Actor Dixit Shetty in a different role in "Bli,nk".

“ಬ್ಲಿಂಕ್” ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ - CineNewsKannada.com

“ಬ್ಲಿಂಕ್” ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ

ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಶ್ರೀಯುತ ರವಿಚಂದ್ರ ಎ.ಜೆ ನಿರ್ಮಿಸುತ್ತಿರುವ , ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಚಿತ್ರ “ಬ್ಲಿಂಕ್” ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ..

ಈ ನಿಟ್ಟಿನಲ್ಲಿ ಚಿತ್ರದ ಮೊದಲನೇ ಹಾಡನ್ನು ಬಿಡುಗಡೆ ಮಾಡಿದೆ. ಇದು ರಾಪ್ ಶೈಲಿಯ ಹಾಡಗಿದ್ದು ಭಾರತದ ಪಾರಂಪರಿಕ ಸಂಗೀತವನ್ನು ಒಳಗೊಂಡಿದೆ ..

ಮಣ್ಣಿನ ಪ್ರಖ್ಯಾತ ರಾಪರ್ ಅನೂಪ್, ರಾಪ್ ಭಾಗವನ್ನು ಅತ್ಯುತ್ತಮವಾದ ಸಾಹಿತ್ಯದ ಜೊತೆಗೆ ಅವರ ದನಿಯ ಮೂಲಕ ಮೆರಗು ನೀಡಿದ್ದಾರೆ.. ಬ್ಲಿಂಕ್ ಚಿತ್ರದ ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಎಂ ಎಸ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ..ಕೌಮುದಿ ಈ ಹಾಡಿಗೆ ದನಿಯಾಗುವ ಮೂಲಕ ಕನ್ನಡ ನಾಡಿನ ಜನತೆಗೆ ಪರಿಚಯವಾಗಲಿದ್ದಾರೆ..

ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ಶೆಟ್ಟಿ , ಚೈತ್ರ ಜೆ ಆಚಾರ್ , ಮಂದಾರ ಬಟ್ಟಲಹಳ್ಳಿ , ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರ ತಾರಗಣವಿದೆ.

ಅವಿನಾಶ ಶಾಸ್ರ್ತಿ ಛಾಯಾಗ್ರಹಣ, ಮತ್ತು ಸಂಜೀವ್ ಜಾಗಿರ್ದಾರ್ ಸಂಕಲನವಿದೆ , “ಆಗಂತುಕ” ಶೀರ್ಷಿಕೆಯೊಂದಿಗೆ ” ಬ್ಲಿಂಕ್ ” ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin