"Appa I love you" : The story of a father, the unfolding of sorrows and pains

” ಅಪ್ಪ ಐ ಲವ್ ಯೂ” : ಅಪ್ಪನ ಕಥೆ, ವ್ಯಥೆ ನೋವು ನಲಿವುಗಳ ಅನಾವರಣ - CineNewsKannada.com

” ಅಪ್ಪ ಐ ಲವ್ ಯೂ” : ಅಪ್ಪನ ಕಥೆ, ವ್ಯಥೆ ನೋವು ನಲಿವುಗಳ ಅನಾವರಣ

ಒಳ್ಳೆಯ ಕತೆ, ಅದಕ್ಕೊಪ್ಪುವ ಕಲಾವಿದರು, ಅಂದುಕೊಂಡಿದ್ದನ್ನು ತೆರೆಯ ಮೇಲೆ ತರಬೇಕು ಎನ್ನುವ ಸಿದ್ದತೆ ಮತ್ತು ತಯಾರಿ ಇದ್ದರೆ ಉತ್ತಮ ಚಿತ್ರವಾಗಿಸುವಲ್ಲಿ ಅನುಮಾನವವೇ ಇಲ್ಲ. ಅಂತಹ ಪ್ರಯತ್ನ ಈ ವಾರ ತೆರೆಗೆ ಬಂದಿರುವ “ ಅಪ್ಪ ಐ ಲವ್ ಯೂ” ಚಿತ್ರ.
ಹಿರಿಯ ಕಲಾವಿದರಾದ ತಬಲನಾಣಿ, ಬಲರಾಜವಾಡಿ ಮತ್ತವರ ತಂಡ ಅದಕ್ಕೆ ಪೂರಕವಾಗಿ ನೆನಪಿರಲಿ ಪ್ರೇಮ್, ನಟಿ ಮಾನ್ವಿತಾ ಕಾಮತ್, ಹೊಸ ಮುಖಗಳಾದ ಸಂಜಯ್ ಮತ್ತು ಜೀವಿತಾ ಪ್ರತಿ ಪಾತ್ರವೂ ಪಾತ್ರದೊಳಗೆ ಒಳ ಪ್ರವೇಶಿಸಿವೆ. ಹೀಗಾಗಿ ಚಿತ್ರ ಗಮನ ಸೆಳೆದಿದೆ.

ಚೊಚ್ಚಲ ಬಾರಿಯ ನಿರ್ದೇಶನದಲ್ಲಿ ನಿರ್ದೇಶಕ ಆಥರ್ವ್ ಆರ್ಯ ಚಿತ್ರರಂಗದಲ್ಲಿ ಭವಿಷ್ಯದಲ್ಲಿ ತಾವೊಬ್ಬ ಉತ್ತಮ ನಿರ್ದೇಶಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದ್ದಾರೆ. ಚಿತ್ರವನ್ನು ತೆರೆಗೆ ತರಲು ಅವರು ಆಯ್ಕೆ ಮಾಡಿಕೊಂಡ ವಿಷಯ ಮತ್ತು ಅದನ್ನು ಪ್ರೇಕ್ಷಕರ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಮೊದಲ ಬಾರಿ ನಿರ್ದೇಶನ ಮಾಡುವ ನಿರ್ದೇಶಕನಿಗೆ ಒಂದಷ್ಟು ಅಡೆ ತಡೆ, ಚಿತ್ರ ಮಾಡಿ ಮುಗಿಸಬೇಕಪ್ಪ ಎನ್ನುವ ಧಾವಂತ ಸಹಜ, ಆದರೆ ಇಲ್ಲಿ ಎಲ್ಲಿಯೂ ಆರೀತಿ ಬಾಸವಾಗದು. ಒಬ್ಬ ಅನುಭವಿ ನಿರ್ದೇಶಕನ ರೀತಿ “ಅಪ್ಪ ಐ ಲವ್ ಯೂ” ಚಿತ್ರವನ್ನು ಜನರ ಮುಂದಿದ್ದಾರೆ. ಅದರಲ್ಲಿ ಅವರು ಮೊದಲ ಬಾರಿಗೆ ಬೌಂಡರಿ ಗೆರೆದಾಟಿಸಿ ಯಶಸ್ವಿಯಾಗಿದ್ದಾರೆ.
ಸರಳವಾದ ಕಥೆ. ಸುತ್ತ ಮುತ್ತಲ ನಡೆಯುವಂತಹುದೇ, ಅದನ್ನು ಹೇಳುವ ದಾಟಿ ವಿಭಿನ್ನವಾಗಿದೆ ಈ ಕಾರಣಕ್ಕಾಗಿಯೇ ಅಪ್ಪ ಐ ಲವ್ ಯೂ ಗಮನ ಸೆಳೆದಿದೆ.

