ಹೈನ’ ಚಿತ್ರ – ವೆಂಟಕ್ ಭಾರಧ್ವಾಜ್ ನಿರ್ದೇಶನದಲ್ಲಿ ಮತ್ತೊಂದು ವಿಭಿನ್ನ ಸಿನಿಮಾ
- ಭಾರತದ ವೈಶಿಷ್ಟ್ಯತೆಯನ್ನು ವಿಶೇಷವಾಗಿ ಕಟ್ಟಿಕೊಡಲಿದೆ ‘ಹೈನ’ ಚಿತ್ರ – ವೆಂಟಕ್ ಭಾರಧ್ವಾಜ್ ನಿರ್ದೇಶನದಲ್ಲಿ ಮತ್ತೊಂದು ವಿಭಿನ್ನ ಸಿನಿಮಾ
ನಿರ್ದೇಶಕ ವೆಂಕಟ್ ಭಾರಧ್ವಾಜ್ ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಹೈನ ಎಂದು ಶೀರ್ಷಿಕೆ ಇಡಲಾಗಿದ್ದು, ‘ಹೈನ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಕಳೆದವಾರ ಸೆಟ್ಟೇರಿರುವ ಹೈನ ಚಿತ್ರ ಕಂಟೆಂಟ್ ಬೇಸ್ಡ್ ಚಿತ್ರವಾಗಿದ್ದು ಸಂಪೂರ್ಣ ನವ ಕಲಾವಿದರ ತಾರಾಗಣವನ್ನೊಳಗೊಂಡಿದೆ.
ಏಕಕಾಲದಲ್ಲಿ ಕನ್ನಡ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ‘ಹೈನ’ ಸಿನಿಮಾ ನಿರ್ಮಾಣವಾಗುತ್ತಿದೆ. ಬೆಂಗಳೂರು, ಹೈದ್ರಾಬಾದ್, ಚೆನೈ, ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ರಾಜ್ ಕಮಲ್, ಲಕ್ಷ್ಮಣ್ ಶಿವಶಂಕರ್, ಪ್ರಮೋದ್ ಮರವಂತೆ, ಶಾಂತಕುಮಾರ್ ಚಿತ್ರದ ತಾಂತ್ರಿಕ ಬಳಗದಲ್ಲಿದ್ದು, ಕೆ.ಕೆ ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಜಂಟಿಯಾಗಿ ಈ ಚಿತ್ರವನ್ನು
ನಿರ್ಮಾಣ ಮಾಡುತ್ತಿದೆ.
ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ.ವೆಂಕಟ್ ಭಾರದ್ವಾಜ್ ನಿರ್ದೇಶನದ ‘ಆಹತ’ ಮತ್ತು ‘ನಗುವಿನ ಹೂಗಳ ಮೇಲೆ’ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.