ಮೂವರ ಪಯಣದ ರೋಚಕ ಕಥನ “3 ದೇವಿ”.
ಚಿತ್ರ : 3 ದೇವಿ
ನಿರ್ದೇಶಕ : ಅಶ್ವಿನ್ ಮ್ಯಾಥ್ಯ.
ತಾರಾಗಣ : ಶುಭಾ ಪೂಂಜಾ, ಜ್ಯೋತ್ಸಾ ರಾವ್, ಸಂಧ್ಯಾ, ಅಶ್ವಿನ್ ಮ್ಯಾಥ್ಯ, ಜಯದೇವ್, ಅಶ್ವಿನ್ ಕುಮಾನ್, ಅಶೋಕ್ ಮಂದಣ್ಣ, ಪಿ.ಡಿ. ಸತೀಶ್ ಮತ್ತಿತರು
ರೇಟಿಂಗ್ : *** 3/5
ಕಾಡು, ಶಕ್ತಿ ದೇವತೆ, ಪ್ರಾಣಿ ,ಪರಿಸರದ ಜೊತೆ ಜೊತೆಗೆ ಮೂರು ಮಂದಿಯ ಪಯಣದ ರೋಚಕ ಕಥೆಯ ಹೂರಣದ ಜೊತೆಗೆ ಚಿತ್ರದೊಳಗಿನ ಚಿತ್ರದ ತಿರುಳು ಹೊಂದಿದ ಚಿತ್ರ ” 3 ದೇವಿ” ಈ ವಾರ ತೆರೆಗೆ ಬಂದಿದೆ.
ದಟ್ಟ ಅರಣ್ಯದ ನಡುವೆ ಒಬ್ಬ ಕಾಡು ಮನುಷ್ಯ ಹೇಳುವ ಹೆಣ್ಣು ಹುಲಿ ಬೇಟೆ ಆಡಲು ಬಂದವನ ಪರಿಸ್ಥಿತಿ ಅಲ್ಲಿ , ಶಕ್ತಿ ದೇವಿ ಮಾಸ್ತಮ್ಮ, ಅರಣ್ಯ ಸಂರಕ್ಷಣೆ, ಮನುಷ್ಯನ ದುರಾಸೆ ಸೇರಿದಂತೆ ಮತ್ತಿತತರ ವಿಷಯಗಳನ್ನು ಮನಮುಟ್ಟುವಂತೆ ನಿರ್ದೇಶಕ ಆಶ್ವಿನ್ ಮ್ಯಾಥ್ಯ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
ತಾರಾನಟಿ ವಿಜಯಲಕ್ಷ್ಮಿ-ಶುಭಾಪೂಂಜಾ ಶಕ್ತಿದೇವಿ ಪಾತ್ರದಲ್ಲಿ ಕಾಣಿಸಿಕೊಂಡವರು. ಚಿತ್ರೀಕರಣದ ಬಿಡುವಿಲ್ಲದ ಸಮಯದ ನಡುವೆಯೂ ತನ್ನ ಸ್ನೇಹಿತೆ ಮರಿಯಾ – ಸಂಧ್ಯಾ ಮದುವೆ ಹೋಗಲು ನಿರ್ಧರಿಸುತ್ತಾಳೆ. ಮದುವೆಗಾಗಿ ಅನುಮತಿಗಾಗಿ ವಿನಂತಿ ಮಾಡಿಕೊಂಡರೂ ನಿರ್ದೇಶಕರಿಂದ ಅನುಮತಿ ಸಿಗದು.ಇಂತಹ ಸಮಯದಲ್ಲಿ ನಟಿ ದಿಢೀರ್ ಅಲ್ಲಿಂದ ಕಾಣೆಯಾಗುತ್ತಾರೆ.
ಚಿತ್ರೀಕರಣದ ಸ್ಥಳದಲ್ಲಿ ನಟಿ ಇಲ್ಲದಿರುವುದನ್ನು ಗಮನಿಸಿದ ನಿರ್ಮಾಪಕ -ಜಯದೇವ್ ಮತ್ತು ಅವರ ಸಹಾಯಕರು ನಟಿಗಾಗಿ ಹುಡುಕಾಟ ನಡೆಸುತ್ತಾರೆ. ಮತ್ತೊಂದೆಡೆ ಜೀವನದಲ್ಲಿ ಗುರಿ ಇಟ್ಟುಕೊಂಡ ವ್ಯಕ್ತಿ ಪತ್ನಿಯ ಮಾತು ಕೇಳದೆ ಅರಣ್ಯದಲ್ಲಿ ಬೇಟೆಗೆ ವ್ಯಕ್ತಿ- ಅಶ್ವಿನ್ ಮ್ಯಾಥ್ಯ ಮುಂದಾಗುತ್ತಾರೆ.
ಒಂದು ಕಡೆ ಮದುವೆಗೆ ಹೊರಟ ನಟಿ,ಆಕೆಯನ್ನು ಹುಡುಕಿಕೊಂಡು ಹೊರಟ ನಿರ್ಮಾಪಕ ಜೊತೆಗೆ ಅರಣ್ಯದಲ್ಲಿ ಬೇಟೆಗೆ ಸಜ್ಜಾದ ಮೂರು ವಿಭಿನ್ನ ವ್ಯಕ್ತಿತ್ವದ ಘಟನೆಗಳನ್ನು 3 ದೇವಿ ಚಿತ್ರದ ಮೂಲಕ ಕುತೂಹಲ ಮತ್ತು ರೋಚಕ ಭರಿತವಾಗಿ ತೆರೆಯ ಮೇಲೆ ತರಲಾಗಿದೆ. ಅದು ಏನು, ದಾರಿ ಯಾವುದು ಎನ್ನುವುದು ಚಿತ್ರದ ಕುತೂಹಲದ ಸಂಗತಿ.
ನಿರ್ದೇಶಕ ಹಾಗೂ ನಿರ್ಮಾಪಕ ಅಶ್ವಿನ್ ಮ್ಯಾಥ್ಯ ಉತ್ತಮ ಪ್ರಯತ್ನ ಮಾಡಿದ್ದಾರೆ.ಈ ಮೂಲಕ ವಿಭಿನ್ನ ಕಥೆಯನ್ನು ಸಮರ್ಥವಾಗಿ ಚಿತ್ರದ ಮೂಲಕ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಪ್ರಾಣಿಗಳ ವಾಸಿಸುವ ಸ್ಥಳಕ್ಕೆ ಹೋಗಬಾರದೆಂಬ ವಿಚಾರದ ಜೊತೆಗೆ ಅರಣ್ಯ ಸಂರಕ್ಷಣೆ ಮುಖ್ಯ ಎಂಬಂತಿದೆ. ಮನುಷ್ಯನ ದುರಾಸೆ , ಸೇರಿದಂತೆ ಮತ್ತಿತರ ಸಂಗತಿಗಳು ಚಿತ್ರವನ್ನು ಕಡೆ ತನಕ ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ಸಫಲವಾಗಿದ್ದಾರೆ.
ತಾರಾ ನಟಿಯಾಗಿ ಶುಭಾ ಪೂಂಜಾ ಸಹಜವಾಗಿ ನಟಿಸಿ ಗಮನ ಸೆಳೆದಿದ್ದಾರೆ. ನಟಿಯರಾದ ಸಂಧ್ಯಾ ಹಾಗೂ ಜ್ಯೋತ್ಸಾ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಅಶ್ವಿನಿ ಮ್ಯಾಥ್ಯ , ಜೈದೇವ್ , ಪ್ರೇಯ ಕೊಠಾರಿ, ನಂದಗೋಪಾಲ್, ತಿಲಕ್ ರಾಜ್, ನಿಖಿಲ್, ಪಿ.ಡಿ. ಸತೀಶ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ.ಡಾಸ್ ಮೋಡ್ ಸಂಗೀತ , ಕುಂಜುನ್ನಿ ,ಛಾಯಾಗ್ರಹಣ ಚಿತ್ರಕ್ಕಿದೆ.