Abhishek's special video gift for Dr Ambarish's birthday

ಡಾ ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಷೇಕ್ ವಿಶೇಷ ವೀಡಿಯೋ ಉಡುಗೊರೆ’ - CineNewsKannada.com

ಡಾ ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಷೇಕ್ ವಿಶೇಷ ವೀಡಿಯೋ ಉಡುಗೊರೆ’

ಇಂದು ಡಾ. ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ.

ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ ಸಹ ಕಾಣಿಸಿಕೊಂಡಿರುವುದು ವಿಶೇಷ.

ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವೀವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

Abishek Ambarish AViva

ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವೀವಾ ಜೊತೆಗೆ ದಾಂಪತ್ಯ ಚಿತ್ರಕ್ಕೆ ಕಾಲಿಡುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin