Daiji" new poster unveiled: Ramesh Aravind in a different avatar

“ದೈಜಿ” ಹೊಸ ಪೋಸ್ಟರ್ ಅನಾವರಣ: ವಿಭಿನ್ನ ಅವತಾರದಲ್ಲಿ ರಮೇಶ್ ಅರವಿಂದ್ - CineNewsKannada.com

“ದೈಜಿ” ಹೊಸ ಪೋಸ್ಟರ್ ಅನಾವರಣ: ವಿಭಿನ್ನ ಅವತಾರದಲ್ಲಿ ರಮೇಶ್ ಅರವಿಂದ್

ಡಾ. ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ
ದೈಜಿ’ ಥ್ರಿಲ್ಲರ್-ಹಾರರ್ ಚಿತ್ರವಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಲಿದ್ದಾರೆ. ವಿಭಾ ಕಶ್ಯಪ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಈ ಚಿತ್ರ ನಿರ್ಮಿಸಲಿದ್ದಾರೆ.

ದೈಜಿ ಚಿತ್ರ ಡಾ.ರಮೇಶ್ ಅರವಿಂದ್ ಅವರ 106 ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2  ಸಿನಿಮಾಗಳನ್ನು ನಿರ್ದೇಶಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮೂರನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ.

ದೈಜಿಯು ಹಾರರ್-ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಡಾ.ರಮೇಶ್ ಅರವಿಂದ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ ಶೀಘ್ರದಲ್ಲೇ ವಿದೇಶದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin