Dual Role in thriller kannada movie Pshyco Killer
ಸೈಕೋ ಕಿಲ್ಲರ್ ಸುತ್ತಾ ದ್ವಿಪಾತ್ರ

ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಸೈಕೋಕಿಲ್ಲರ್ ಕಥಾ ಹಂದರವಿರುವ ಚಿತ್ರವನ್ನು ತೆರೆಗೆ ಕಟ್ಟಿಕೊಡಲು ನಿರ್ದೇಶಕ ಶ್ರೀವತ್ಸ ಆರ್ ಮುಂದಾಗಿದ್ದಾರೆ.
ಚಿತ್ರದ ಟ್ರೈಲರ್ ಪ್ರದರ್ಶನದ ಬಳಿಕ ತಂಡ ಮಾತಿಗಿಳಿಯಿತು. ನಿರ್ದೇಶಕ ಶ್ರೀವತ್ಸ, 2016ರಲ್ಲಿ ಕೇರಳದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು, ಡಬಲ್ ಡಿಎನ್‍ಎ ಮನುಷ್ಯನಿಗಿದ್ದರೆ ಏನಾಗುತ್ತೆ, ಆತನೊಬ್ಬ ಸೈಕೋಕಿಲ್ಲರ್ ಆದರೆ ಹೇಗಿರುತ್ತೆ ಎಂದು ಚಿತ್ರದಲ್ಲಿ ತೋರಿಸಿದ್ದೇನೆ, ಚಿತ್ರದಲ್ಲಿ 4 ಪ್ರಮುಖ ಪಾತ್ರಗಳಿದ್ದು, ಡಾರ್ಕ್ ವೆಬ್‍ಸೈಟ್ ಬಗ್ಗೆಯೂ ಹೇಳಿದ್ದೇವೆ. ಡಿಫರೆಂಟ್ ಜಾನರ್ ಕಥೆ ಜನರ ಮುಂದಿಡಬೇಕು ಎನ್ನುವ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ ಎನ್ನುವ ವಿವರ ನೀಡಿದರು..