Censor full for "Guns and Roses" in five languages

ಪಂಚಭಾಷೆಗಳಲ್ಲಿ “ಗನ್ಸ್ ಅಂಡ್ ರೋಸಸ್” ಗೆ ಸೆನ್ಸಾರ್ ಪೂರ್ಣ - CineNewsKannada.com

ಪಂಚಭಾಷೆಗಳಲ್ಲಿ “ಗನ್ಸ್ ಅಂಡ್ ರೋಸಸ್” ಗೆ ಸೆನ್ಸಾರ್ ಪೂರ್ಣ

ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದ ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕರಾಗಿ ನಟಿಸಿರುವ ಅಂಡರ್ ವಲ್ಡ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ “ಗನ್ಸ್ ಅಂಡ್” ರೋಸಸ್” ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದೆ.

ಐದು ಭಾಷೆಗಳಲ್ಲೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ಸದ್ಯದಲ್ಲೇ ಟೀಸರ್ ಹಾಗೂ ಹಾಡುಗಳು ರಿಲೀಸ್ ಆಗಲಿದ್ದು, ಏಪ್ರಿಲ್ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಬೇಸಿಗೆಯ ರಜೆಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ನಮ್ಮದಾಗಲಿದೆ ಎಂಬ ಅಭಿಪ್ರಾಯ ಚಿತ್ರತಂಡದ್ದು.

ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ ಅವರ ಸಹ ನಿರ್ದೇಶನವಿದೆ.

ಅರ್ಜುನ್ ಅವರಿಗೆ ನಾಯಕಿಯಾಗಿ ಯಶ್ಚಿಕ ನಿಷ್ಕಲ ನಟಿಸಿದ್ದಾರೆ. ಕಿಶೋರ್, ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್ ರಾಜಣ್ಣ ಮುಂತಾದವರು “ಗನ್ಸ್ ಅಂಡ್ ರೋಸಸ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin