In the age of OTT, it is necessary to respect the audience's time: Actor Ramesh Aravind

ಒಟಿಟಿ ಯುಗದಲ್ಲಿ ಪ್ರೇಕ್ಷಕನ ಸಮಯ ಗೌರವಿಸುವುದು ಅಗತ್ಯವಾಗಿದೆ: ನಟ ರಮೇಶ್ ಅರವಿಂದ್ - CineNewsKannada.com

ಒಟಿಟಿ ಯುಗದಲ್ಲಿ ಪ್ರೇಕ್ಷಕನ ಸಮಯ ಗೌರವಿಸುವುದು ಅಗತ್ಯವಾಗಿದೆ: ನಟ ರಮೇಶ್ ಅರವಿಂದ್

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವತಿಯಿಂದ “ಸಿನಿಮಾ ಮಾಧ್ಯಮ-ಸ್ಥಿತಿಗತಿ” ಕುರಿತು ವಿಚಾರ ಸಂಕಿರಣ ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ ನಡೆಯಿತು. ಖ್ಯಾತ ನಟ ರಮೇಶ್ ಅರವಿಂದ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ, ಹಿರಿಯ ಪತ್ರಕರ್ತ ಜೋಗಿ ಅವರು ಪಾಲ್ಗೊಂಡು ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು. ಈ ವೇಳೆ ಉದ್ಯಮದ ಸ್ಥಿತಿ ಗತಿಯ ಕುರಿತು ಬೆಳಕು ಚೆಲ್ಲಿದರು.

ಅಪರೂಪದ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ನಟ, ನಿರ್ದೇಶಕ ರಮೇಶ್ ಅರವಿಂದ್, ಸಿನಿಮಾ ಬಿಡುಗಡೆಯಾದರೆ ಮೊದಲೆಲ್ಲಾ ಮನೆ ಮಂದಿ ಹೋಗ್ತಾ ಇದ್ವಿ .ಆದರೆ ಒಂದು ಚಿತ್ರಮಂದಿರಕ್ಕೆ ಯಾಕೆ ಹೋಗಬೇಕು ಒಟಿಟಿಯಲ್ಲಿ ಬರುತ್ತದೆಯಲ್ಲಾ ಎನ್ನುವ ಮನೋಭಾವ ಬೆಳೆದಿದೆ.

ಅದನ್ನು ಅರ್ಥ ಮಾಡಿಕೊಂಡು ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ಆಗಬೇಕು.ಒಟಿಟಿ ಮೂಲಕ ಚಿತ್ರಗಳು ಕೈಗೆಟುಕುತ್ತಿವೆ. ಈ ಹಿನ್ನೆಲೆಯಲ್ಲಿ ನಿಗಧಿತ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ತಾವಿರುವ ಕಡೆಯಲ್ಲಿ ಸಿನಿಮಾ ನೋಡುವ ಪರಿಪಾಠ ಹೆಚ್ಚಾಗಿದೆ .ಹೀಗಾಗಿ ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ಆಗಬೇಕು ಎಂದಿದ್ದಾರೆ

ದೇಶದಲ್ಲಿ ಶೇಕಡಾ 10 ರಷ್ಟು ಮಂದಿ ಮಾತ್ರ ಚಿತ್ರಮಂದಿರಕ್ಕೆ ಬರುತ್ತಿರುವುದು ಇನ್ನೂ ಶೇಕಡಾ 90 ರಷ್ಟು ಮಂದಿ ತಲೆ ಹಾಕುತ್ತಿಲ್ಲ, ಅಷ್ಟರಲ್ಲಿ ಅಪಾರ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇನ್ನೂ ಶೇಕಡಾ 90 ರಷ್ಟು ಮಂದಿ ಚಿತ್ರರಂಗಕ್ಕೆ ಬಂದರೆ ಎಷ್ಟೇಲ್ಲ ಆಗಬಹುದು ಊಹೆ ಮಾಡಿಕೊಳ್ಳಿ ಮಾಡುವ ಕೆಲಸದಲ್ಲಿ ಬದಲಾವಣೆ ಇದ್ದಾಗ ಮಾತ್ರ ಫಲಿತಾಂಶದಲ್ಲೂ ಬದಲಾವಣೆ ಬರಲು ಸಾಧ್ಯ ಯಾವುದೇ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನೇ ಮಾಡುತ್ತಾ ಅದರಲ್ಲಿ ಬದಲಾವಣೆ ಬಯಸಿದರೆ ಎಂದಿಗೂ ಸಾಧ್ಯವಿಲ್ಲ ಹೀಗಾಗಿ ಫಲಿತಾಂಶ ಬೇಕಾದರೆ ಬದಲಾವಣೆ ಅನಿವಾರ್ಯ ಬದುಕುಗಾಗಿ ಪ್ರತಿಯೊಬ್ಬರೂ ಒಂದೊಂದು ವೇಷ ಹಾಕುತ್ತಿದ್ದಾರೆ ಆದರೆ ಅವರು ತಮ್ಮ ಆತ್ಮವನ್ನು ಮಾರಾಟ ಮಾಡಿಕೊಳ್ಳಬಾರದು. ಅದೊಂದನ್ನು ಜೋಪಾನವಾಗಿ ಇಟ್ಟುಕೊಂಡರೆ ಅಲ್ಲಿ ನಮ್ಮ ಉಳಿಗಾಲ ಇದೆ ಎಂದರು

ರಾಜಿಯಲ್ಲಿ ವಿವೇಕ ಮುಖ್ಯ

ಹೊಂದಾಣಿಕೆ ಜೀವನದಲ್ಲಿ ಅತಿ ಮುಖ್ಯ . ರಾಜಿ ಮಾಡಿಕೊಳ್ಳುವಾಗ ಸರಿಯಾದ ರಾಜಿ, ಯಾವುದು ಕೆಟ್ಟ ರಾಜಿ ಯಾವುದು ಎನ್ನುವುದನ್ನು ತಿಳಿಯಬೇಕು .ಒಳ್ಳೆಯ ವ್ಯಕ್ತಿಯನ್ನು ಬೆಂಬಲಿಸಲು ರಾಜಿ ಮಾಡಿಕೊಂಡರೆ ಅದು ದಾರಿ ಬೇರೆ, ಆದರೆ ಸಮಾಜವನ್ನು ತಪ್ಪು ದಾರಿಗೆ ಕರೆದೊಯ್ಯುವ ವಿಷಯದಲ್ಲಿ ರಾಜಿ ಮಾಡಿಕೊಂಡರೆ ಅನಾಹುತ ಕಟ್ಟಿಟ್ಟ ಬುತ್ತಿ,ರಾಜಿ ಮಾಡಿಕೊಳ್ಳುವ ಸಮಯದಲ್ಲಿ ಸಣ್ಣ ವಿವೇಕ ಮತ್ತು ಬುದ್ಧಿವಂತಿಕೆ ಅತಿ ಮುಖ್ಯ ಎಂದು ರಮೇಶ್ ಅರವಿಂದ್ ಹೇಳಿದರು

ಪ್ರತಿ ವರ್ಷ 250ಕ್ಕೂ ಅಧಿಕ ಚಿತ್ರ ನಿರ್ಮಾಣ

ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಚಿತ್ರರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ .ಇದೇ ವಿಷಯಕ್ಕಾಗಿ ಹಿರಿಯ ನಿರ್ದೇಶಕ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರು ಚಿತ್ರರಂಗವನ್ನು ಕಲೋದ್ಯಮ ಎಂದು ಕರೆದಿದ್ದಾರೆ ಅದು ಪ್ರಸ್ತುತವೂ ಕೂಡ.

ಮೂಕಿ ಚಿತ್ರ ಆರಂಭ ಪರಿಗಣಿಗೆ ತೆಗೆದುಕೊಂಡರೆ ಕನ್ನಡ ಚಿತ್ರರಂಗಕ್ಕೆ ನೂರು ವರ್ಷಗಳು ಪೂರ್ಣಗೊಂಡಿದೆ ಆದರೆ ಟಾಕಿ ಚಿತ್ರವನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಈಗ 90 ವರ್ಷದ ಸಂಭ್ರಮ ಈ ಒಂಬತ್ತು ದಶಕಗಳ ಅವಧಿಯಲ್ಲಿ ಬರೋಬ್ಬರಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ ಎಂದಿದ್ದರೆ ಪ್ರತಿವರ್ಷವೂ ಸುಮಾರು 250ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ ಎಂದು ಅವರು ಹೇಳಿದರು

ಸಾಮಾನ್ಯವಾಗಿ ನಾವು ಪರಭಾಷೆಯ ಚಿತ್ರಗಳು ಚೆನ್ನಾಗಿ ಬರುತ್ತಿದೆ ಅವರಂತೆ ನಾವು ಚಿತ್ರ ಮಾಡುತ್ತಿಲ್ಲ ಎನ್ನುವ ಬಗ್ಗೆ ಹಾಗಾಗಿ ಮಾತನಾಡುತ್ತೇವೆ ಆದರೆ ಇತ್ತೀಚೆಗೆ ನನಗೆ ಮಲಯಾಳಂ ,ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾ ಗಳನ್ನ ನೋಡುವ ಅವಕಾಶ ಸಿಕ್ಕಿತ್ತು ಆ ಸಮಯದಲ್ಲಿ ಅಲ್ಲಿನ ನಟ ನಟಿಯರು ತಂತ್ರಜ್ಞರ ಜೊತೆ ಮಾತನಾಡುವಾಗ ನಮ್ಮ ಸಿನಿಮಾ ರಂಗ ಸರಿ ಇಲ್ಲ ನಿಮ್ಮದೇ ಚಿತ್ರರಂಗ ಚಂದ ಎಂದು ಹೇಳುತ್ತಿದ್ದರು ಇದನ್ನೆಲ್ಲ ಗಮನಿಸಿದರೆ ಯಾವುದೇ ಚಿತ್ರರಂಗದ ಸರಾಸರಿ ಯಶಸ್ಸು ಶೇಕಡ ಐದರಿಂದ ಹತ್ತರಷ್ಟು ಮಾತ್ರ ಎಂದು ಅವರು ತಿಳಿಸಿದರು

ಹಿರಿಯ ಪತ್ರಕರ್ತ ಜೋಗಿ ಮಾತನಾಡಿ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನ ನೋಡುವ ರೀತಿಯೇ ಬೇರೆಯಾಗಿದೆ. ಚಿತ್ರವೊಂದರ ಟೀಸರ್ ಬಿಡುಗಡೆಯಾದರೆ ಆ ಕ್ಷಣವೇ ಅದರ ಸುದ್ದಿ ಬರಬೇಕು ಪತ್ರಿಕೆಯಲ್ಲಿ ನಾಳೆ ಬರುವ ತನಕ ಅವರಿಗೆ ಕಾಯಲು ಸಮಯವಿಲ್ಲ ನಾವು ಸುದ್ದಿ ಬರೆಯುವ ಸಮಯದಲ್ಲಿ ಟೀಸರ್ ನ ವೀಕ್ಷಣೆ ಲಕ್ಷ ಲಕ್ಷ ದಾಟಿರುತ್ತದೆ ಅದನ್ನು ಬರೆಯಿರಿ ಎನ್ನುವ ಒತ್ತಡವು ನಮ್ಮ ಮೇಲೆ ಇರುತ್ತದೆ .ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಕರ್ತರನ್ನು ನೋಡುವ ಸ್ಥಿತಿಯೇ ಬೇರೆಯಾಗಿದೆ ಎಂದು ಅವರು ಹೇಳಿದರು

ಸಿನಿಮಾ ನೋಡಿ ಹೊರ ಬಂದಾಗ ಕಥೆ ಹೇಗಿದೆ ಚಿತ್ರ ಹೇಗಿದೆ ಎನ್ನುವುದನ್ನು ಕೇಳುವ ಬದಲು ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ ಎಂದು ಕೇಳುವ ಪರಿಪಾಠ ಹೆಚ್ಚಾಗಿದೆ ಕನಿಷ್ಠ ಮೂರು ಸ್ಟಾರ್ ಕೊಡಲೇಬೇಕು. ವಿಮರ್ಶೆ ಮಾಡುವನ್ನು ಅರಗಿಸಿಕೊಳ್ಳುವ ಮನಸ್ಥಿತಿಯೇ ಇಲ್ಲ ಎಲ್ಲವೂ ಪರವಾಗಿಯೇ ಬರಬೇಕು ಎನ್ನುವ ಉದ್ದೇಶ ಚಿತ್ರ ತಂಡದ್ದು ಎಂದು ತಿಳಿಸಿದರು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ ಸೇರಿದಂತೆ ಪದಾಧಿಕಾರಿಗಳಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin