Hosa pratibhegaḷa ‘āra’ sinimā pōsṭar rilīs 40 / 5,000 Translation results Translation result New talent 'Aara' movie poster released

ಹೊಸ ಪ್ರತಿಭೆಗಳ ‘ಆರ’ ಸಿನಿಮಾ ಪೋಸ್ಟರ್ ರಿಲೀಸ್ - CineNewsKannada.com

ಹೊಸ ಪ್ರತಿಭೆಗಳ ‘ಆರ’ ಸಿನಿಮಾ ಪೋಸ್ಟರ್ ರಿಲೀಸ್

ಹೊಸ ಪ್ರತಿಭೆಗಳ ‘ಆರ’ ಸಿನಿಮಾ ಪೋಸ್ಟರ್ ರಿಲೀಸ್- ಅಶ್ವಿನ್ ವಿಜಯ ಮೂರ್ತಿ ನಿರ್ದೇಶನದ ಚೊಚ್ಚಲ ಸಿನಿಮಾಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ, ಹೊಸ ಕಥೆಗಳ ಪ್ರಯೋಗ ನಡೆಯುತ್ತಲೇ ಇರುತ್ತೆ.

ಇದೇ ರೀತಿಯ ಹೊಸತನ, ಹೊಸ ಕನಸು ಹೊತ್ತ ನವ ಪ್ರತಿಭೆಗಳ ಯುವತಂಡವೊಂದು ನೂತನ ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರೇ ‘ಆರ’. ಅಶ್ವಿನ್ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಆರ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ದೈವ ಹಾಗೂ ದುಷ್ಟ ಶಕ್ತಿಯ ಕಥೆ ಹೇಳಲು ಹೊರಟ ‘ಆರ’ ಚಿತ್ರ ಸ್ಪಿರಿಚ್ಯುಯಲ್ ಡ್ರಾಮಾ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ. ‘ಅರ’ ಎಂಬ ಹುಡುಗನ ಜರ್ನಿ ಈ ಚಿತ್ರ ಒಳಗೊಂಡಿದೆ. ದುಷ್ಟ ಶಕ್ತಿಗಳು ಹೆಣ್ಣು, ಹೊನ್ನು, ಮಣ್ಣು ರೂಪದಲ್ಲಿ ನೀಡುವ ಸವಾಲುಗಳನ್ನು ಎದುರಿಸಿ ಆತ ತನ್ನ ತಾತನಿಂದ ಬಳುವಳಿಯಾಗಿ ಬಂದ ಕಾಡನ್ನು ಉಳಿಸಿಕೊಳ್ಳುವಲ್ಲಿ ಜಯಶಾಲಿಯಾಗುತ್ತಾನಾ..? ಈ ಜರ್ನಿಯಲ್ಲಿ ಆತ ಕಂಡು ಕೊಂಡ ಉತ್ತರವೇನು ಎನ್ನೋದು ಈ ಚಿತ್ರದ ಎಳೆ.

ಅಶ್ವಿನ್ ವಿಜಯ ಮೂರ್ತಿ ಈ ಚಿತ್ರದ ಸೂತ್ರಧಾರ. ಕಳೆದ ಎಂಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಶ್ವಿನ್ ದಿನೇಶ್ ಬಾಬು ನಿರ್ದೇಶನದ ‘ನನಗಿಷ್ಟ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಕಿನ್ನರಿ’, ‘ಸೇವಂತಿ ಸೇವಂತಿ’ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ‘ಆರ’ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದ್ದು, ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ತೆರೆಗೆ ಬರಲಿದೆ.

ಸಂಪೂರ್ಣ ಚಿತ್ರ ಹೊಸ ಪ್ರತಿಭೆಗಳಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ನಟ ರೋಹಿತ್ ಬರೆದಿದ್ದಾರೆ. ಆನಂದ್ ನೀನಾಸಂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ‘ಆರ’ ಚಿತ್ರಕ್ಕಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin