ನಾಯಕಿ ತೇಜಸ್ವಿನಿ ಶರ್ಮ ಹುಟ್ಟುಹಬ್ಬಕ್ಕೆ “ಫುಲ್ ಮೀಲ್ಸ್” ತಂಡದಿಂದ ವಿಶೇಷ ಉಡುಗೊರೆ
“ಸಂಕಷ್ಟಕರ ಗಣಪತಿ”, ಪಿ ಆರ್ ಕೆ ಪ್ರೊಡಕ್ಷನ್ ನ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ “ಫುಲ್ ಮೀಲ್ಸ್” ಚಿತ್ರದ ನಾಯಕಿ ತೇಜಸ್ವಿನಿ ಶರ್ಮ ಅವರಿಗೆ ಹುಟ್ಟುಹಬ್ಬದ ಸಂಭ್ರಮ.
ತೇಜಸ್ವಿನಿ ಶರ್ಮ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ಪ್ರಮೋಷನಲ್ ವೀಡಿಯೋ ಮತ್ತು ಬರ್ತ್ ಡೇ ಪೋಸ್ಟರ್ ಬಿಡುಗಡೆ ಮಾಡಿದೆ. ತೇಜಸ್ವಿನಿ ಶರ್ಮ ಚಿತ್ರದಲ್ಲಿ ಮೇಕಪ್ ಆರ್ಟಿಸ್ಟ್ ಪಾತ್ರವನ್ನು ಮಾಡಿದ್ದು, ಮೇಕಪ್ ಆರ್ಟಿಸ್ಟ್ ಗಳ ಬವಣೆಯನ್ನು ತೋರಿಸುವ ವಿಡಂಬನೆ ಮತ್ತು ಮನೋರಂಜನೆ ಯಿಂದ ಕೂಡಿದ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ಎನ್ ವಿನಾಯಕ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಫುಲ್ ಮೀಲ್ಸ್” ಚಿತ್ರವು, ವೆಡ್ಡಿಂಗ್ ಫೆÇೀಟೋಗ್ರಾಫರ್ ಸುತ್ತ ನಡೆಯುವ ಕಥಾ ಹಂದರವನ್ನು ಹೊಂದಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದ್ದು ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ತೆರೆಗೆ ತರುವ ತಯಾರಿಯಲ್ಲಿ ಚಿತ್ರತಂಡವಿದೆ.
ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಚಿತ್ರದ ನಾಯಕಿಯರಾಗಿದ್ದು, ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ಚಂದ್ರಕಲಾ ಮೋಹನ್, ರಾಜೇಶ್ ನಟರಂಗ, ರವಿ ಶಂಕರ್ ಗೌಡ, ಸುಜಯ್ ಶಾಸ್ತ್ರಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶಕರಾಗಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ. ಹರೀಶ್ ರಾಜಣ್ಣ ಸಂಭಾಷಣೆ ಬರೆದಿದ್ದಾರೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಮಾಡಿದ್ದಾರೆ.