ನಟ ಶ್ರೀಮರುಳಿ ಹೊಸ ಚಿತ್ರ “ ಪರಾಕ್” ಶೀರ್ಷಿಕೆ ಪೋಸ್ಟರ್ ಬಿಡುಗಡೆ
ಚಂದನವನದ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನದ ಸಂಭ್ರಮಕ್ಕೆ ಹೊಸ ಚಿತ್ರ ಘೋಷಣೆಯಾಗಿದೆ, ಅದುವೇ “ಪರಾಕ್” . ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಟ್ಟಿದ್ದಾರೆ
ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ.
ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೆ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೆÇೀಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೆÇೀಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.