ಡೇವಿಡ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ
ಹೊಸ ಕಲಾವಿದರಿಂದ ಕೂಡಿರುವ ಚಿತ್ರ ಡೇವಿಡ್. ಇದೇ 21 ರಂದು ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಕೆಲಸ ಮಾಡಿದೆ. ಶ್ರೇಯಸ್ ಚಿಂಗಾ ಹಾಗು ಭಾರ್ಗವ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರಸಾದ್ ರುದ್ರಮುನಿ ನೀರಘಂಟಿ ಬಂಡವಾಳ ಹಾಕಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ, ನಿರ್ದೇಶಕ ಶ್ರೇಯಸ್ ಚಿಂಗಾ, ಡೇವಿಡ್ ರೋಮಾಂಟ್ ಮರ್ಡರಿ ಮಿಸ್ಟ್ರಿ, ಬೆಂಗಳೂರನ್ನು ಅದ್ಬುತವಾಗಿ ಚಿತ್ರ ಮೂಡಿ ಬಂದಿದೆ. ಚಿತ್ರ ಚೆನ್ನಾಗಿ ಮೂಡಿ ಬರಲು ತಂತ್ರಜ್ಞರ ಸಹಕಾರ ಕಾರಣ ತಂತ್ರಜ್ಞರಿಗೆ ಸಿನಿಮಾ ಅರ್ಪಿಸುತ್ತವೆ ಎಂದರು
ನಿರ್ಮಾಪಕ ಪ್ರಸಾದ್ ಮಾಹಿತಿ ನೀಡಿ, ಸಿನಿಮಾದವನು ಅಲ್ಲ, ಆದರೂ ಸಿನಿಮಾಕ್ಕೆ ಬಂಡವಾಳ ಹಾಕಿದ್ದೇನೆ. ಧನರಾಜ್ ಬಾಬು ಚಿತ್ರ ಮಾಡುತ್ತಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಕಾರಣದಿಂದ ತಡ ಆಯ್ತು. ಆದರೂ ಬಿಡುಗಡೆಯಾಗಿದೆ ಸಹಕಾರವಿರಲಿ ಎಂದು ಕೇಳಿಕೊಂಡರು
ನಟಿ ಸಾರಾ ಹರೀಶ್, ಶ್ರೀಮಂತ ಹುಡುಗಿ ಪ್ರೀತಿ ಇಷ್ಟವಿಲ್ಲ ಆದರೂ ಪ್ರೀತಿಯಲ್ಲಿ ಬೀಳ್ತಾಳೆ. ಇದು ಎರಡನೇ ಚಿತ್ರ ಎಂದರು
ನಟ ಪ್ರತಾಪ್ ನಾರಾಯಣ್, ಶ್ರೀಮಂತ ಹುಡುಗ ಹೆಣ್ಣು, ಹೆಂಡದ ವಿಷಯದ ಹಿಂದೆ ಬಿದ್ದ ಹುಡುಗ ಜೀವನದ ಅಮೂಲ್ಯ ಕ್ಷಣಗಳನ್ನು ಹೇಗೆ ಕಳೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ತಿರುಳು
ಎಂಸಿ ಬಿಜ್ಜಳ ನಟರಾಜ್ – ಎಂಸಿ ಬಿಜ್ , ಸಿದ್ದಾರ್ಥ ಅಲಿಯಾಸ್ ಎಸ್ ಐಡಿ, ಮೋಹಿತ್ ವಾಸ್ವಾನಿ ಛಾಯಾಗ್ರಾಹಕ ದೇವೇಂದ್ರ ನಾಯ್ಡು ಬೆಂಬಲ ಬೇಕು ಎಂದರು.ದಿವಂಗತ ನಟ ಬುಲೆಟ್ ಪ್ರಕಾಶ್, ರಾಕೇಶ್ ಚಿಂಗಾ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ.