Actress, MP Sumalatha is now a doctor
ನಟಿ,ಸಂಸದೆ ಸುಮಲತಾ ಇನ್ನು ಮುಂದೆ ಡಾಕ್ಟರ್
ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ಸಂಸದೆಯಾಗಿ ಗುರುತಿಸಿಕೊಂಡಿರುವ ಹಿರಿನ ನಟಿ ಸುಮಲತಾ ಅಂಬರೀಷ್ ಅವರು ಇನ್ನು ಮುಂದೆ ಡಾಕ್ಟರ್ ಆಗಿದ್ದಾರೆ. ಸುಮಲತಾ ಅಂಬರೀಷ್ ಡಾ, ಸುಮಲತಾ ಅಂಬರೀಷ್ ಆಗಿ ಗುರುಸಿಕೊಳ್ಳಲಿದ್ದಾರೆ.
ಯುನೈಟೆಡ್ ಥಿಯಾಲಜಿಕಲ್ ರೀಸರ್ಚ್ ಯೂನಿವರ್ಸಿಟಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಚಿತ್ರನಟಿ ಹಾಗೂ ಸಂಸದೆ ಸುಮಲತ ಅಂಬರೀಶ್ ಅವರ ಚಿತ್ರರಂಗ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕೇಂದ್ರದ ಮಾಜಿ ಸಚಿವರೂ ಕನ್ನಡ ಚಿತ್ರರಂಗದ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ 2017 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಇದೀಗ ಪತಿ ಮತ್ತು ಪತ್ನಿ ಇಬ್ಬರಿಗೂ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗುವ ಮೂಲಕ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳಲ್ಲಿ ಸಂತಸ ಹಿಮ್ಮಡಿಯಾಗಿದೆ.