Sidlingu sequel begins after 12 years: Actress Sonugowda replaces charming star Ramya

12 ವರ್ಷದ ಬಳಿಕ ಸಿದ್ಲಿಂಗು ಸೀಕ್ವೆಲ್ ಆರಂಭ: ಮೋಹಕ ತಾರೆ ರಮ್ಯಾ ಜಾಗಕ್ಕೆ ಬಂದ ನಟಿ ಸೋನುಗೌಡ - CineNewsKannada.com

12 ವರ್ಷದ ಬಳಿಕ ಸಿದ್ಲಿಂಗು ಸೀಕ್ವೆಲ್ ಆರಂಭ: ಮೋಹಕ ತಾರೆ ರಮ್ಯಾ ಜಾಗಕ್ಕೆ ಬಂದ ನಟಿ ಸೋನುಗೌಡ

ಹನ್ನೆರಡು ವರ್ಷಗಳ ಹಿಂದೆ ಮೋಹಕ ತಾರೆ ರಮ್ಯಾ, ಲೂಸ್ ಮಾದ ಯೋಗಿ ಅಭಿನಯದ “ಸಿದ್ಲಿಂಗು” ಚಿತ್ರ ಬಾರಿ ಸದ್ದು ಮಾಡಿದ್ದು ಅದಕ್ಕೆ ಕಾರಣ ಒಂದಷ್ಟು ಹೊಸತನ ಇದೆ ಎನ್ನುವ ಕಾರಣಕ್ಕೆ. ಚಿತ್ರ ತೆರೆಗೆ ಬಂದು 12 ವರ್ಷದ ಬಳಿಕ ಸಿದ್ಲಿಂಗು ಸೀಕ್ವೆಲ್ ಸೆಟ್ಟೇರಿದೆ.

ರಮ್ಯಾ ಜಾಗಕ್ಕೆ ನಟಿ ಸೋನುಗೌಡ ಬಂದಿದ್ದಾರೆ. ಲೂಸ್ ಮಾದ ನಾಯಕರಾಗಿ ಮುಂದುವರಿದಿದ್ದಾರೆ. ನಿರ್ದೇಶಕ ವಿಜಯಪ್ರಸಾದ್ ಮತ್ತೆ ಅದೇ ಹಳೆಯ ಫಾರ್ಮುಲ ಮುಂದಿಟ್ಟುಕೊಂಡು ಸಿದ್ಲಿಂಗು ಸೀಕ್ವೆಲ್ ತೆರೆಗೆ ತರುತ್ತಿದ್ದಾರೆ. ಇಲ್ಲ ಇತ್ತೀಚಿನ ಅವರ ಚಿತ್ರಗಳಿಂದ ಪಾಠ ಕಲಿತಿದ್ದಾರೆ ಚಿತ್ರ ತೆರೆಗೆ ಬರುವ ತನಕ ಕಾಯಬೇಕು.

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಚಿತ್ರಗಳ ಬಳಿಕ ಚೇಷ್ಠೆಗೆ ಫುಲ್ಸ್ಟಾಪ್ ಇಟ್ಟಿರೋ ವಿಜಯ್ ಪ್ರಸಾದ್, ಸಿದ್ಲಿಂಗು ಸೀಕ್ವೆಲ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಜೊತೆಗೆ ಚಿತ್ರ ಆರಂಭಿಸಿರುವ ವಿಜಯ ಪ್ರಸಾದ್ ಜೊತೆಗೆ ಈ ಬಾರಿ ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಜೊತೆಯಾಗಿದ್ದು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಸಿದ್ಲಿಂಗು.. ಈ ಸಿನಿಮಾ ಬಂದು ಬರೋಬ್ಬರಿ 12 ವರ್ಷಗಳಾಯ್ತು. ಇಂದಿಗೂ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಒಂದೊಳ್ಳೆ ಕಥೆ, ಸಂಬಂಧಗಳ ಮೌಲ್ಯಗಳು, ಕಾಮಿಡಿ, ಪ್ರೀತಿ, ಡೈಲಾಗ್ಸ್, ಸಾಹಿತ್ಯ, ಸಂಗೀತ ಹಾಗೂ ಮೇಕಿಂಗ್. ಇವೆಲ್ಲಾ ಕಾರಣದಿಂದ ಸಿದ್ಲಿಂಗು ವ್ಹಾವ್ ಫೀಲ್ ತರಿಸಿದ ಸಿನಿಮಾ ಆಗಿತ್ತು. ಇದೀಗ ಅದ್ರ ಸೀಕ್ವೆಲ್ ಸಿದ್ಲಿಂಗು-2 ಸೆಟ್ಟೇರಿದೆ.ನಿರ್ಮಾಪಕ ಶ್ರೀಹರಿರೆಡ್ಡಿ ಅವರ ಮನೆದೇವರ ಆಲಯದಲ್ಲಿ ಮುಹೂರ್ತ ಕೂಡ ನೆರವೇರಿಸಿದ್ದಾರೆ.

ಮುಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ವಿಜಯ ಪ್ರಸಾದ್ ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಸಿನಿಮಾಗಳ ಬಳಿಕ ಡಬಲ್ ಮೀನಿಂಗ್ ಡೈಲಾಗ್ ಗೆ ಕಡಿವಾಣ ಹಾಕಿ, ಹೊಸ ಹುರುಪು ಹುಮ್ಮಸ್ಸಿನಿಂದ ಸಿದ್ಲಿಂಗು-2 ಮಾಡಲು ಮುಂದಾಗಿದ್ದೇನೆ. ಇಲ್ಲಿ ಬರೀ ಮೀನಿಂಗ್ ಇರಲಿದೆ. ಡಬಲ್ ಮೀನಿಂಗ್ ಇರಲ್ಲ ಅಂತ ಜನಕ್ಕೆ ಕೈ ಮುಗಿದರು. ಅಲ್ಲದೆ, ಯಾರೂ ನಂಬಲಾರದ ಸ್ಥಿತಿಯಲ್ಲಿದ್ದ ತನ್ನನ್ನ ನಂಬಿದ ನಿರ್ಮಾಪರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಈ ಬಾರಿ 6 ರಿಂದ 60 ವರ್ಷದ ಎಲ್ಲರೂ ನೋಡಬಹುದಾದ ಸಿನಿಮಾ ಎನ್ನುವ ಭರವಸೆ ನೀಡಿದರು.

ನಟ ಲೂಸ್ ಮಾದ ಯೋಗಿ ಮಾತನಾಡಿ, ಸಿದ್ಲಿಂಗ್ ನನ್ನ ಕರಿಯರ್‍ಗೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಹಾಗಾಗಿಸೀಕ್ವೆಲ್ ಬರ್ತಿರೋದು ಖುಷಿಯ ವಿಚಾರ. ಹದಿನೈದು ವರ್ಷದ ಗೆಳತಿ ಸೋನು ಗೌಡ ಜೊತೆ ಇಲ್ಲಿಯವರೆಗೂ ಸಿನಿಮಾ ಮಾಡೋ ಅವಕಾಶಗಳು ಸಿಗಲೇ ಇಲ್ಲ. ಇದೀಗ ಒಟ್ಟಿಗೆ ಕೆಲಸ ಮಾಡ್ತಿರೋದು ಸಂತೋಷವಾಗ್ತಿದೆ. ರಮ್ಯಾ ಅವ್ರು ಇರಲ್ಲ, ಆಂಡಾಳಮ್ಮನನ್ನ ಬಿಡಲ್ಲ ಅಂದು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು

ನಟಿ ಸೋನುಗೌಡ ಮಾತನಾಡಿ ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಪಾತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ನಿರ್ದೇಶಕರು ಸಿದ್ಲಿಂಗು-2ಗೆ ಆಫರ್ ಮಾಡಿದ್ದು ನಿಜಕ್ಕೂ ಸಪ್ರ್ರೈಸ್ . ಕಲಾವಿದೆಯಾಗಿ ನಾನು ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತೇನೆ ಅಂತ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಹೇಳುತ್ತಲೇ ನಟ ಯೋಗಿ ಅವರನ್ನು ಕೊಂಡಾಡಿದರು

ನಿರ್ಮಾಪಕ ಶ್ರೀಹರಿ ರೆಡ್ಡಿ ಮಾತನಾಡಿ, ಜಮಾಲಿ ಗುಡ್ಡ ಚಿತ್ರದ ಬಳಿಕ ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ. ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು

ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್, ಆಂಟೊನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಮುಂದಿನ ವಾರದಿಂದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin