Lokendra Surya-Shravya Rao's ``Athi'' debut; Red and White Seven Raj Productions

ಲೋಕೇಂದ್ರ ಸೂರ್ಯ-ಶ್ರಾವ್ಯ ರಾವ್‌ ಜೋಡಿಯ ʻಅಥಿʼ;ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ನಿರ್ಮಾಣ - CineNewsKannada.com

ಲೋಕೇಂದ್ರ ಸೂರ್ಯ-ಶ್ರಾವ್ಯ ರಾವ್‌ ಜೋಡಿಯ ʻಅಥಿʼ;ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ನಿರ್ಮಾಣ

ಅಥಿʼ ಆರಂಭ ಲೋಕೇಂದ್ರ ಸೂರ್ಯ-ಶ್ರಾವ್ಯ ರಾವ್‌ ಜೋಡಿ! ಗಂಡ ಮನೆಯಿಂದ ಹೋದ ಬಳಿಕ ನಡೆಯುವ ಕತೆ.ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ನಿರ್ಮಾಣದಲ್ಲಿ ಮತ್ತೊಂದು ಚಿತ್ರ

ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಎನ್ನುವ ಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಲೋಕೇಂದ್ರ ಸೂರ್ಯ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದ್ದ ಆ ಚಿತ್ರವನ್ನು ಎಲ್ಲ ವಲಯದ ಜನ ಇಷ್ಟ ಪಟ್ಟಿದ್ದರು. ನಂತರ ಲೋಕೇಂದ್ರ ಅವರು ʻಚೆಡ್ಡಿದೋಸ್ತ್‌ʼ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸಿದ್ದರು. ಆ ನಂತರ ಥ್ರಿಲ್ಲರ್‌ ಮಂಜು ಅವರ ಡೆಡ್ಲಿ ಕಿಲ್ಲರ್‌ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ಸಿಂಗಾಪೂರದಲ್ಲಿ ಕಾರ್ನಿವಲ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದ ಮತ್ತು ಹಲವು ದೇಶಗಳಲ್ಲಿ ಪ್ರಶಸ್ತಿಗಳನ್ನು ಪಡೆದ ʻಕುಗ್ರಾಮʼ ಚಿತ್ರದ ರಚನೆ ಮತ್ತು ನಿರ್ದೇಶನ ಕೂಡಾ ಇವರದ್ದೇ. ಇನ್ನೇನು ತೆರೆಗೆ ಬರಲು ಸಿದ್ದಗೊಳ್ಳುತ್ತಿರುವ ʻಬ್ರಹ್ಮಕಮಲʼ ಚಿತ್ರಕ್ಕೆ ಲೋಕೇಂದ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ನಟನೆ, ನಿರ್ದೇಶನದ ಜೊತೆಗೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡುತ್ತಿರುವ ಲೋಕೇಂದ್ರ ಸೂರ್ಯ ಈಗ ಹೊಸ ಸಿನಿಮಾವೊಂದನ್ನು ಆರಂಭಿಸಿದ್ದಾರೆ. ಸ್ವತಃ ಲೋಕೇಂದ್ರ ಅವರೇ ನಿರ್ದೇಶಿಸಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ʻಅಥಿ ಐ ಲವ್‌ ಯೂʼ ಎಂಬ ಹೆಸರನ್ನಿಡಲಾಗಿದೆ. ಫೆಬ್ರವರಿ 7ರ ಬೆಳಿಗ್ಗೆ ರಾಜಾಜಿನಗರದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಸರಳ ಪೂಜಾ ಕಾರ್ಯದೊಂದಿಗೆ ʻಅಥಿ ಐ ಲವ್‌ ಯೂʼ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ ಮ ಹರೀಶ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಭಾ ಮ ಗಿರೀಶ್‌ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ರೆಡ್‌ & ವೈಟ್‌ ಸೆವೆನ್‌ ರಾಜ್‌ ಉಪಸ್ಥಿತರಿದ್ದರು. ಇವರ ಜೊತೆಗೆ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು.

ಸೆವೆನ್‌ ರಾಜ್‌ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ, ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ʻಅಥಿ ಐ ಲವ್‌ ಯೂʼ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಯುಡಿವಿ ವೆಂಕಿ ಸಂಕಲನ, ಅನಂತ್‌ ಆರ್ಯನ್‌ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಉತ್ತಮ ಹೆಸರು ಪಡೆದಿರುವ ಎನ್.‌ ಓಂ ಪ್ರಕಾಶ್‌ ರಾವ್‌ ಅವರ ಪುತ್ರಿ ಶ್ರಾವ್ಯಾ ರಾವ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ʻʻಗಂಡ-ಹೆಂಡತಿ ನಡುವೆ ಒಂದು ದಿನದಲ್ಲಿ ನಡೆಯುವ ಕತೆ ʻಅಥಿ ಐ ಲವ್‌ ಯೂʼ ಪ್ರಧಾನ ಎಳೆಯಾಗಿದೆ. ಎರಡು ಪಾತ್ರಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಕತೆ ರೂಪಿಸಲಾಗಿದೆ. ಗಂಡ ಕೆಲಸಕ್ಕೆಂದು ಹೊರ ಹೋದ ನಂತರ ನಡೆಯುವ ಒಂದಷ್ಟು ಘಟನೆಗಳನ್ನು ರೋಚಕವಾಗಿ ತೋರಸಲಾಗುತ್ತದೆʼ ಎಂದು ಲೋಕೇಂದ್ರ ಸೂರ್ಯ ಹೇಳಿಕೊಂಡಿದ್ದಾರೆ. ʻʻಇತ್ತೀಚೆಗೆ ಹಲವಾರು ಸಿನಿಮಾಗಳ ಕತೆ ಕೇಳಿದ್ದೇನೆ. ಆದರೆ ʻಅಥಿʼ ಚಿತ್ರದ ಕತೆ ನನಗೆ ಅಪಾರವಾಗಿ ಇಷ್ಟವಾಯ್ತು. ಈ ಪಾತ್ರ ಮತ್ತು ಸಿನಿಮಾ ಎರಡೂ ಕನ್ನಡದ ಮಟ್ಟಿಗೆ ತೀರಾ ಹೊಸದಾಗಿದೆ. ಇಡೀ ಚಿತ್ರ ನನ್ನ ಪಾತ್ರದ ಮೇಲೇ ಹೆಚ್ಚು ಕ್ಯಾರಿ ಆಗುತ್ತಿರುವುದು ನನಗೆ ಖುಷಿ ಕೊಟ್ಟಿದೆʼʼ ಎಂದು ನಾಯಕಿ ಶ್ರಾವ್ಯ ರಾವ್‌ ಹೇಳಿದ್ದಾರೆ.

ಸದ್ಯ ʻಅಥಿ ಐ ಲವ್‌ ಯೂʼ ಚಿತ್ರದ ಮುಹೂರ್ತ ನೆರವೇರಿದ್ದು, ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin