“ಹಾರರ್” ಸಿನಿಮಾ ಅಂದ್ರೆ ಭಯ : ಹೀಗಾಗಿ ಹೆಂಡತಿ ಸೀರೆ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವೆ ಎಂದ ನಟ ಪ್ರಜ್ಚಲ್ ದೇವರಾಜ್
ಪ್ರತಿಭಾನ್ವಿತ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ” ರಾಕ್ಷಸ ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಟ ಪೃಥ್ವಿ ಅಂಬರ್, ಶಿವರಾಜ್ ಕೆ.ಆರ್ ಪೇಟೆ, ಸಂಭಾಷಣಾಕಾರ ಮಾಸ್ತಿ, ರಾಗಿಣಿ ಪ್ರಜ್ವಲ್ , ಸಿದ್ಲಿಂಗು ಶ್ರೀಧರ್ ಸೇರಿದಂತೆ ಚಿತ್ರತಂಡ ಹಾಜರಿದ್ದರು
ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರದಲ್ಲಿ ಕಾûಣಿಸಿಕೊಂಡಿದ್ದು ಟೀಸರ್ ಗಮನ ಸೆಳೆದಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಚಿತ್ರ ಮುಂದಿನ ತಿಂಗಳು ಇಲ್ಲವೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಟೀಸರ್‍ನಲ್ಲಿ ತಂದೆ- ಮಗಳ ಭಾವನಾತ್ಮಕ ಸಂಬಂಧ ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಯನ್ನು ಮುಂದಿಟ್ಡಿಕೊಂಡು ನಿರ್ದೇಶಕ ಲೋಹಿತ್ ಚಿತ್ರವನ್ಜು ತೆರೆಗೆ ಕಟ್ಟಿಕೊಟ್ಟಿದ್ದು ಸೆಪ್ಟೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಚಿತ್ರರಂಗಕ್ಕೆ ಬಂದು 18 ವರ್ಷ ಆಗಿದೆ.ಆರಂಭದಿಂದಲೂ ಮಾದ್ಯಮ ಕುಟುಂಬ ಬೆಂಬಲಿಸಿದೆ. ಹಾರರ್ ಸಿನಿಮಾ ಅಂದರೆ ಭಯ. ಹೆಂಡತಿ ಸೀರೆ ಹಾಕಿದರೆ ಸೆರಗಲ್ಲಿ ,ಚೂಡಿ ಹಾಕಿದರೆ ದುಪ್ಪಟ್ಟ ಹಿಂದೆ ಬಚ್ಚಿಟ್ಟುಕೊಳ್ಳುವೆ . ನಿರ್ದೇಶಕ ಲೋಹಿತ್ ನನ್ನಿಂದ ಕೆಲಸ ತೆಗೆಸಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ “ಭೀಮ” ದಿಂದ ಚಿತ್ರಮಂದಿರ ಎದ್ದುನಿಂತಿದೆ. ಟೀಸರ್ ಬಿಡುಗಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗಣೇಶ್ ಅಭಿನಯದ ಸಿನಿಮಾಗೂ ಒಳ್ಳೆಯದಾಗಲಿ ಎಂದು ಹಾರೈಸಿದರು
ನಟ ಪೃಥ್ವಿ ಅಂಬರ್ ಅವರ ದೊಡ್ಡ ಅಭಿಮಾನಿ ನಾನು.ನಿರ್ದೇಶಕ ಲೋಹಿತ್ ಕೆಲಸ ತೆಗೆಸಿದ್ದಾರೆ. ಸಿದ್ಲಿಂಗು ಶ್ರೀಧರ್ ತಂದೆ ಕಾಲದಿಂದಲೂ ಚಿತ್ರ ಮಾಡುತ್ತಿದ್ದಾರೆ. ಲೋಹಿತ್ ಅವರ ಮೊದಲ ಫೇವರೇಟ್ ಪ್ರಿಯಾಂಕಾ ಮೇಡಂ, ಎಂದ ಅವರು ಗುಲಾಮ ಚಿತ್ರ ಮಾಡುವಾಗಲಿಂದ ಮಾಸ್ತಿ ಬಹುಕಾಲದ ಸ್ನೇಹಿತರು. ಜಂಟಲ್‍ಮನ್ ರೀತಿ ಹಿಟ್ ಆಗಲಿ ಎಂದು ಹಾರೈಸಿದರು.
ಟೀಸರ್ ನೋಡಿ ,ಹರಸಿ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುವ ವಿಶ್ವಾಸವಿದೆ. ಸದಾ ನಿಮ್ಮನ್ನು ರಂಜಿಸುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು
ಪ್ರಜ್ವಲ್ ಪತ್ನಿ ರಾಗಿಣಿ ಮಾತನಾಡಿ, ನನಗೆ ಯಾವತ್ತೂ ಪ್ರಜ್ವಲ್ ಪ್ರಿನ್ಸ್, ನಿರ್ದೇಶಕರ ಲೋಹಿತ್ ಕಷ್ಟಪಟ್ಟಿದ್ದಾರೆ. ರಾಕ್ಷಸ ಶೀರ್ಷಿಕೆ ಇಟ್ಟಿರುವುದರಿಂದ ಮನೆಗೆ ಬಂದಾಗಲೂ ರಾಕ್ಷಸನ ರೀತಿ ಇರುತ್ತಾರೆ. ಅವರನ್ನು ನೋಡಿ ಪ್ರತಿಕ್ರಿಯೆ ಕೊಡುವೆ ಎಂದರು
ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ,ಟೀಸರ್ ಚೆನ್ನಾಗಿ ಮೂಡಿ ಬಂದಿದೆ. ಹಾರರ್ ಸಿನಿಮಾಗಳನ್ನು ಎಲ್ಲರೂ ನೋಡಿದ್ದಾರೆ. ಟೆಕ್ನಿಕಲ್ ನಲ್ಲಿ ಚೆನ್ನಾಗಿ ಮೂಡಿ ಬಂಡಿದೆ. ಡೇಟಿಂಗ್ ಕಪಲ್ಸ್ ಚಿತ್ರ ನೋಡಲು ಹೆಚ್ಚು ಜನ ಬರ್ತಾ , ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯದಾಗಲಿ ಎಂದು ಹಾರೈಸಿದರು
ನಿರ್ದೇಶಕ ಲೋಹಿತ್ ಮಾತನಾಡಿ ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಅನುಭವ ಚಿತ್ರ ನೀಡಲಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಹೊಸ ಸಂಭಾಷಣೆ ಗಾರರ ಜೊತೆ ಕೆಲಸ ಮಾಡುವುದು ಪ್ರಜ್ವಲ್ ಅವರು ಪೆÇ್ರೀತ್ಸಾಹ ಮಾಡುತ್ತಾರೆ.ವಿಶುವಲ್ ಎಫೆಕ್ಟ್ ಮೇಲೆ ಮಾಡಿದ ಚಿತ್ರ. ವಿಭಿನ್ನ ಅನುಭವ ನೀಡಲಿದೆ ಎಂದು ಹೇಳಿದರು.
ಸಿದ್ಲಿಂಗು ಶ್ರೀಧರ್ ಮಾತನಾಡಿ, ನಿರ್ದೇಶಕ ಲೋಹಿತ್ ಕೆಲಸದಲ್ಲಿ ರಾಕ್ಷಸ. ಟೀಸರ್ ಮೊದಲ ಬಾರಿ ನೋಡಿದಾಗ ಪ್ರಜ್ವಲ್ ರಾಕ್ಷಸ ಅಂತ ಅನ್ನಿಸಿತ್ತು. ಟೀಸರ್ ಅಂದ್ರೆ ಟೀಸ್ ಮಾಡೋದು. ಯಾರು ರಾಕ್ಷಸ ಅನ್ನುವುದು ಚಿತ್ರದಲ್ಲಿ ನೋಡೋಣ ಎಂದರು
ಪೃಥ್ವಿ ಅಂಬರ್ ಮಾತನಾಡಿ, ಪ್ರಜ್ವಲ್ ದೇವರಾಜ್ ಅವರು ಅಣ್ಣನ ರೀತಿ ಕೊಡುವ ವ್ಯಕ್ತಿ. ನಿರ್ದೇಶಕರು ಕೆಲಸದಲ್ಲಿ ರಾಕ್ಷಸ, ವಿಶ್ಯುವಲ್ ಚೆನ್ನಾಗಿ ಬಂದಿದೆ. ರಾಕ್ಷಸ ದೊಡ್ಡ ಹಿಟ್ ಆಗಲಿ ಎಂದು ಹಾರೈಸಿದರು
ಸಂಭಾಷಣಾಕಾರ ಮಾಸ್ತಿ ಮಾತನಾಡಿಲೋಹಿತ್ ಗೆ ಪ್ರಿಯಾಂಕಾ ಒಂದು ರೀತಿ ಗಾಡ್ ಪಾಧರ್ , ಜಂಟಲ್ ಮ್ಯಾನ್ ಚಿತ್ರ ದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಿರ್ಮಾಪಕರು, ನಿರ್ದೇಶಕರಿಗೆ ಹಣ ಮಾಡಿಕೊಡುವ ಕಲಾವಿದ ಚಿತ್ರ ರಂಗಕ್ಕೆ ಒಂದು ರೀತಿ ಉಡುಗೊರೆ ಇದ್ದಂತೆ. ಯುವ ನಿರ್ದೇಶಕರಿಗೆ ಬೆಂಬಲ ಇರಲಿ. ಭೀಮ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮತ್ತಷ್ಟು ಕನ್ನಡ ಚಿತ್ರಗಳಿಗೆ ವೇದಿಕೆಯಾಗಲಿ ಎಂದರು ಹೇಳಿದರು
ನಿರ್ಮಾಪಕ ಆರ್ ಎಸ್ ಗೌಡ , ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿ ಪ್ರಜ್ವಲ್ ಗೆ ಒಳ್ಳೆಯದಾಗಲಿ ಅಂದರು
ಶಿವರಾಜ್ ಕೆ.ಆರ್ ಪೇಟೆ ಮಾತನಾಡಿ, ರಾಕ್ಷಸ ಟೀಸರ್ ಭಯ ಹುಟ್ಟಿಸುತ್ತಿದೆ. ಟೀಸರ್ ಮುದ್ದು ರಾಕ್ಷಸ. ಚಿತ್ರಮಂದಿರಕ್ಕೆ ಜನ ಬಂದು ಚಿತ್ರ ನೋಡುತಾಗಿದೆ.ರಾಕ್ಷಸಚಿತ್ರದ ಮೂಲಕ ಚಿತ್ರಮಂದಿರಕ್ಕೆ ಮತ್ತಷ್ಟು ಜನರು ಬರುವಂತಾಗಲಿ ಎಂದು ಹಾರೈಸಿದರು.
ನಿರ್ಮಾಪಕರಾದ , ದೀಪು, ನವೀನ್ ಮತ್ತಿತರು ಮಾಹಿತಿ ಹಂಚಿಕೊಂಡರು