KTM' Movie Melody Song Released: Dixit Shetty muttered "Sojiga"

ಕೆಟಿಎಂ’ ಸಿನಿಮಾದ ಮೆಲೋಡಿ ಹಾಡು ಬಿಡುಗಡೆ: ಸೋಜಿಗ ಎಂದು ಗುನುಗಿದ ದೀಕ್ಷಿತ್ ಶೆಟ್ಟಿ - CineNewsKannada.com

ಕೆಟಿಎಂ’ ಸಿನಿಮಾದ ಮೆಲೋಡಿ ಹಾಡು ಬಿಡುಗಡೆ: ಸೋಜಿಗ ಎಂದು ಗುನುಗಿದ ದೀಕ್ಷಿತ್ ಶೆಟ್ಟಿ

‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ‘ಕೆಟಿಎಂ’ ಸಿನಿಮಾ ಟೀಸರ್ ನಿಂದಲೇ ಭಾರೀ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೆಲೋಡಿ ಹಾಡು ಅನಾವರಣಗೊಂಡಿದೆ. ಸೋಜಿಗ ಎಂಬ ಸಾಂಗ್ ಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಚೇತನ್ ರಾವ್ ಮ್ಯೂಸಿಕ್ ಶ್ರಮ ಹಾಡಿಗಿದೆ. ದೀಕ್ಷಿತ್ ಹಾಗೂ ಕಾಜಲ್ ಕುಂದರ್ ಸೋಜಿಗ ಸಿಂಗಿಂಗ್ ಧಮಾಕದಲ್ಲಿ ಮಿಂಚಿದ್ದಾರೆ.

‘ಅಥರ್ವ’ ಸಿನಿಮಾ ಖ್ಯಾತಿಯ ಅರುಣ್, ಈ ‘ಕೆಟಿಎಂ’ ಚಿತ್ರ ನಿರ್ದೇಶಿಸಿದ್ದಾರೆ. ಇದು ಅರುಣ್ ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಮೊದಲ ಹಂತವಾಗಿ ಇಂಟ್ರಸ್ಟಿಂಗ್ ಟೀಸರ್ ಬಿಡುಗಡೆ ಮಾಡಿತ್ತು. ಸ್ಯಾಂಡಲ್ವುಡ್ನ 50 ಮಂದಿ ಸೆಲೆಬ್ರಿಟಿಗಳು ‘ಕೆಟಿಎಂ’ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದರು.

ನವಿರಾದ ಪ್ರೇಮ್ ಕಹಾನಿ ಒಳಗೊಂಡಿರುವ ‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಕ್ಷಿತ್, ನಾಲ್ಕು ಶೇಡ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ದೀಕ್ಷಿತ್ ಜೋಡಿಯಾಗಿ ಕಾಜಲ್ ಕುಂದರ್ ಹಾಗೂ ಸಂಜನಾ ನಟಿಸಿದ್ದಾರೆ. ಇವರನ್ನು ಹೊರತುಪಡಿಸಿ ಚಿತ್ರದಲ್ಲಿ ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

‘ಕೆಟಿಎಂ’ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin