'Fans Cricket League' on 27th and 28th May

ಮೇ 27 ಮತ್ತು 28 ರಂದು ‘ಫ್ಯಾನ್ಸ್ ಕ್ರಿಕೆಟ್ ಲೀಗ್’ - CineNewsKannada.com

ಮೇ 27 ಮತ್ತು 28 ರಂದು ‘ಫ್ಯಾನ್ಸ್ ಕ್ರಿಕೆಟ್ ಲೀಗ್’

‘ನಮ್ ಟಾಕೀಸ್’ನ ನೇತೃತ್ವದಲ್ಲಿ ನಡೆಯುವ, ಸಿನಿಮಾ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಸೇರಿ ಆಡುವ ಏಕೈಕ ಕ್ರಿಕೆಟ್ ಪಂದ್ಯಾಟ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ದಿನಾಂಕ ಹೊರಬಿದ್ದಿದೆ.

2015ನೇ ಇಸವಿಯಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದೊಂದಿಗೆ ಹತ್ತನೇ ಆವೃತ್ತಿಯ ಆರಂಭ ಕಾಣುತ್ತಿದೆ.

ಸದ್ಯ ಈ ಬಾರಿಯ ದಿನಾಂಕಗಳು ಹೊರಬಿದ್ದಿದ್ದು, ‘ಲೂಸಿಯ’,’ಅಯೋಗ್ಯ’ ಸಿನಿಮಾಗಳ ಮೂಲಕ ಕನ್ನಡಿಗರ ಚಿರಪರಿಚಿತ ನಟ ಸತೀಶ್ ನೀನಾಸಂ ಅವರು ದಿನಾಂಕಗಳನ್ನ ಘೋಷಣೆ ಮಾಡಿದ್ದಾರೆ.

ದೇವರಾಜ್ ಅವರ ಆಶೀರ್ವಾದದೊಂದಿಗೆ ನಡೆಯಲಿರುವ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ನ 10ನೇ ಆವೃತ್ತಿ ಇದೇ ಮೇ 27 ಹಾಗು 28ರಂದು ನಡೆಯಲಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಸತೀಶ್ ನೀನಾಸಂ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಪಂದ್ಯಾವಳಿಗೆ ಪ್ರಜ್ವಲ್ ದೇವರಾಜ್ ಅವರ ಸಹಕಾರ ಕೂಡ ಇರಲಿದ್ದು, ಪ್ರತೀ ಸಾರಿಯಂತೆ ಈ ಬಾರೀ ಕೂಡ ಯಶಸ್ವಿ ಪಂದ್ಯಾವಳಿಯ ನಿರೀಕ್ಷೆಯಿದೆ.

ಸದ್ಯದಲ್ಲೇ ಹೆಸರಾಂತ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆಗಿನ ಇನ್ನೊಂದು ಮಹತ್ತರ ಅಪ್ಡೇಟ್ ಮೂಲಕ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ತಂಡ ಮರಳಿ ಬರಲಿದೆ ಎಂದು ಆಯೋಜಕ ಭರತ್ ಎಸ್.ಎನ್ ತಿಳಿಸಿದ್ದಾರೆ

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin