Diya hero Dixit Shetty steps into Malayalam: 'Oppies' film set

ಮಲಯಾಳಂಗೆ ಕಾಲಿಟ್ಟ ದಿಯಾ ನಾಯಕ ದೀಕ್ಷಿತ್ ಶೆಟ್ಟಿ: ಸೆಟ್ಟೇರಿದ “ಒಪ್ಪೀಸ್” ಚಿತ್ರ - CineNewsKannada.com

ಮಲಯಾಳಂಗೆ ಕಾಲಿಟ್ಟ ದಿಯಾ ನಾಯಕ ದೀಕ್ಷಿತ್ ಶೆಟ್ಟಿ: ಸೆಟ್ಟೇರಿದ “ಒಪ್ಪೀಸ್” ಚಿತ್ರ

‘ದಿಯಾ’ ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ, ತೆಲುಗಿನ “ದಸರಾ” ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ, ಈಗ ಮಲಯಾಳಂ ಇಂಡಸ್ಟ್ರೀಗೂ ಪದಾರ್ಪಣೆ ಮಾಡಿದ್ದಾರೆ.

ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಒಪ್ಪೀಸ್ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಫೆಬ್ರವರಿಯಿಂದ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಚಿತ್ರಕ್ಕಿದೆ.

ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು ‘ದಿಯಾ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ‘ಬ್ಲಿಂಕ್’ ಎಂಬ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ರವಿಚಂದ್ರ ಎ.ಜೆ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ ‘ಬೆಂಗಳೂರು ಕಥೆ’ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 8ಕ್ಕೆ ಬ್ಲಿಂಕ್ ರಿಲೀಸ್ ಆಗ್ತಿದೆ.

ಇದರ ಹೊರತಾಗಿ ದೀಕ್ಷಿತ್ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿರುವ ಗರ್ಲ್ ಫ್ರೆಂಡ್ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರಳವಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ.ದೀಕ್ಷಿತ್ ಬರ್ತ್ ಡೇ ಸ್ಪೆಷಲ್ ಆಗಿ ಗರ್ಲ್ ಫ್ರೆಂಡ್ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ.

`ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಸ್ಪೂಕಿ ಕಾಲೇಜು’ ಗಳಂತಹ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ನಿರ್ಮಾಣದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿಯೂ ದಿಯಾ ಹೀರೋ ಬಣ್ಣ ಹಚ್ಚಿದ್ದಾರೆ. ಇನ್ನೂ, ದೀಕ್ಷಿತ್ ನಟನೆಯ ಕೆಟಿಎಂ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ತಮಿಳು ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin