Chandru hugged after watching the movie Kabja Telugu Power Star Pawan Kalyan

ಕಬ್ಜ ಸಿನಿಮಾ ನೋಡಿ ಚಂದ್ರು ಅಪ್ಪಿಕೊಂಡ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ - CineNewsKannada.com

ಕಬ್ಜ ಸಿನಿಮಾ ನೋಡಿ ಚಂದ್ರು ಅಪ್ಪಿಕೊಂಡ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್

ಪ್ಯಾನ್ ವಲ್ರ್ಡ್ ಚಿತ್ರ “ಕಬ್ಜ” ಚಿತ್ರ ನೋಡಿ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಅವರನ್ನು ಮನಸಾರ್ ಹಾಡಿ ಹೊಗಳಿ ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ

R.chandru and Pawan kalyan
R.chandru and Pawan kalyan

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಆರ್ ಚಂದ್ರೂ ಅವರನ್ನು ತಬ್ಬಿಕೊಂಡು ಭೇಷ್ ಎಂದು ಬೆನ್ನುತಟ್ಟಿದ್ದಾರೆ.ಚಿತ್ರದ ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ.

ಮದ್ಯ ರಾತ್ರಿ ಸಿನಿಮಾ ನೋಡಿದ್ದು ಹೇಗೆ ಯಾಕಷ್ಟು ಕುತೂಹಲ ಸಿನಿಮಾ ಬಗ್ಗೆ ಯಾಕೆ ಮೆಚ್ಚಿ ಚಂದ್ರೂ ತಬ್ಬಿದರು. ಪವನ್ ಕಲ್ಯಾಣ್. ಪವನ್ ಕಲ್ಯಾಣ್ ಪ್ರಶಂಸೆಗೆ ಚಂದ್ರು ಮೂಕ ವಿಸ್ಮಿತರಾಗಿದ್ದಾರೆ.

ಕಬ್ಜ ನೋಡಿದ ಪವನ್ ಕಲ್ಯಾಣ್ ಚಂದ್ರೂ ರನ್ನುಹಾಡಿ ಹೊಗಳಿದ್ದಲ್ಲದೇ ಮೇಕಿಂಗ್ ಕಥೆ ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಕೊಂಡಾಡಿದ್ದಾರೆ.ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸುದ್ದಿಯಾಗುತ್ತಿರುವಂತೆ ಕಬ್ಜ ನಂತರ ಪವನ್ ಕಲ್ಯಾಣ್ ಗೆ ಚಂದ್ರೂ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆಂದು ಬಹಿರಂಗಗೊಂಡಿದೆ.

ಅದೇನೋ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಗಳೆಲ್ಲ ತೆಲುಗಿಗೆ ಹೋಗುತ್ತಿದ್ದಾರೆ. ಸಲಾರ್ ನಂತರ ಕನ್ನಡದ ಸ್ಟಾರ್ ನಿರ್ದೇಶಕ ಚಂದ್ರೂ ತೆಲುಗಿನ ಪವರ್ ಗೆ ಪವರ್ ಬ್ಯಾಂಕ್ ಆಗುತ್ತಿದ್ದಾರೆ. ಇದೀಗ ಕನ್ನಡದ ಮತ್ತೊಬ್ಬ ನಿರ್ದೇಶಕ ಆರ್ ಚಂದ್ರು ಎರಡನೇ ಬಾರಿಗೆ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದು ತೆಲುಗಿನಲ್ಲಿ ಬ್ಯುಸಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin