ಸಾಹಸಸಿಂಹ ಡಾ. ವಿಷ್ಣುವರ್ಧನ್ ನೆನಪಿನ ” ಸಿಂಹದ ಹಾದಿ” ಟೆಲಿ ಫಿಲಂ ಟ್ರೈಲರ್ ಬಿಡುಗಡೆ

2009ರ ಡಿಸೆಂಬರ್ 30ರ ಮುಂಜಾನೆ ಅಭಿಮಾನಿಗಳ ಪಾಲಿಗೆ ಎಂದೂ ಮರೆಯಲಾರದ ದಿನ. ನಾಡು ಕಂಡ ಶ್ರೇಷ್ಠ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿದ ದಿನ. ವಿಷ್ಣು ದಾದ ಅಭಿಮಾನಿಗಳನ್ನು ದೈಹಿಕವಾಗಿ ಬಿಟ್ಟರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಡಾ. ವಿಷ್ಣುವರ್ಧನ್ ಕಾಲವಾಗಿ ಹದಿನೈದು ವರ್ಷಗಳಾದರೂ ಅಭಿಮಾನಿಗಳ ಹೃದಯದಲ್ಲಿ ಸಾಹಸ ಸಿಂಹ ಅಮರವಾಗಿದ್ದಾರೆ.

ವಿಷ್ಣುವರ್ಧನ್ ಅಭಿನಯಿಸಿದ ಸಿನೆಮಾಗಳು, ವಿಭಿನ್ನ ಪಾತ್ರಗಳು ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ನೆಚ್ಚಿನ ನಟನನ್ನು ಜೀವಂತವಾಗಿರಿಸುವ ಪ್ರಯತ್ನ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ʼಸಿಂಹದ ಹಾದಿʼ ಟೆಲಿಫಿಲಂ ಮೂಲಕ ವಿಷ್ಞುವರ್ಧನ್ ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ

ಬಾಲ್ಯದಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ ಜಿ. ಕೆ. ಶಶಿರಾಜ್ ದೊರೈ ʼಸಿಂಹದ ಹಾದಿʼ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ
ಡಾ. ವಿಷ್ಣುವರ್ಧನ್ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿʼ ಅಧ್ಯಕ್ಷ ಕೃಷ್ಣೇಗೌಡ, ‘ ಚಲನಚಿತ್ರ ವಾಣಿಜ್ಯ ಮಂಡಳಿʼ ಅಧ್ಯಕ್ಷ ಭಾ. ಮ. ಹರೀಶ್ ನಿರ್ಮಾಪಕರ ಸಂಘʼದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟಿ ಲಕ್ಷ್ಮಿದೇವಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಎಸ್ ವೀರಯ್ಯ ಸೇರಿದಂತೆ ಅನೇಕರು ಭಾಗಿಯಾಗಿ ‘ಸಿಂಹದ ಹಾದಿʼ ಟೆಲಿಚಿತ್ರದ ಟ್ರೇಲರ್ ಅನಾವರಣಗೊಳಿಸಿದರು.

ನಿರ್ದೇಶಕ ಶಶಿರಾಜ್ ದೊರೆ ಮಾತನಾಡಿ ಡಾ.ವಿಷ್ಣುವರ್ಧನ್ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನ ಆಧರಿಸಿ, ಟೆಲಿಚಿತ್ರ. ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ ಚಿತ್ರಗಳು, ನಿರ್ವಹಿಸಿರುವ ಪಾತ್ರಗಳು, ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿ ಟೆಲಿಚಿತ್ರವನ್ನು ಮಾಡಿದ್ದೇವೆ. ವಿಷ್ಣುವರ್ಧನ್ ಅವರ ಜೀವನ-ಸಾಧನೆಯನ್ನು ಮುಂದಿನ ಜನರಿಗೆ ತೋರಿಸುವ ಸಣ್ಣ ಕೆಲಸ ನಮ್ಮದು ಎಂದು ಹೇಳಿದರು.

ಸಿಂಹದ ಹಾದಿʼ ಟೆಲಿಫಿಲಂನಲ್ಲಿ ಶಶಿರಾಜ್ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್, ಮಂಜು, ಮಹೇಶ್ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ‘ಸಿಂಹದ ಹಾದಿ’ ಟೆಲಿಫಿಲಂ ಸುಮಾರು 75ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ
