ಹೊಸ ಇನ್ಸಿಂಗ್ಸ್ ಆರಂಭಿಸಿದ ನಟ ಭುವನ್ ಪೊನ್ನಣ್ಣ ನಟಿ ಹರ್ಷಿಕಾ ಪೂಣಚ್ಚ
ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಎರಡೆರಡು ಸಂಭ್ರಮ. ಇದೇ ತಿಂಗಳ 23 ಮತ್ತು 24 ರಂದು ಕೊಡಗಿನಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿತ್ತಿದೆ. ಈ ನಡುವೆ, ತಾರಾ ಜೋಡಿ ಹೊಸ ಸಿನಿಮಾ ಪ್ರಕಟಿಸಿದೆ. ಅದುವೇ “ಭುವನಂ ಶ್ರೇಷ್ಠಮ್ ಗಚ್ಚಾಮಿ”.
ಚಿತ್ರದ ಮೂಲಕ ನಟ ಭುವನ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಜೊತೆಗೆ ನಟಿ ಹರ್ಷಿಕಾ ಪೂಣಚ್ಚ ಕೂಡ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ.
ಕಳೆದ 10 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಾ ಜೊತೆಯಲ್ಲಿದ್ದ ಈ ಜೋಡಿ ಮುಂದಿನವಾರದಿಂದ ಸತಿ ಪತಿಗಳಾಗಿ ಹೊಸ ಇನ್ಸಿಂಗ್ಸ್ ಆರಂಭಿಸಲಿದ್ದಾರೆ. ಇದರ ಜೊತೆಗೆ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದೆ.
ಮದುವೆಯ ಬಗ್ಗೆ ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ತಮ್ಮ ಹೊಸ ಚಿತ್ರದ ಬಗ್ಗೆ ಪ್ರಕಟಿಸಿ, ಹೊಸ ಸಾಹಸಕ್ಕೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಬೇಕು ಎಂದು ಕೇಳಿಕೊಂಡರು.
ನಟ,ನಿರ್ದೇಶಕ ಭುವನ್ ಪೊನ್ನಣ್ಣ ಮಾಹಿತಿ ನೀಡಿ, “ಭುವನಂ ಶ್ರೇಷ್ಠಮ್ ಗಚ್ಚಾಮಿ” ಹಳ್ಳಿ ಹುಡುಗನೊಬ್ಬ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡುವ ಕಥಾಹನಕ ಹೊಂದಿರುವ ಚಿತ್ರ. ಬಾಕ್ಸಿಂಗ್ ಹುಡುಗ ಕಥೆ, ಕೆಲವೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
“ರಾಂಧವ” ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಇದ್ದೆ. ಈಗ ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಚಿತ್ರ ನಿರ್ದೇಶನಕ್ಕೆ ಇಳಿದಿದ್ದೇನೆ ಭುವನಂ ಶ್ರೇಷ್ಟಮ್ ಗಚ್ಚಾಮಿ. ಬಾಕ್ಸಿಂಗ್ ಕಥೆ. ಹಳ್ಳಿಯ ಹುಡುಗನ ಜಗತ್ತಿನನಲ್ಲಿ ನಂಬರ್ ಆಗಲು ಹೊರಟರೆ ಆತನನ್ನು ಯಾರು ತಡೆಯಲು ಆಗುವುದಿಲ್ಲ ಎನ್ನುವ ತಿರುಳು ಚಿತ್ರ ಹೊಂದಿದೆ ಎಂದರು.
ಆರೇಳು ವರ್ಷದ ಹಿಂದೆ ಕಾಂಬೊಡಿಯಾದಲ್ಲಿ ಬಸ್‍ನಲ್ಲಿ ನಾನು ಮತ್ತು ಹರ್ಷಿಕಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿದ್ದ ಅವದಿಯಲ್ಲಿ ಹೊಳೆದ ಕಥೆ. ಆಗ ಇಬ್ಬರೂ ಪಾಯಿಂಟ್ ಮಾಡಿ ಇಟ್ಟುಕೊಂಡಿದ್ದೆವೆ. ವರ್ಷದ ಹಿಂದೆ ಸಿನಿಮಾ ಮಾಡಲು ಮುಂದಾದೆಚು. ಬಾಕ್ಸಿಂಗ್ ಕುರಿತ ಹಲವು ಸಿನಿಮಾ ನೋಡಿದ್ದೇನೆ. ನಮ್ಮ ಸಿನಿಮಾದ ಥ್ರೆಡ್ ಇದೆಯಾ ಎನ್ನುವುದನ್ನು ನೋಡಿ ಎದೆ ಆಗಾಗ ಧಸಕ್ ಎನ್ನುತ್ತಿತ್ತು. ಇದುವರೆಗೆ ಬಂದ ಬಾಕ್ಸಿಂಕ್ ಚಿತ್ರಗಳಲ್ಲಿ ಎಲ್ಲಿಯೂ ನಮ್ಮ ಚಿತ್ರದ ಕಥೆ ಸುಳಿದಿಲ್ಲ ಇದು ಖುಷಿಯ ಸಂಗತಿ ಎಂದು ಹೇಳಿಕೊಂಡರು.
ಮಂಡ್ಯದ ಹುಡುಗ ಮತ್ತು ಕೊಡಗಿನ ಹುಡುಗಿಯ ನಡುವೆ ನಡೆಯುವ ಕಥೆ ಇಬ್ಬರು ನಾಯಕಿಯರು ಇರುತ್ತಾರೆ. ಇನ್ನೂ ನಾಯಕಿ ಆಯ್ಕೆಯಾಗಬೇಕಾಗಿದೆ. ಚಿತ್ರಕ್ಕೆ ನಟಿ ಹರ್ಷಿಕಾ ಪೂಣಚ್ಚ ನಾಯಕಿಯಾಗಬೇಕು ಅಂತ ಅನ್ನಿಸಲಿಲ್ಲ, ನಟನೆ ನಿರ್ದೇಶನ ಮಾಡುತ್ತಿರುವ ಹಿನ್ನೆಲೆಯಲ್ಲಿ ನನ್ನ ಬೆನ್ನಿಗೆ ನಿಲ್ಲುವ ಒಬ್ಬರು ಬೇಕಾಗಿತ್ತು. ಅದನ್ನು ಹರ್ಷಿಕಾ ಮಾಡಲಿದ್ದಾರೆ. ಇದರಿಂದ ನಿರ್ಮಾಣದ ಜವಾಬ್ದಾರಿ ಕಡಿಮೆಯಾಗಿದೆ ಎಂದರು.
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಿದ್ದೇನೆ. ಅದರ ಕೆಲಸವೇ ಜಾಸ್ತಿ ಇರಲಿದೆ. ನಾಯಕಿಯಾಗಿ ನಟಿಸಿ ಬರುತ್ತಿದ್ದೆ. ಈಗ ನಿರ್ಮಾಪಕಿಯಾಗಿ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿಕೊಂಡರು.