A mother wrote a story for "Premi" out of love for her son. Translate a conversation

ಮಗನ ಮೇಲಿನ ಪ್ರೀತಿಗೆ ” ಪ್ರೇಮಿ” ಗಾಗಿ ಕಥೆ ಬರೆದ ಅಮ್ಮ - CineNewsKannada.com

ಮಗನ ಮೇಲಿನ ಪ್ರೀತಿಗೆ ” ಪ್ರೇಮಿ” ಗಾಗಿ ಕಥೆ ಬರೆದ ಅಮ್ಮ

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅಪ್ಪ ತನ್ನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಕಥೆ ಬರೆಯುವುದು. ನಿರ್ಮಾಣ ಮಾಡುವುದು ವಾಡಿಕೆ.‌ಫಾರ್ ಎ ಚೇಂಜ್ ಎನ್ನುವಂತೆ ಅಮ್ಮ ಮಗನ ಮೇಲಿನ ಪ್ರೀತಿಗಾಗಿ ” ಪ್ರೇಮಿ” ಚಿತ್ರಕ್ಕೆ ಕಥೆ ಬರೆದು ಮಗನ ಆಸೆಗೆ ಒತ್ತಾಸೆಯಾಗಿ ನಿಂತಿದ್ದಾರೆ.

ಜೊತೆಗೆ ಅಪ್ಪ ಬಿ.ಸಿದ್ದಲಿಂಗಯ್ಯ “ಪ್ರೇಮಿ ” ಚಿತ್ರವನ್ನು ನಿರ್ಮಿಸಿದ್ದು ತಾಯಿ ಅಕ್ಕ ಮಹಾದೇವಿ ಕಥೆ ಬರೆದು ” ಪುತ್ರ ಅದ್ವಿಕ್ ನನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಜವಾಬ್ದಾರಿಯನ್ನು ಯುವ ನಿರ್ದೇಶಕ ಪ್ರದೀಪ್ ವರ್ಮ ಅವರಿಗೆ ಒಪ್ಪಿಸಿದ್ದಾರೆ.

ಚಿತ್ರಕ್ಕಾಗಿ ನಿಖಿಲ್‌ ರಾಜ್ ಶೆಟ್ಟಿ ಸಾಹಿತ್ಯ ರಚಿಸಿ ಚೇತನ್ ಗಂಧರ್ವ ಹಾಡಿರುವ ಹಾಗು ಪ್ರದೀಪ್ ವರ್ಮ ಸಂಗೀತ ನೀಡಿರುವ “ಮನಸ್ಸು ಏನೋ ಕಾಡಿದೆ” ಹಾಡನ್ನು ಚಿಂತಲಪಲ್ಲಿ ಶ್ರೀನಿವಾಸ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಿರ್ದೇಶಕ ಪ್ರದೀಪ್ ವರ್ಮಾ ಮಾತನಾಡಿ ನೈಜ ಕಥೆ ಆದರಿಸಿದ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು “ಪ್ರೇಮಿ” ಚಿತ್ರದಲ್ಲಿದೆ. ಜ್ಯೋತಿಷ್ಯದ ಕುರಿತದ ವಿಷಯವೂ ಇದರಲ್ಲಿದೆ. ಐದು ಹಾಡುಗಳ ಪೈಕಿ ಮೊದಲ ಹಾಡು ಬಿಡುಗಡೆಯಾಗಿದೆ. ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನ ಮಾಡಿದ್ದು ಖಳನಾಯಕನಾಗೂ ಅಭಿನಯಿಸಿದ್ದೇನೆ ಎಂದರು.

ನಾಯಕ ಅದ್ವಿಕ್ ಮಾತನಾಡಿ ಬಾಲ್ಯದಿಂದಲೂ ನಟನಾಗಬೇಕೆಂಬ ಕನಸು. . ಅಪ್ಪ – ಅಮ್ಮ ನನ್ನ ಆಸೆಗೆ ಆಸರೆಯಾದರು. ಪ್ರದೀಪ್ ವರ್ಮ ನಿರ್ದೇಶನದ “ಕುರುಡು ಕಾಂಚಾಣ” ಚಿತ್ರದ ಕಥೆ ಕೇಳಿ ಚಿತ್ರವನ್ನು ಅವರಿಂದಲೇ ನಿರ್ದೇಶಿಸಬೇಕೆಂದು ತೀರ್ಮಾನ ಮಾಡಲಾಯಿತು. ಚಿತ್ರತಂಡದ ಸಹಕಾರದಿಂದ “ಪ್ರೇಮಿ” ಒಂದೊಳ್ಳೆ ಚಿತ್ರವಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಾಕಿಯಿರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಅನಾವರಣವಾಗಲಿದೆ ಎಂದರು

ಕಥೆ ಬರೆದಿರುವ ಅಕ್ಕಮಹಾದೇವಿ ಮಾತನಾಡಿ‌ ವೃತ್ತಿಯಲ್ಲಿ ಶಿಕ್ಷಕಿ. ಹಲವು ಕಥೆಗಳನ್ನು ಬರೆದಿದ್ದೇನೆ. ಪ್ರೇಮಕಥೆಗಳೆ ಹೆಚ್ಚು. ಇದು ನೈಜ ಕಥೆ. ಕಥೆ ಸಿನಿಮಾ ರೂಪ ಪಡೆದುಕೊಂಡು ನನ್ನ ಮಗನೇ ನಾಯಕನಾಗಿರುವುದು ಖುಷಿಯಾಗಿದೆ ಎಂದು ತಿಳಿಸಿದರು. ‌

ನಿರ್ಮಾಪಕ ಸಿದ್ದಲಿಂಗಯ್ಯ ಮಾತನಾಡಿ ಸಿನಿಮಾ ರಂಗ ಹೊಸತು. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಿದರು.

ನಾಯಕಿ ಸಾತ್ವಿಕ ಮಾತನಾಡಿ ಪಾತ್ರ ಚೆನ್ನಾಗಿದೆ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.

ಕಲಾವಿದರಾದ, ದ್ವಿತ ಗೌಡ, “ಪ್ರೇಮ ಲೋಕ” ಸುರೇಶ್ , ರಾಘವೇಂದ್ರ, ಕಿರಣ್ ರಾಜ್, ಹರ್ಷಿತಾ, ಹರೀಶ್ ಉಕ್ಕಡಗಾತ್ರಿ, ವೀರೇಶ್ ಹಿರೇಮಠ್ , ಮಾಸ್ಟರ್ ಸಂತೃಪ್ತಿ, ಮಾಸ್ಟರ್ ಹರ್ಷಲ್ ಹಾಗೂ ಛಾಯಾಗ್ರಾಹಕ ಗೌತಮ್ ಮಟ್ಟಿ ಮುಂತಾದವರು “ಪ್ರೇಮಿ’ ಚಿತ್ರದ ಕುರಿತು ಮಾತನಾಡಿದರು.

ಎನ್ ಎಂ ವಿಮಲ್ ರಾಜ್ ಸಂಭಾಷಣೆ, ಸಂಜೀವ್ ರೆಡ್ಡಿ ಸಂಕಲನ , ಪೂರ್ಣಚಂದ್ರ ದೇವಾನಂದ್ ಸಹ ನಿರ್ದೇಶವಿದೆ
.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin