹೆಗ್ಗಡೆ ಶುಭ ಹಾರೈಕೆ

ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮಾಧವಾನಂದ ನಿರ್ಮಿಸುತ್ತಿರುವ ಪ್ರಭೂಜೀ ಮಹಾರಾಜರ ಮಾರ್ಗದರ್ಶನದಲ್ಲಿ ರಾಜಾ ರವಿಶಂಕರ್ ನಿರ್ದೇಶನದ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಹಾಡುಗಳು ತಯಾರಾಗಿದ್ದು ಧರ್ಮಾಧಿಕಾರಿಗಳಾದ ಶ್ರೀವೀರೇಂದ್ರ ಹೆಗಡೆ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಲಿರಿಕಲ್ ವಿಡಿಯೋ ಪೆÇೀಸ್ಟರ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ
ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಹಾಗು ಚಲನಚಿತ್ರದ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿದರು. ಚುಟು ಚುಟು ಖ್ಯಾತಿಯ ತಮ್ಮ ಅದ್ಭುತ ಗಾಯನದಿಂದ ಜನಪ್ರಿಯರಾಗಿರುವ ಗಾಯಕ ರವೀಂದ್ರ ಸೊರಗಾವಿ ಅವರು “ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ” ಭಕ್ತಿ ಪ್ರಧಾನ ಹಾಡಿಗೆ ಪ್ರಶಂಸಿಸಿದ್ದಾರೆ
ಜಮಖಂಡಿ ತಾಲ್ಲೂಕಿನ ಕೃಷ್ಣಾ ನದೀತೀರದ ಹಿಪ್ಪರಗಿಯ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆ “ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು” ಚಿತ್ರದ ವಿಶೇಷವಾಗಿ ಶ್ರೀಸಂಗಮೇಶ್ವರರ ಚಿತ್ರದ ಹಾಡುಗಳು ಹಾಗು ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರು ಹಾರೈಸಿದರು.
ನೂತನ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ತುಷಾರ್ ಮಲಗೊಂಡ, ಭವ್ಯಶ್ರೀ ರೈ, ಮುಂತಾದವರು ತಾರಾಬಳಗದಲ್ಲಿದ್ದಾರೆ.
ರಾಜಾ ರವಿಶಂಕರ್ ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಾಹಣ, ಎ ಟಿ ರವೀಶ್ ಸಂಗೀತ, ಡಿ ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.