ಹೊಸಬರ “ಕ್ರಷ್” ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ: ಫೆಬ್ರವರಿಯಲ್ಲಿ ಬಿಡುಗಡೆ
ಪ್ರತಿಭಾವಂತ ಕಲಾವಿದರ ದಂಡು ಸೇರಿಕೊಂಡು ನಿರ್ಮಿಸಿ,ನಿರ್ದೇಶಿರುವ ಚಿತ್ರ “ಕ್ರಷ್” ಚಿತ್ರೀಕರಣ ಪೂರ್ಣಗೊಂಡಿದೆ. ಸದ್ದಿಲ್ಲದೆ ಚಿತ್ರ ಯು/ಎ ಪ್ರಮಾನ ಪತ್ರ ಪಡೆದುಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಫೆಬ್ರವರಿಯಲ್ಲ ಚಿತ್ರವನ್ನು ತೆರೆಗೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
ಚಿತ್ರದ ಮೂಲಕ ನಾಯಕ ಪಂಚಾಕ್ಷರಿ, ಮತ್ತು ನಾಯಕಿ ಪ್ರತಿಭಾ ಚಿತ್ರರಂಗದಲ್ಲಿ ಭರವಸೆ ಮೂಡಿಸಲು ಮುಂದಾಗಿದ್ದು ಚಿತ್ರಕ್ಕೆ ಅಭಿ ಎನ್ ಆಕ್ಷನ್ ಕಟ್ ಹೇಳಿದ್ದು ಚಂದ್ರಮೋಹನ್ ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿ ತಂದೆ, ಮಗ, ತಾಯಿ ಮಗಳ ನಡುವಿನ ಕಥೆಯನ್ನು ಆಧರಿಸಿ ಚಿತ್ರ “ ಕ್ರಷ್” ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಟ್ರೈಲರ್ ಬಿಡುಗಡೆ ಬಳಿಕ ಮಾತಿಗಿಳಿದ ನಟ ಪಂಚಾಕ್ಷರಿ, 2018 ರಲ್ಲಿ “ರಂಗ್ ಬಿರಂಗಿ” ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ. ನಂತರ ಎರಡನೇ ಸಿನಿಮಾ, ಕ್ರಷ್ ನನ್ನ ಕನಸು .ಕರ್ಣ ಎನ್ನುವ ಪಾತ್ರ, ತಂದೆಯೇ ಸರ್ವಸ್ವ, ಸಿಕ್ಕ ಸಿಕ್ಕ ಹುಡುಗಿಯರಿಗೆ ಪ್ರಪೆÇೀಸ್ ಮಾಡುವ ಹುಡಗ, ಅವರಿಗೆ ಹುಡುಗಿ ಸಿಗ್ತಾಳಾ ಎನ್ನುವುದು ಕುತೂಹಲದ ಸಂಗತಿ ಎಂದರು.
ನಾಯಕಿ ಪ್ರತಿಭಾ ಮಾತನಾಡಿ ಇಡೀ ತಂಡ ಹೊಸ ಪ್ರಯತ್ನ ಮಾಡಿದ್ದೇವೆ. ಬೋಲ್ಡ್ ಪಾತ್ರ, ಮನಸ್ಸಿನಲ್ಲಿ ತಾಯಿ ಪ್ರೀತಿ, ನಾಯಕನಿಗೆ ಎಲ್ಲರ ಕ್ರಷ್ ಆಗುತ್ತೆ. ಅದೇ ರೀತಿ ನನ್ನ ಮೇಲೂ ಆಗಲಿದೆ. ನಾಯಕಿಗೆ ಸಿಗ್ತೇನಾ ಅಥವಾ ಇಲ್ಲವೇ ಎನ್ನುವುದು ಪಾತ್ರದ ತಿರುಳು ಎಂದರು.
ನಿರ್ದೇಶನ ಅಭಿ ಎನ್, ಪ್ರತಿಯೊಬ್ಬ ಮನುಷ್ಯನಲ್ಲಿ ಕ್ರಶ್ ಇರುತ್ತೆ 10 ಕೋಟಿ ರೂಪಾಯಿ ಸಿನಿಮಾ ಮಾಡಲು ಮುಂದಾದೆ ನಿರ್ಮಾಪಕರು ಒಪ್ಪಲಿಲ್ಲ ಹೊಸಬರನ್ನು ಇಟ್ಟು ಸಿನಿಮಾ ಮಾಡು ಅಂದಿದ್ರು. ಹಾಗಾಗಿ ಕ್ರಷ್ ಆರಂಭವಾಗಿದೆ ಟ್ರೈಲರ್ ಮನರಂಜನೆ ನಿಡಿದೆ. ಸಿನಿಮಾ ಕೂಡ ಕಥೆ ಮಾಡಲು ಜಗ್ಗೇಶ್ ಸ್ಪೂರ್ತಿ,ಕೊನೆಗೆ ಎಮೋಷನ್ ತಾಯಿ ಮಗಳ ಎಮೋಷನ್ ಇದೆ ಎಂದರು
,ಹಿರಿಯ ನಟಿ ಅಭಿನಯ ಚಿತ್ರದಲ್ಲಿ ತಾಯಿ ಪಾತ್ರ. ಹೊಸತನದಿಂದ ಕೂಡಿ, ತಂಡ ನಡೆಸಿಕೊಂಡ ರೀತಿಗೆ ಖುಷಿಯಾಗಿದೆ ಎಂದರು.
ನಿರ್ಮಾಪಕ ಎಸ್ ಚಂದ್ರಮೋಹನ್,ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಕಷ್ಡಪಟ್ಟ ಮಾಡಿದ್ದೇನೆ. ಜನರ ನೋಡಿದರೆ ಅಷ್ಟೇ ಸಾಕು. 5 ಹಾಡುಗಳಿವೆ. ಡೈಲಾಗ್ ಮೇಲೆ ಸಿನಿಮಾ ಮಾಡಿದ್ದೇವೆ. ಮುಂದಿನ ವರ್ಷ ಪೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎನ್ನುವ ಮಾಹಿತಿ ನೀಡಿದರು.