ಕಥೆ ಏನು:

ಚಿಕ್ಕ ವಯಸ್ಸಿನಲ್ಲಿ ಹೆಂಡತಿ ಕೆಳದುಕೊಂಡ ವ್ಯಕ್ತಿ, ತನ್ನ ಮಗನಿಗೆ ತೊಂದರೆಯಾಗಬಾರದು ಎಂದು ಮತ್ತೊಂದು ಮದುವೆ ಮಾಡಿಕೊಳ್ಳದೆ ಅಪ್ಪ-ಅಮ್ಮನಾಗಿ ಬೆಳಸಿದವ. ,ಮಗನೂ ಕೂಡ ಅಪ್ಪನ ಅಷ್ಟೇ ಪ್ರೀತಿಯಿಂದ ನೋಡಿಕೊಂಡವ. ಅಪ್ಪನ ವಿರೋಧದ ನಡುವೆ ಪ್ರೀತಿಸಿ ಮದುವೆ ಮಾಡಿಕೊಂಡು ಬಂದ ಮಗ ,ಆನಂತರ ಬದುಕಿನ ಏರಿಳಿತ, ಕುಟುಂಬದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳು, ಅಪ್ಪ-ಮಗನ ಬಾಂಧವ್ಯ, ಮುಂದೆ ಏನೆಲ್ಲಾ ಅನಾಹುತಗಳಿಗೆ ಅವಕಾಶ ಮಾಡಿಕೊಡಲಿದೆ ಎನ್ನುವುದು ಕಥನ ಕುತೂಹಲ
ಬದುಕಿನ ಮೌಲ್ಯ, ಮಕ್ಕಳ ಮೇಲಿನ ಪ್ರೀತಿಗೆ ಆಸ್ತಿ ಬರೆದು ಕೊಟ್ಟರೆ, ತಂದೆಯ ಕಥೆ ವ್ಯಥೆ, ಮಹತ್ವ ಸಾರುವ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡುವ ಮನಮಿಡಿಯುವ ಚಿತ್ರ.

ಕಲಾವಿದರೆಲ್ಲಾ ಹೇಗೆ”

ಹಿರಿಯ ಕಲಾವಿದ ತಬಲನಾಣಿ ಚಿತ್ರ ಜೀವನದಲ್ಲಿ ಇದುವರೆಗೂ ಥರಾವೇರಿ ಪಾತ್ರ ಮಾಡಿದ್ದಾರೆ ಜನರನ್ನು ಪಾತ್ರದ ಮೂಲಕ ನಗಿಸಿ ರಂಜಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮೊದಲ ಬಾರಿಗೆ ಅಳಿಸಿದ್ದಾರೆ. ಇದುವರೆಗೂ ಮಾಡದ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಾಮಿಡಿ ಅಷ್ಟೇ ಎಲ್ಲಾ ಎಲ್ಲಾ ರೀತಿಯ ಪಾತ್ರ ಮಾಡಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ.
ನೆನಪಿರಲಿ ಪ್ರೇಮ್, ಮಾನ್ವಿತಾ ಜೋಡಿ ಪಾತ್ರ ಕೆಲವೇ ಸನ್ನಿವೇಶಗಳು ಬಂದರೂ ಅದಕ್ಕೊಂದು ತೂಕವಿದೆ. ಚಿತ್ರಕ್ಕೆ ತಿರುವುದ ಕೊಡುವ ಪಾತ್ರ,ಅದು ಏನು ಎನ್ನುವುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು
ಯುವ ನಟ ನಟಿಯರಾದ ಜೀವಿತಾ ಹಾಗು ಸಂಜಯ್ , ಬಲರಾಜ ವಾಡಿ ಸೇರಿದಂತೆ ಮತ್ತಿತರರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮನೆ ಮಂದಿಯಲ್ಲಾ ಕುಟುಂಬದ ಸಮೇತ ನೋಡಬಹುದಾದ ಚಿತ್ರ ಇದು.
ಬಲರಾಜವಾಡಿ, ಗಿರೀಶ್ ಜಟ್ಟಿ, ಅರವಿಂದ್ ರಾವ್, ವಿಜಯ್ ಚೆಂಡೂರು ಮತ್ತಿತರ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ

ಯಾಕೆ ನೋಡಬೇಕು

ಅಪ್ಪ-ಮಗನ ಬಾಂಧವ್ಯ, ಕುಟುಂಬದ ಮೌಲ್ಯ ಅದರಲ್ಲಿಯೂ ಅಪ್ಪನ ಮಹತ್ವ, ಕಣ್ಣಿಗೆ ಕಾಣುವ ದೈವ, ಆತನನ್ನು ಕಡೆಗಾಲದಲ್ಲಿ ಮಕ್ಕಳು ಹೇಗೆಲ್ಲಾ ನೋಡಿಕೊಳ್ಳುತ್ತಾರೆ ಎನ್ನುವ ಮನಮಿಡಿಯು ಕಥನ ಹೊಂದಿದ ಕಥೆ, ಅಪ್ಪ-ಅಮ್ಮನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲರೂ ನೋಡಬೇಕಾದ ಚಿತ್ರ. ಜೊತೆಗೆ ಅಸಡ್ಡೆ ಭಾವನೆ ತೋರಿದವರಿಗೆ ಪಾಠವಾಗಬಹುದಾದ ಉತ್ತಮ ಚಿತ್ರ. ಮನೆ ಮಂದಿಯೆಲ್ಲಾ ಕುಟುಂಬದ ಸಮೇತವಾಗಿ ನೋಡಬೇಕಾದ ಚಿತ್ರ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin