"For Registration" movie release on February 23

ಫೆಬ್ರವರಿ 23ಕ್ಕೆ ಫಾರ್ ರಿಜಿಸ್ಟ್ರೇಷನ್ ಚಿತ್ರ ಬಿಡುಗಡೆ - CineNewsKannada.com

ಫೆಬ್ರವರಿ 23ಕ್ಕೆ ಫಾರ್ ರಿಜಿಸ್ಟ್ರೇಷನ್ ಚಿತ್ರ ಬಿಡುಗಡೆ

“ಫಾರ್ ರಿಜಿಸ್ಟ್ರೇಷನ್” ಚಿತ್ರ ವಿವಿಧ ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಈ ಚಿತ್ರದ ಕದ್ದ ಕದ್ದ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಡಾರ್ಲಿಂಗ್ ಕೃಷ್ಣ ಮಾತನಾಡಿ ಬ್ಯೂಟಿಫುಲ್ ಸಾಂಗ್. ನನಗೆ ತುಂಬಾ ಇಷ್ಟವಾಯಿತು. ಮೇಕಿಂಗ್ ವಿಚಾರ ಇರಬಹುದು. ಪೃಥ್ವಿ ಹಾಗೂ ಮಿಲನಾ ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಸಾಂಗ್ ಔಟ್ ಫುಟ್ ಚೆನ್ನಾಗಿ ಬಂದಿದೆ. ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಮಿಲನಾ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ವಂಡರ್ ಫುಲ್ ಆಕ್ಟರ್. ಇವರಿಬ್ಬರ ಕಾಂಬಿನೇಷನ್ ಕ್ಲಿಕ್ ಆಗುತ್ತದೆ ಎಂದರು.

ನಿರ್ಮಾಪಕ ನವೀನ್ ರಾವ್ ಮಾತನಾಡಿ, ಈ ಹಾಡು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿ ಇತ್ತು. ಇರ್ಮಾನ್ ಸರ್ ಅವರನ್ನು ಕನ್ವೆನ್ಸ್ ಮಾಡಿ ಎಲ್ಲೆಲ್ಲೋ ಹೋಗಿ ಬಂದ್ವಿ. ಆ ನಂತರ ಇಲ್ಲೇ ಶೂಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದನ್ನು ಡಿಫರೆಂಟಾಗಿ ಮಾಡಬೇಕು ಎಂದು ಕೇಳಿಕೊಂಡಾಗ ಪ್ಲಾನ್ ಮಾಡಿ ಮಾಡಲಾಯಿತು. ಇಡೀ ಹಾಡಲ್ಲಿ ಪೃಥ್ವಿ ಹಾಗೂ ಮಿಲನಾ ಅಷ್ಟೇ ಕಾಣಬಹುದು. ಆದರೆ ತೆರೆ ಹಿಂದೆ 160 ಜನರ ಪರಿಶ್ರಮವಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ಕಾಲೇಜ್ ಸಮಯದಲ್ಲಿ ಹಾಡು ಬರೆಯಲು ಯೋಚನೆ ಮಾಡುತ್ತಿದ್ದೇವು. ಆಗ ಸಮಯದಲ್ಲಿ ಬರೆದ ಹಾಡು ಇದು. ಈಗ ಅದನ್ನು ಬಳಸಿಕೊಂಡಿದ್ದೇವೆ. ನಕುಲ್ ಹಾಡಿಗೆ ಬೇರೆ ಆಯಾಮ ಕೊಟ್ಟಿದ್ದಾರೆ. ಪರ್ಫಾಮೆನ್ಸ್ ವಿಚಾರಕ್ಕೆ ಬಂದರೆ. ಯಾವ ರೀತಿ ಮಾಡುವುದು ಆದಾಗ ಸುಮಾರು ಐಡಿಯಾ ಬಂತು. ಅಂಡರ್ ವಾಟರ್ ಪ್ಲಾನ್ ಮಾಡಿದ್ದು ಇರ್ಮಾನ್ ಸರ್. ಅವರಿಗೆ ಕ್ರೆಡಿಟ್ ಸಲ್ಲಬೇಕು. ಇದೊಂದು ಒಳ್ಳೆ ಅನುಭವ. ಹಾಗೂ ಸಾಹಸ. ಮಿಲನಾ ಮತ್ತು ಪೃಥ್ವಿ ಬೆಂಬಲದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

ನಟಿ ಮಿಲನಾ ನಾಗರಾಜ್ ಮಾತನಾಡಿ, ನೆಲ ಹಾಗೂ ಸ್ನೊ ಮೇಲೆ ಸಾಂಗ್ ಮಾಡಿದ್ದೇವೆ. ಫೂಲ್ ಒಳಗಡೆ ಸಾಂಗ್ ಎಂದಾಗ ಡಿಫರೆಂಟ್ ಇರುತ್ತದೆ ಅನ್ನೋ ಎಕ್ಸೈಟ್ ಆಯ್ತು. ಆದರೆ ಸಿಕ್ಕ ಪಟ್ಟೆ ಕಷ್ಟವಾಯಿತು. ಕಾಸ್ಟ್ಯೂಮ್ ಹೇವಿ ಅನಿಸುತಿತ್ತು. ನನ್ನ ಇಷ್ಟು ವರ್ಷದ ಕರಿಯರ್ ನಲ್ಲಿ ಶೂಟಿಂಗ್ ಅಂತಾ ಕಷ್ಟಪಟ್ಟ ದಿನ ಅದು. ಅವತ್ತು ಔಟ್ ಫುಟ್ ಬಗ್ಗೆ ಚಿಂತೆ ಹೋಗಿತ್ತು. ಇವತ್ತು ಔಟ್ ಫುಟ್ ನೋಡ್ತಿದ್ದ ವರ್ತ್ ಅನಿಸುತ್ತದೆ. ಆರ್ಟಿಸ್ಟ್ ಎಲ್ಲಾ ಸಾಂಗ್ ಮಾಡುತ್ತಿದ್ದೇವು. ಎಲ್ಲಾ ಸೇಮ್ ಸಾಂಗ್ಸ್ ಮಾಡುತ್ತಿದ್ದೇವು. ಆದರೆ ಇದು ವಿಭಿನ್ನ ಎಂದರು.

ನಟ ಪೃಥ್ವಿ ಅಂಬಾರ್ ಮಾತನಾಡಿ, ಸಾಂಗ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕರು ಫ್ಯಾಷನೇಟೆಡ್ ಪೆÇ್ರಡ್ಯೂಸರ್. ಸದಾ ಅಭಿರುಚಿ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನವೀನ್ ಸರ್ ಐಟಿ ಬ್ಯಾಕ್ ಡ್ರಾಪ್ ನಿಂದ ಬಂದಿರೋದ್ರಿಂದ ಅವರ ಜೊತೆ ಕೆಲಸ ಮಾಡುವ ಟೈಫ್ ಬೇರೆ ಇದೆ. ಪೂರ್ತಿ ಸಿನಿಮಾ ಎಂಜಾಯ್ ಮಾಡಿಕೊಂಡು ಶೂಟ್ ಮಾಡಿದ್ದೇವೆ. ಕದ್ದು ಕದ್ದು ಹಾಡು ಎಲ್ಲರಿಗೂ ಹಾಡು ಇಷ್ಟವಾಗುತ್ತದೆ ಎಂದರು.

ಕದ್ದು ಕದ್ದು ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ, ಆರ್ ಕೆ ಹರೀಶ್ ಸಂಗೀತ, ನಕುಲ್ ಅಭಯಂಕರ್ ಕಂಠ ಕುಣಿಸಿದ್ದಾರೆ. ಅಂಡರ್ ವಾಟರ್ ನಲ್ಲಿ ಹಾಡು ಮೂಡಿಬಂದಿದ್ದು, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಪೃಥ್ವಿ ಹಾಗೂ ಮಿಲನಾ ಹೆಜ್ಜೆ ಹಾಕಿದ್ದಾರೆ.

ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin