Marriage again'. Screaming on Amazon Prime on June 23

- CineNewsKannada.com

ಒಟಿಟಿಗೆ ಲಗ್ಗೆ ಇಟ್ಟ ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’.. ಜೂನ್ 23ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್

ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಸಿನಿಮಾ ಒಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 23ಕ್ಕೆ ಪ್ರತಿಷ್ಠಿತ ಒಟಿಟಿ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗಲಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು.

ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು.

ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin