International honor for actor Rishabh Shetty "World's Best Kannadiga 2023" Award in USA

ನಟ ರಿಷಬ್ ಶೆಟ್ಟಿಗೆ ಅಂತರಾಷ್ಟ್ರೀಯ ಗೌರವ ಅಮೇರಿಕಾದಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ ” ಪ್ರಶಸ್ತಿ - CineNewsKannada.com

ನಟ ರಿಷಬ್ ಶೆಟ್ಟಿಗೆ ಅಂತರಾಷ್ಟ್ರೀಯ ಗೌರವ ಅಮೇರಿಕಾದಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ ” ಪ್ರಶಸ್ತಿ

ಕಾಂತಾರ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ನಟ,ನಿರ್ದೇಶಕ ರಿಷಬ್ ಶೆಟ್ಟಿ ಅವರ ಕೀರ್ತಿ ಪತಾಕೆಯನ್ನು ವಿದೇಶದಲ್ಲಿಯೂ ಹೆಚ್ಚಾಗಿದೆ. ಜೊತೆಗೆ ಅವರ ಬಗೆಗಿನ ಅಭಿಮಾನವೂ ಕೂಡ. ಇದೇ ಕಾರಣಕ್ಕಾಗಿ ಅಮೇರಿಕಾದ ಸಹ್ಯಾದ್ರಿ ಕನ್ನಡ ಸಂಘ “”ವಿಶ್ವ ಶ್ರೇಷ್ಠ ಕನ್ನಡಿಗ 2023″ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವ ಸಲ್ಲಿಸಿದೆ.

ವಾಷಿಂಗ್ಟನ್ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಇತ್ತೀಚೆಗೆ ಪತ್ನಿ ಪ್ರಗತಿ ಶೆಟ್ಟಿ ಸಮೇತ ಅಮೇರಿಕಾದ ವಾಷಿಂಗ್ಟನ್ ನ ಸಿಯಾಟಲ್‍ಗೆ ಭೇಟಿ ನೀಡಿದ ವೇಳೆ ಈ ಗೌರವ ಸಲ್ಲಿಸಲಾಗಿದೆ.ಈ ಮೂಲಕ ಅಂತರಾಷ್ಟ್ರೀಯ ಪ್ರಶಸ್ತಿಯ ಗೌರವ ಮುಡಿಗೇರಿದೆ.

ಅಮೇರಿಕಾದ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್‍ನ ಕನ್ನಡಿಗ ಮನು ಗೌರವ್ ಮತ್ತು ತಂಡ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಅಪರೂಪದ ಸಮಾರಂಭಕ್ಕ್ಲೆ ಸೆನೆಟರ್ ಡಾ.ದೆರೀಕ್ ಟ್ರಸ್ಫರ್ಡ್ ಸಾಕ್ಷಿಯಾಗಿದ್ದು .ಅಮೇರಿಕಾ ಹಾಗೂ ವಾಷಿಂಗ್ಟನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆ, ರಿಷಬ್ ಶೆಟ್ಟಿ ಅವರ “ಕಾಂತಾರ” ಸಿನಿಮಾ ಯುನಿವರ್ಸಲ್ ಸಿನಿಮಾ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ಧಾರೆ.

ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ನಟ ರಿಷಬ್ ಶೆಟ್ಟಿ ಅವರು ಅಮೇರಿಕಾದ ಕನ್ನಡಿಗರ ಶ್ರಮ, ದೂರದ ಪ್ರದೇಶದಲ್ಲಿ ಕನ್ನಡ ಉಳಿಸಲು ನಡೆಸುತ್ತಿರುವ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ಧಾರೆ.

ನಟ ರಿಷಬ್ ಶೆಟ್ಟಿ ಅವರ ಮಾತಿಗೆ,ಸಾಧನೆಯನ್ನು ಕಂಡು ಅಮೇರಿಕಾದ ಕನ್ನಡಿಗರು ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ, ಕನ್ನಡದ ಕೀರ್ತಿ ಪತಾಕೆ ಹಾರಿಸಿ ಎಂದು ಶುಭಹಾರೈಸಿದ್ಧಾರೆ.

ವಾಷಿಂಗ್ಟನ್ ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ 95 ವರ್ಷಗಳ ಇತಿಹಾಸವಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಸಾಕಷ್ಟು ಗಣ್ಯರು ಈ ಸ್ಥಳದಲ್ಲಿ ಭಾಷಣ ಮಾಡಿದ್ದರೆ. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ.

ಇಂತಹ ಇತಿಹಾಸವಿರುವ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪಡೆದಿರುವುದಕ್ಕೆ ರಿಷಬ್ ಶೆಟ್ಟಿ ಸಂತಸಪಟ್ಟಿದ್ದಾರೆ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.1800 ಕ್ಕೂ ಅಧಿಕ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin