Hit song "Rani": Actor Kiran Raj caught attention.

ಹಿಟ್ ಆಯ್ತು “ರಾನಿ” ಹಾಡು: ಗಮನ ಸೆಳೆದ ನಟ ಕಿರಣ್ ರಾಜ್ . - CineNewsKannada.com

ಹಿಟ್ ಆಯ್ತು “ರಾನಿ” ಹಾಡು: ಗಮನ ಸೆಳೆದ ನಟ ಕಿರಣ್ ರಾಜ್ .

ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರ ಪೆÇಸ್ಟರ್ ಹಾಗೂ ಟೀಸರ್ ಮೂಲಕ ಈಗಾಗಲೇ ಸದ್ದು ಮಾಡಿದೆ.”ರಾನಿ” ಚಿತ್ರದ “ಕೋಲೆ ಕೋಲೆ” ಎನ್ನುವ ಜಾನಪದ ಶೈಲಿಯ ಮಾಸ್ ಹಾಡು ಟಿ ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಪಡ್ಡೆ ಹುಡುಗರ ಮನಸ್ಸು ಗೆದ್ದಿದೆ. ಈಗಾಗಲೇ ಒಂದು ಮಿಲಿಯನ್ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ.

ಪ್ರಾರಂಬದಿಂದಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ರಾನಿ ತಂಡ ಈ ಬಾರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ನಾಯಕ ನಟ ಕಿರಣ್ ರಾಜ್ ಪ್ರಪಂಚದಲ್ಲಿ ಅತೀ ಎತ್ತರದಲ್ಲಿರುವ ಶಿವನ ಮಂದಿರ ಉತ್ತರಕಾಂಡದ ತುಂಗ್ ನಾಥ್ ದೇವಸ್ಥಾನಕ್ಕೆ ಹೋಗಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಸದಾ ಒಂದಲ್ಲೊಂದು ಸಾಹಸ ಚಟುವಟಿಕೆಯಲ್ಲಿರುವ ಕಿರಣ್ ರಾಜ್ “ರಾನಿ”ಚಿತ್ರಕ್ಕಾಗಿ ಸ್ಕೈಡೈವಿಂಗ್ ಹಾಗೂ ಪ್ಯಾರಾಗ್ಲೈಡಿಂಗ್ ಮಾಡಿ ಗಮನ ಸೆಳೆದ್ದಿದ್ದರು.

ಈ ವೇಳೆ ಮಾತನಾಡಿದ ನಟ ಕಿರಣ್ ರಾಜ್ ‘ನಾನು ನಿರ್ದೇಶಕರ ನಟನಾಗಬೇಕು , ನಿರ್ದೇಶಕ ಬರೆಯುವ ಪಾತ್ರಕ್ಕೆ ನ್ಯಾಯ ಕೊಡುವುದು ಪ್ರತಿಯೊಬ್ಬ ನಟನ ಕರ್ತವ್ಯ. ಆ ಕಾರಣದಿಂದ ನಾನು ಸದಾ ಕಲಿಯುತ್ತಿರುತ್ತೆನೆ. “ರಾನಿ ” ಒಂದು ಕ್ಲಾಸಿಕ್ ಸಿನಿಮಾ. ಇದೊಂದು ಫ್ಯಾಮಿಲಿ ಆಕ್ಷನ್ ಸಿನಿಮಾ ಎಂದರರೂ ತಪ್ಪಾಗಲಾರದು. ಕಾಮಿಡಿ, ಲವ್, ಆಕ್ಷನ್ ಫ್ಯಾಮಿಲಿ ಡ್ರಾಮಾ ಎಲ್ಲವು ಒಂದೇ ಸಿನಿಮಾದಲ್ಲಿ ಸಿಕ್ಕಿರುದು ನನ್ನ ಭಾಗ್ಯ. ಈಗ ಮೊದಲ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ ಜನರ ಪ್ರತಿಕ್ರಿಯೆ ನೋಡಿ ಕೆಲಸ ಮಾಡುವ ಜೋಶ್ ಇನ್ನಷ್ಟು ಬಂದಿದೆ ಎಂದಿದ್ದಾರೆ .

ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡಿ “ರಾನಿ ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು ಚಿತ್ರ ಬಿಡುಗಡೆಯ ದಿನಾಂಕ ಸದ್ಯದಲ್ಲೇ ಹೇಳಲಿದ್ದೇವೆ ಎನ್ನುತ್ತಾರೆ

“ರಾನಿ” ಸ್ಟಾರ್ ಕ್ರಿಯೇಷನ್ ಬ್ಯಾನರ್ ನ ಮೊದಲ ಚಿತ್ರವಾಗಿದ್ದು ಉಮೇಶ ಹೆಗ್ಡೆ ಚಂದ್ರಕಾಂತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಿಕ್ಷಾ, ರಾಧ್ಯ, ಅಪೂರ್ವ ಮೂವರು ನಾಯಕಿಯಾರಿದ್ದಾರೆ ಉಳಿದಂತೆ ರವಿ ಶಂಕರ, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್,ಧರ್ಮೇಂದ್ರ ಆರಸ್, ಪ್ರಥ್ವಿ ರಾಜ್,ಅರ್ಜುನ್ ಪಾಳೇಗಾರ, ಉಗ್ರಂ ಮಂಜು,ಯಶ್ ಶೆಟ್ಟಿ, ಶ್ರೀಧರ್, ಅನಿಲ್ ಯಾದವ್,ಚೇತನ್ ದುರ್ಗ,ಸುಜಯ್ ಶಾಸ್ತ್ರೀ, ಮಠ ಗುರುಪ್ರಸಾದ್ ಇತರ ದೊಡ್ಡ ಕಲಾವಿದರೆ ದಂಡೆ ಇದೆ.

ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ ಪ್ರಮೋದ ಮರವಂತೆ ಗೀತರಚನೆ ಹಾಗೂ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಾಹಣ, ಉಮೇಶ ಆರ್ ಬಿ ಸಂಕಲನ ಹಾಗೂ ಸತೀಶ್ ಅವರವ ಕಲಾ ನಿರ್ದೇಶನ “ರಾನಿ” ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin