Actor Shivraj KR Pete's new film Muhurta
ನಟ ಶಿವರಾಜ್ ಕೆಆರ್ ಪೇಟೆ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ
ನಟ ಶಿವರಾಜ್ ಕೆ ಆರ್ ಪೇಟೆ ನಟಿಸಲಿರುವ ಹೊಸ ಚಿತ್ರಕ್ಕೆ ಇಸರಳವಾಗಿ ಮುಹೂರ್ತ ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರ ತಂಡ ಸರಳವಾಗಿ ಪೂಜೆ ಸಲ್ಲಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಉತ್ಸಾಹಿ ಯುವ ತಂಡದ ಈ ಪ್ರಯತ್ನಕ್ಕೆ ಶ್ರೇಯ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಲಿದ್ದು, ನಿರ್ಮಾಣದ ಜವಬ್ದಾರಿ ಹೊತ್ತಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಪಟ್ಟಿಯನ್ನ ಇನ್ನೂ ಬಿಟ್ಟುಕೊಡದ ಚಿತ್ರತಂಡ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ತಿಳಿಸಿದೆ.
ಚಿತ್ರಿಕರಣಕ್ಕಾಗಿ ಮಳೆಗಾಲವನ್ನ ಕಾಯುತ್ತಿದ್ದ ಚಿತ್ರತಂಡ ಮುಂದಿನ ವಾರದಿಂದ ಚಿತ್ರಿಕರಣ ಆರಂಭಿಸಲಿದ್ದು, ಕನ್ನಡಿಗರ ಹಾಗೂ ಚಿತ್ರ ರಸಿಕರ ಆಶೀರ್ವಾದವನ್ನ ಬಯಸುತ್ತಿದೆ.
ಹಾಸ್ಯ ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಶಿವರಾಜ್ ಕೆ.ಆರ್ ಪೇಟೆ ನಾಯಕನಾಗಿಯೂ ಗಮನ ಸೆಳೆದವರು, ಅವರ ಹೊಸ ಚಿತ್ರಕ್ಕೆ ಮುಹೂರ್ತ ನಡೆದಿದ್ದು ಸದ್ಯದಲ್ಲಿಯೇ ಚಿತ್ರದಲ್ಲಿ ನಟಿಸಲಿರುವ ಕಲಾವಿದರು ಮತ್ತು ಇನ್ನಷ್ಟು ಮಾಹಿತಿ ಹಂಚಿಕೊಳ್ಳಲು ತಂಡ ಮುಂದಾಗಿದೆ.